AgroStar
ಎಲ್ಲಾ ಬೆಳೆಗಳು
ಕೃಷಿ ಜ್ಞಾನ
ಕೃಷಿ ಚರ್ಚೆಗಳು
ಅಗ್ರಿ ಶಾಪ್
ಅಲಸಂದಿ, ಹೆಸರು ಮತ್ತು ಉದ್ದಿನ ಬೆಳೆಯಲ್ಲಿ  ಚುಕ್ಕೆಯ ಕಾಯಿ ಕೊರಕದ ನಿರ್ವಹಣೆ
ಗುರು ಜ್ಞಾನಅಗ್ರೋಸ್ಟಾರ್ ಅಗ್ರೋನೊಮಿ ಸೆಂಟರ್ ಆಫ್ ಎಕ್ಸೆಲೆನ್ಸ್
ಅಲಸಂದಿ, ಹೆಸರು ಮತ್ತು ಉದ್ದಿನ ಬೆಳೆಯಲ್ಲಿ ಚುಕ್ಕೆಯ ಕಾಯಿ ಕೊರಕದ ನಿರ್ವಹಣೆ
ಅಲಸಂದಿ, ಹೆಸರು ಮತ್ತು ಉದ್ದಿನ ಬೆಳೆಯ ಹೊಲದಲ್ಲಿ ಹೂಬಿಡುವ ಹಂತದಲ್ಲಿ ಕಾಣಬಹುದು.ವಿಶಿಷ್ಟವಾಗಿ, ಈ ಬೆಳೆಗಳಲ್ಲಿ ಚುಕ್ಕೆಯ ಕಾಯಿ ಕೊರಕದ ಹರಡುವಿಕೆಯನ್ನು ಕಾಣಬಹುದು. ಮರಿ ಹುಳು ಬೀಜ ರಂಧ್ರಗಳನ್ನು ಮಾಡುವ ಮೂಲಕ ಒಳಗಡೆ ಪ್ರವೇಶಿಸುತ್ತದೆ. ಮರಿಹುಳುಗಳು ಕಾಣುವ ಬೀಜಗಳನ್ನು ತಿನ್ನುವುದಿಲ್ಲ. ನಿಯಂತ್ರಣ ಕ್ರಮಗಳ ಕೊರತೆಯಿಂದ ಮರಿಹುಳುಗಳು ಆರ್ಥಿಕ ನಷ್ಟ ಮಾಡಬಹುದು. ಮರಿ ಹುಳು ಹಸಿರು ಬಣ್ಣದ್ದಾಗಿದ್ದು ಮೇಲೆ ಚಿಕ್ಕ ಚಿಕ್ಕ ಕೂದಲು ಹೊಂದಿರುತ್ತವೆ. ಸಂಪೂರ್ಣವಾಗಿ ಬೆಳೆದ ಮರಿಹುಳು ಅರೆಪಾರದರ್ಶಕ ಮತ್ತು ಹೊಳೆಯುವ ದೇಹ ಹೊಂದಿದ್ದು ಮೇಲೆ 6 ಸಾಲುಗಳ ಕಪ್ಪು ಚುಕ್ಕೆಗಳನ್ನು ಹೊಂದಿರುತ್ತದೆ ಮತ್ತು ಆದ್ದರಿಂದ ಇದನ್ನು ಕಪ್ಪು ಚುಕ್ಕೆಗಳ ಕಾಯಿ ಕೊರಕ ಎಂದು ಕರೆಯಲಾಗುತ್ತದೆ. ಮರಿಹುಳುಗಳು ಹೂವುಗಳು, ಮೊಗ್ಗುಗಳು ಮತ್ತು ಬೀಜಕೋಶಗಳ ಒಳಗೆ ಹೋಗುತ್ತವೆ ಮತ್ತು ಬೀಜಗಳನ್ನು ಒಳಗಿನಿಂದ ತಿನ್ನುತ್ತವೆ. ಪ್ರವೇಶ ರಂಧ್ರವನ್ನು ಲಾರ್ವಾಗಳ ಹೆಕ್ಕೆಯಿಂದ ಮುಚ್ಚಲ್ಪಡುತ್ತದೆ. ಹೆಚ್ಚಿನ ಆರ್ದ್ರ ವಾತಾವರಣದಲ್ಲಿ ತೀವ್ರ ಹಾನಿ ಕಂಡುಬರುತ್ತದೆ.. ಸಮಗ್ರ ಕೀಟ ನಿರ್ವಹಣೆ: ಕಪ್ಪು ಚುಕ್ಕೆಯ ಕಾಯಿಕೊರಕ ಕೀಟದ ಮೇಲೆ ಬ್ರಾಕೊನಿಡ್ ಕುಟುಂಬದ ಪರಾವಲಂಬಿಯಾಗಿರುವ ಎರಡು ಪರಾವಲಂಬಿ ಕೀಟಗಳು ಈ ಕೀಟದ ಸಂಖ್ಯೆಯನ್ನು ಸ್ವಾಭಾವಿಕವಾಗಿ ಕಡಿಮೆಗೊಳಿಸುತ್ತವೆ. ಪ್ರಾರಂಭದಲ್ಲಿ, 500 ಗ್ರಾಂ (5%) ಬೇವಿನ ಬೀಜದ ತಿರುಳಿನ ಕಷಾಯ ಅಥವಾ 50 ಮಿಲಿ ಬೇವಿನ ಎಣ್ಣೆ ಅಥವಾ ಬೇವಿನ ಆಧಾರಿತ ದ್ರಾವಣವನ್ನು 10 ಮಿಲಿ (1% ಇಸಿ) ರಿಂದ 40 ಮಿಲಿ (0.15% ಇಸಿ) ಅಥವಾ ಶಿಲೀಂಧ್ರ ಆಧಾರಿತ ಪುಡಿ ಬೌವೇರಿಯಾ ಬಾಸ್ಸಿಯಾನಾ @ 40 ಗ್ರಾಂ 10 ಲೀಟರ್ ನೀರಿಗೆ ಬೇರೆಸಿ ಸಿಂಪಡಿಸಬೇಕು. ಹೆಚ್ಚಿನ ಭಾದೆಯಾದಲ್ಲಿ, ಕ್ವಿನಾಲ್ಫೋಸ್ 25 ಇಸಿ @ 20 ಮಿಲಿ ಅಥವಾ ಟ್ರಯಾಜೋಫೋಸ್ 40% + ಸೈಪರ್ಮೆಥ್ರಿನ್ 4% (44%) ಇಸಿ @ 10 ಮಿಲಿ ಅಥವಾ ಲುಫೆನುರಾನ್ 5 ಇಸಿ @ 10 ಮಿಲಿ ಅಥವಾ ಮೊನೊಕ್ರೊಟೊಫಾಸ್ 36 ಎಸ್ಎಲ್ @ 10 ಮಿಲಿ ಅಥವಾ ಥಿಯೋಡಿಕಾರ್ಬ್ 75 ಡಬ್ಲ್ಯೂಪಿ @ 10 ಗ್ರಾಂ ಕ್ಲೋರಾಂಟ್ರಾನಿಲಿಪ್ರೊಲ್ 18.5 ಎಸ್ಸಿ @ 3 ಮಿಲಿ 10 ಲೀಟರ್ ನೀರಿಗೆ ಬೇರೆಸಿ ಸಿಂಪಡಿಸಬೇಕು. ವಿಶೇಷವಾಗಿ ಉದ್ದಿನ ಮತ್ತು ಅಳಸಂದಿ ಬೆಳೆಯಲ್ಲಿ ಕಪ್ಪು ಚುಕ್ಕೆಯ ಕಾಯಿಕೊರಕ ಕೀಟದ ನಿಯಂತ್ರಣಕ್ಕಾಗಿ ಇಮಾಮ್ಯಾಕ್ಟಿನ್ ಬೆಂಜೊಯೇಟ್ 5 ಡಬ್ಲ್ಯುಜಿ @ 5 ಗ್ರಾಂ ಅಥವಾ ಫ್ಲುಬೆಂಡಿಯಾಮೈಡ್ 480 ಎಸ್ಸಿ @ 2 ಮಿಲಿ ಅಥವಾ ಕ್ಲೋರಾಂಟ್ರಾನಿಲಿಪ್ರೊಲ್ 18.5 ಎಸ್ಸಿ @ 3 ಮಿಲಿ 10 ಲೀಟರ್ ನೀರಿಗೆ ಬೇರೆಸಿ ಸಿಂಪಡಿಸಿ. ಅಲಸಂದಿಯಲ್ಲಿ ಕಪ್ಪು ಚುಕ್ಕೆಯ ಕಾಯಿಕೊರಕ ಕೀಟದ ಭಾದೆ ಕಂಡುಬಂದಲ್ಲಿ, 50% ಸಸ್ಯಗಳ ಮೇಲೆ ಹೂಬಿಡುವ ಸಮಯದಲ್ಲಿ 10 ಲೀಟರ್ ನೀರಿಗೆ ಇಂಡೊಕ್ಸಾಕಾರ್ಬ್ 14.5 ಎಸ್ಸಿ @ 3.5 ಮಿಲಿ ಅಥವಾ ಸ್ಪಿನೋಸಾಡ್ 45 ಎಸ್ಸಿ @ 1.6 ಮಿಲಿ ಅಥವಾ ಎಮಾಮ್ಯಾಕ್ಟಿನ್ ಬೆಂಜೊಯೇಟ್ 5 ಎಸ್ಜಿ @ 3 ಗ್ರಾಂ ಸಿಂಪಡಿಸಿ. ಮೊದಲನೇ ಸಿಂಪಡಣೆಯ 7 ದಿನಗಳ ನಂತರ ಎರಡನೇ ಬಾರಿಗೆ ಸಿಂಪಡನೆ ಮಾಡಿ. ಹೆಸರಿನ ಬೆಳೆಯಲ್ಲಿ ಈ ಕೀಟವನ್ನು ಗಮನಿಸಿದಾಗ, 50% ಸಸ್ಯಗಳ ಮೇಲೆ ಹೂಬಿಡುವ ಸಮಯದಲ್ಲಿ 10 ಲೀಟರ್ ನೀರಿಗೆ ಕ್ಲೋರಾಂಟ್ರಾನಿಲಿಪ್ರೊಲ್ 18.5 ಎಸ್ಸಿ @ 3 ಮಿಲಿ ಅಥವಾ ಫ್ಲುಬೆಂಡಿಯಾಮೈಡ್ 480 ಎಸ್ಸಿ @ 2 ಮಿಲಿ ಸಿಂಪಡಿಸಿ.
ಮೂಲ: ಡಾ. ಟಿ. ಎಂ. ಭೋರ್ಪೋಡಾ, ಎಕ್ಸ್. ಕೀಟಶಾಸ್ತ್ರದ ಪ್ರೊಫೆಸರ್, ಬಿ. ಎ. ಕೃಷಿ ಕಾಲೇಜು, ಆನಂದ್ ಕೃಷಿ ವಿಶ್ವವಿದ್ಯಾಲಯ, ಆನಂದ್- 388 110 (ಗುಜರಾತ, ಭಾರತ) ಈ ಮಾಹಿತಿಯನ್ನು ಉಪಯುಕ್ತವೆಂದು ನೀವು ತಿಳಿದುಕೊಂಡರೆ, ಈ ಚಿತ್ರದ ಅಡಿಯಲ್ಲಿ ಹಳದಿ ಹೆಬ್ಬೆರಳಿನ ಚಿನ್ಹೆ ಮೇಲೆ ಒತ್ತಿ ಮತ್ತು ಕೆಳಗೆ ನೀಡಿರುವ ಆಯ್ಕೆಗಳನ್ನು ಬಳಸಿಕೊಂಡು ನಿಮ್ಮ ರೈತ ಸ್ನೇಹಿತರೊಂದಿಗೆ ಈ ಮಾಹಿತಿ ಯನ್ನು ಹಂಚಿಕೊಳ್ಳಿ.
194
0