AgroStar
ಎಲ್ಲಾ ಬೆಳೆಗಳು
ಕೃಷಿ ಜ್ಞಾನ
ಕೃಷಿ ಚರ್ಚೆಗಳು
ಅಗ್ರಿ ಶಾಪ್
ಕಳೆನಾಶಕವನ್ನು ಸಿಂಪಡಿಸುವಾಗ ತೆಗೆದುಕೊಳ್ಳುವ ಕಾಳಜಿ
ಸಲಹಾ ಲೇಖನಅಗ್ರೋಸ್ಟಾರ್ ಅಗ್ರೋನೊಮಿ ಸೆಂಟರ್ ಆಫ್ ಎಕ್ಸೆಲೆನ್ಸ್
ಕಳೆನಾಶಕವನ್ನು ಸಿಂಪಡಿಸುವಾಗ ತೆಗೆದುಕೊಳ್ಳುವ ಕಾಳಜಿ
ಇತ್ತೀಚಿನ ದಿನಗಳಲ್ಲಿ, ಗ್ರಾಮೀಣ ಪ್ರದೇಶಗಳಲ್ಲಿ ಕಳೆ ತೆಗೆಯುವಾಗ ಅಥವಾ ಇತರ ಕೃಷಿ ಕೆಲಸಗಳಿಗೆ ಕಾರ್ಮಿಕರ ಕೊರತೆ ಇದೆ ಎಂದು ರೈತ ಭಾವಿಸುತ್ತಾನೆ. ಬೆಳೆಗಳಲ್ಲಿ ಕಳೆ ತೆಗೆಯಲು ಆಳುಗಳು ಸಿಗದಿದ್ದಾಗ , ರೈತರಿಗೆ ಆರ್ಥಿಕ ನಷ್ಟವನ್ನು ಎದುರಿಸುಬೇಕಾಗುತ್ತದೆ. ಆದಾಗ್ಯೂ, ಕಳೆನಾಶಕವನ್ನು ಸಿಂಪಡಿಸುವಾಗ ಈ ಕೆಳಗಿನ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕು. ಕೃಷಿ ಕೇಂದ್ರಗಳಿಂದ ಕಳೆನಾಶಕಗಳನ್ನು ಖರೀದಿಸುವಾಗ, ನಾವು ಅವಧಿ ಮೀರಿದ ಕಳೆನಾಶಕಗಳನ್ನು ಖರೀದಿಸಬಾರದು.
ವಿವಿಧ ಬೆಳೆಗಳಿಗೆ ಶಿಫಾರಸ್ಸು ಮಾಡಿದ ಕಳೆನಾಶಕಗಳನ್ನು ನಿರ್ದಿಷ್ಟ ಪ್ರಮಾಣದಲ್ಲಿ ಬಳಸಬೇಕು._x000D_ ಕಳೆನಾಶಕಗಳನ್ನು ಸಿಂಪಡಿಸುವಾಗ ಮಣ್ಣಿನಲ್ಲಿ ತೇವಾಂಶ ಇರಬೇಕು._x000D_ ಕಳೆನಾಶಕಗಳನ್ನು ಸಿಂಪಡಿಸುವ ಹೊಲಗಳಲ್ಲಿ ಪ್ರತಿವರ್ಷ ಬಹಳಷ್ಟು ಕೊಟ್ಟಿಗೆ ಗೊಬ್ಬರ, ಎರೆಹುಳು ಗೊಬ್ಬರಗಳ ಬಳಕೆಯನ್ನು ಮಾಡಬೇಕು._x000D_ ಜೋರಾದ ಗಾಳಿ ಇದ್ದಾಗ ಕಳೆನಾಶಕಗಳನ್ನು ಸಿಂಪಡಿಸಬಾರದು. ಸೂರ್ಯನ ಬೆಳಕು 2-3 ಗಂಟೆಗಳ ಕಾಲ ಇರುವ ವೇಳೆಯಲ್ಲಿ ಮಾತ್ರ ಸಿಂಪಡಿಸಬೇಕು._x000D_ ಬೆಳೆಗಳಲ್ಲಿ ಕಳೆನಾಶಕಗಳನ್ನು ಸಿಂಪಡಿಸುವಾಗ, ಇತರ ಬೆಳೆಗಳಿಗೆ ಕಳೆನಾಶಕಗಳ ಸಿಂಪಡಣೆಯು ಹೋಗದಂತೆ ಎಚ್ಚರವಹಿಸಬೇಕು._x000D_ ಕಳೆನಾಶಕಗಳನ್ನು ಸಿಂಪಡಿಸಲು ಪ್ರತ್ಯೇಕವಾಗಿ ನಾಪ್‌ಸಾಕ್ ಪಂಪ್‌ಗಳನ್ನು ಬಳಸಬೇಕು._x000D_
158
0