AgroStar
ಎಲ್ಲಾ ಬೆಳೆಗಳು
ಕೃಷಿ ಜ್ಞಾನ
ಕೃಷಿ ಚರ್ಚೆಗಳು
ಅಗ್ರಿ ಶಾಪ್
ದಾಳಿಂಬೆಯಲ್ಲಿ ಸಮಗ್ರ ಕೀಟ ನಿರ್ವಹಣಾಕ್ರಮಗಳು
ಸಲಹಾ ಲೇಖನಅಗ್ರೋಸ್ಟಾರ್ ಅಗ್ರೋನೊಮಿ ಸೆಂಟರ್ ಆಫ್ ಎಕ್ಸೆಲೆನ್ಸ್
ದಾಳಿಂಬೆಯಲ್ಲಿ ಸಮಗ್ರ ಕೀಟ ನಿರ್ವಹಣಾಕ್ರಮಗಳು
1. ಚಾಟಣಿ ಮಾಡಿದ ನಂತರ, ಕೀಟನಾಶಕವನ್ನು ದಾಳಿಂಬೆ ಗಿಡದ ಮೇಲೆ ಸಿಂಪಡಿಸಿ, ಅಂದರೆ. ಕ್ಲೋರ್ಪಿರಿಫಾಸ್ @ 20 ಮಿಲಿ / 10 ಲೀಟರ್ ನೀರಗೆ ಬೇರೆಸಿ ಸಿಂಪಡಿಸಿ. 4 ಕೆಜಿ ಜಾಜಾ + 50 ಗ್ರಾಂ ಸಿಒಸಿ + ಕ್ಲೋರ್ಪಿರಿಫೊಸ್@ 50 ಮಿಲಿ + 5 ಮಿಲಿ ಸ್ಟಿಕ್ಕರ್ / 10 ಲೀಟರ್ ನೀರಗೆ ಬೇರೆಸಿ ತಯಾರಿಸಿ ನಂತರ ಅದನ್ನು ಮರದ ಕಾಂಡದ ಮೇಲೆ ಲೇಪಿಸಬೇಕು. 2. ಕೊಟ್ಟಿಗೆ ಗೊಬ್ಬರಕ್ಕೆ 20 ಗ್ರಾಂ ಟ್ರೈಕೊಡರ್ಮಾ + 2 ಕೆಜಿ ಬೇವಿನ ಹಿಂಡಿ ಸೇರಿಸಿ ಮತ್ತು ಚಾಟನಿಯ ಮೊದಲು ಅಥವಾ ನಂತರ ಮರದ ಸುತ್ತಲೂ ರಿಂಗ ಬೇಸಿನ ಮಾಡಿ ಗಿಡಕ್ಕೆ ಕೊಡಬೇಕು. 3. ಚೆಂಡು ಹೂ ಗಿಡಗಳನ್ನು ದಾಳಿಂಬೆಯ ಸಾಲುಗಳಲ್ಲಿ ನೆಡಬೇಕಾಗಿದೆ. 4. ಮೆಟಾರ್ಜಿಜಿಯಂ ಅನಿಸೊಪ್ಲಿಯಾ@ 60 ಗ್ರಾಂ 10 ಲೀಟರ್ ನೀರಿಗೆ ಬೇರೆಸಿ ನಂತರ ಅದನ್ನು ಮರಗಳ ಮೇಲೆ ಸಿಂಪಡಿಸಿ ಅಥವಾ ಕೀಟ ಪೀಡೆಗಳು ಹೆಚ್ಚಿದ್ದರೆ ಡೈಮೆಥೊಯೇಟ್ @ 15 ಮಿಲಿ ಅಥವಾ ಇಮಿಡಾಕ್ಲೋಪ್ರಿಡ್ 17.8 ಎಸ್ಎಲ್ @ 10 ಮಿಲಿ ಅಥವಾ ಸ್ಪಿನೋಸಾಡ್ 45% ಎಸ್ಸಿ @ 5 ಮಿಲಿ / 10 ಲೀಟರ್ ನೀರಿಗೆ ಬೇರೆಸಿ ಸಿಂಪಡಿಸಬೇಕು.
5. ಕೀಟ ಪೀಡೆ ಹೆಚ್ಚಿದ ಸಂದರ್ಭದಲ್ಲಿ, 5% ಬೇವಿನ ಬೀಜದ ಕಷಾಯ ಅಥವಾ ಅಜಾರ್ಡಿರಾಕ್ಟಿನ್@ 20 ಮಿಲಿ ಅಥವಾ ನೀಮ್ ಎಣ್ಣೆ@30 ಮಿಲಿಯನ್ನು 10 ಲೀಟರ್ ನೀರಗೆ ಬೇರೆಸಿ ವಾರಕ್ಕೊಮ್ಮೆ ಸಿಂಪಡಿಸಿ._x000D_ 6. ಹೂವುಗಳು ಮತ್ತು ಸಣ್ಣ ಹಣ್ಣುಗಳ ಮೇಲೆ ಮೊಟ್ಟೆಗಳು ಇದ್ದರೆ, ಅಜಾರ್ಡಿರಾಕ್ಟಿನ್ @ 20 ಮಿಲಿ / 10 ಲೀಟರ್ ನೀರಗೆ ಬೇರೆಸಿ ಸಿಂಪಡಿಸಿ ಅಥವಾ 5 ಪ್ರತಿಶತ ಬೇವಿನ ಬೀಜದ ಕಷಾಯವನ್ನು ಸಿಂಪಡಿಸಿ._x000D_ 7.ಕಾಂಡ ಕೊರಕದಿಂದ ಬಾಧೆಗೊಂಡ ಮರದ ಕಾಂಡದ ಮೇಲೆ ಸಣ್ಣ ರಂಧ್ರಗಳು ಅಥವಾ ಕಟ್ಟಿಗೆಯ ಧೂಳಿನ ಕಣಗಳು ಕಂಡುಬಂದರೆ, ರಂಧ್ರಗಳಿಗೆ ತಂತಿಯನ್ನು ಹಾಕಿ ಮರಿಹುಳುವನ್ನು ಸಾಯಿಸಿ ತೆಗೆದ ನಂತರ 5 ಮಿಲಿ ಸೈಪರ್‌ಮೆಥ್ರಿನ್ ಇಂಜೆಕ್ಷನ್ ಸಹಾಯದಿಂದ ರಂಧ್ರಗಳಿಗೆ ಹಾಕಬೇಕು. ರಂಧ್ರವನ್ನು ಮೇಣದೊಂದಿಗೆ ಮುಚ್ಚಿ_x000D_ 8. ಬಿಳಿ ನೊಣಕ್ಕಾಗಿ ಬೌವೆರಿಯಾ ಬಸ್ಸಿಯಾನಾ / ವರ್ಟಿಸಿಲಿಯಮ್ ಲೇಕಾನಿ @ 20 ಮಿಲಿ / 10 ಲೀಟರ್ ನೀರಿಗೆ ಬೇರೆಸಿ ಸಿಂಪಡಿಸಿ. ಈ ಮಾಹಿತಿಯನ್ನು ಉಪಯುಕ್ತವೆಂದು ನೀವು ತಿಳಿದುಕೊಂಡರೆ, ಈ ಚಿತ್ರದ ಅಡಿಯಲ್ಲಿ ಹಳದಿ ಹೆಬ್ಬೆರಳಿನ ಚಿನ್ಹೆ ಮೇಲೆ ಒತ್ತಿ ಮತ್ತು ಕೆಳಗೆ ನೀಡಿರುವ ಆಯ್ಕೆಗಳನ್ನು ಬಳಸಿಕೊಂಡು ನಿಮ್ಮ ರೈತ ಸ್ನೇಹಿತರೊಂದಿಗೆ ಈ ಮಾಹಿತಿ ಯನ್ನು ಹಂಚಿಕೊಳ್ಳಿ.
181
2