AgroStar Krishi Gyaan
Pune, Maharashtra
29 Dec 19, 03:00 PM
ಯಶೋಗಾಥೆನ್ಯೂಸ್18
ಪ್ರಗತಿಪರ ರೈತ ಮಹಿಳೆ ಕವಿತಾ ಮಿಶ್ರಾ ಅವರ ಯಶಸ್ಸಿನ ಕಥೆ
ಕವಿತಾ ಮಿಶ್ರಾ ವೃತ್ತಿಯಲ್ಲಿ ಎಂಜಿನಿಯರರಾಗಿದ್ದು ಅವರು ಎಂ.ಎ (ಸೈಕಾಲಜಿ) ಯಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದಾರೆ ಮತ್ತು ಮೂಲತಃ ರಾಯಚೂರು ಜಿಲ್ಲೆಯವರಾಗಿದ್ದಾರೆ. ಅವರು ಇನ್ಫೋಸಿಸ್ನಲ್ಲಿ ಕೆಲಸ ಪಡೆದರು,ಆ ಕೆಲಸವನ್ನು ತೊರೆದು ಅವರು ಬೇಸಾಯದತ್ತ ಅವರ ಪಯಣ ಪ್ರಾರಂಭಿಸಿದರು. ಅವರು 8 ಎಕರೆ ಭೂಮಿಯನ್ನು ಹೊಂದಿದ್ದಾರೆ. ನೈಸರ್ಗಿಕ ಕೃಷಿಯನ್ನು ಆಧರಿಸಿದ ತೋಟಗಾರಿಕೆ, ಅರಣ್ಯ ಬೆಳೆಗಳಲ್ಲಿನ ತನ್ನ ಕೃಷಿ ಅನುಭವದ ಪ್ರಕಾರ, ಅವರು ಸಾವಯವ ಕೃಷಿಗೆ ಹೆಚ್ಚಿನ ಪ್ರಾಧಾನ್ಯತೆಯನ್ನು ನೀಡುತ್ತಾರೆ ಮತ್ತು ಇದರ ಜೊತೆಗೆ ಅವರು ಹೈನುಗಾರಿಕೆಯನ್ನು ಸಹ ಮಾಡುತ್ತಾರೆ. ಆದ್ದರಿಂದ, ಸೀತಾಫಲ , ಪೇರಲ, ನುಗ್ಗೆಕಾಯಿ , ನೆಲ್ಲಿಕಾಯಿಯನ್ನು ಬೆಳೆಸುವುದರಿಂದ ಇತರ ಸಸ್ಯಗಳಿಗೆ ಔಷಧೀಯ ಸಸ್ಯಗಳ ಕೆಲಸವನ್ನು ಮಾಡುತ್ತವೆ ಎಂದು ಅವರು ಹೇಳುತ್ತಾರೆ; ಇದು ದಾಳಿಂಬೆಯಲ್ಲಿ ಅಂಗಮಾರಿ ರೋಗಕ್ಕೆ ಪ್ರತಿರೋಧತೆಯನ್ನು ಒದಗಿಸುತ್ತದೆ ಎಂದು ಅವರ ಕೃಷಿಯ ಅನುಭವ ಹೇಳುತ್ತಾರೆ. ಅವರ ಇನ್ನುಳಿದ ಕೃಷಿಯ ಅನುಭವವನ್ನು ನಾವು ಈ ವಿಡಿಯೋ ಮೂಲಕ ತಿಳಿದು ಕೊಳ್ಳೋಣ.
ಈ ಮಾಹಿತಿಯು ನಿಮಗೆ ಉಪಯುಕತ್ತವಾಗಿದ್ದರೆ, ಫೋಟೋದ ಕೆಳಗಿನ ಹಳದಿ ಹೆಬ್ಬೆರಳು ಗುರುತನ್ನು ಕ್ಲಿಕ್ ಮಾಡಿ ಮತ್ತು ಕೆಳಗಿನ ಆಯ್ಕೆಯ ಮೂಲಕ ನಿಮ್ಮ ಎಲ್ಲಾ ರೈತ ಸ್ನೇಹಿತರೊಂದಿಗೆ ಹಂಚಿಕೊಳ್ಳಿ!
10
1