ಸಾವಯವ ಕೃಷಿಅಗ್ರೋಸ್ಟಾರ್ ಅಗ್ರೋನೊಮಿ ಸೆಂಟರ್ ಆಫ್ ಎಕ್ಸೆಲೆನ್ಸ್
ಟ್ರೈಕೋಡರ್ಮಾ ಜೈವಿಕ ಗೊಬ್ಬರದ ಬಳಕೆ
ಪರಿಚಯ: ಪ್ರಸಕ್ತ ಹಂಗಾಮಿನ ಆರಂಭದಲ್ಲಿ, ಭಾರತದ ಎಲ್ಲೆಡೆ ತರಕಾರಿಗಳನ್ನು ಬಿತ್ತನೆ ಮಾಡುವುದನ್ನು ಗಮನಿಸಬಹುದು ಮಣ್ಣಿನಲ್ಲಿರುವ ಶಿಲೀಂಧ್ರನಾಶಕವನ್ನು ನಿಯಂತ್ರಿಸಲು, ರಾಸಾಯನಿಕ ಶಿಲೀಂಧ್ರನಾಶಕಗಳ ಪರಿಣಾಮವು ದೀರ್ಘಾವಧಿಯ ವರೆಗೂ ಪರಿಣಾಮಕಾರಿಯಾಗುವುದಿಲ್ಲ ಮತ್ತು ಮಣ್ಣಿನಲ್ಲಿನ ಸೂಕ್ಷ್ಮಜೀವಿಗಳ ಪರಿಣಾಮ ಬೀರುತ್ತವೆ. ಅಷ್ಟೇ ಅಲ್ಲ, ಹವಾಮಾನದಲ್ಲಿನ ಆವಾಗಲೇ ಆದ ಬದಲಾವಣೆಯಿಂದಾಗಿ, ಬೆಳೆ ಪದ್ಧತಿ, ರಾಸಾಯನಿಕ ಗೊಬ್ಬರಗಳ ಬಳಕೆ, ಶಿಲೀಂಧ್ರನಾಶಕಗಳು, ದಿನದಿಂದ ದಿನಕ್ಕೆ ಬೇಕಾಗುವ ಉಪಯುಕ್ತ ಸೂಕ್ಷ್ಮಾಣುಜೀವಿಗಳು ಮಣ್ಣಿನಿಂದ ಕಡಿಮೆಯಾಗುತ್ತಿವೆ. ಸಾವಯವ ಕೃಷಿಯಲ್ಲಿ ಟ್ರೈಕೊಡರ್ಮಾ ಜೈವಿಕ ಗೊಬ್ಬರವನ್ನು ವ್ಯಾಪಕವಾಗಿ ಬಳಸಲಾಗುತ್ತದೆ. ಟ್ರೈಕೊಡರ್ಮಾ ಒಂದು ಜೈವಿಕ ಗೊಬ್ಬರ ಮತ್ತು ಜೈವಿಕ ಶಿಲೀಂಧ್ರನಾಶಕವಾಗಿದ್ದು, ಇದು ಪುಡಿ ಮತ್ತು ದ್ರವ ರೂಪದಲ್ಲಿ ಮಾರುಕಟ್ಟೆಯಲ್ಲಿ ಲಭ್ಯವಿದೆ. ಈ ಲಭ್ಯವಿರುವ ಸೂತ್ರೀಕರಣಗಳನ್ನು ಬೆಳೆಗಳ ಸಮಗ್ರ ರೋಗ ನಿರ್ವಹಣೆಯಲ್ಲಿ ಮತ್ತು ಬೀಜೋಪಚಾರ ಮತ್ತು ಜೈವಿಕ ಗೊಬ್ಬರಗಳಾಗಿ ಬಳಸಲಾಗುತ್ತದೆ ಮತ್ತು ಅದನ್ನು ಹನಿ ನೀರಾವರಿ ಮೂಲಕ ಬಳಸಬಹುದು. ವಿವಿಧ ಬೆಳೆಗಳ ಬೆಳವಣಿಗೆಯ ಸಮಯದಲ್ಲಿ ಟ್ರೈಕೊಡರ್ಮಾ ವಿರಿಡೆಯ ಬಳಕೆಯನ್ನು ಕೆಳಗೆ ಪಟ್ಟಿ ಮಾಡಲಾಗಿದೆ: - 1) ಟ್ರೈಕೊಡರ್ಮಾವನ್ನು ದ್ರವ ಮತ್ತು ಪುಡಿ ರೂಪದಲ್ಲಿ ತಯಾರಿಸಲಾಗುತ್ತದೆ. ಹೆಚ್ಚಿನ ಪುಡಿ ಉತ್ಪನ್ನಗಳನ್ನು ಮಣ್ಣಿನ ಅನ್ವಯದಲ್ಲಿ ವ್ಯಾಪಕವಾಗಿ ಬಳಸಲಾಗುತ್ತದೆ; ಹನಿ ನೀರಾವರಿ ಮೂಲಕ ದ್ರವ ಸೂತ್ರೀಕರಣವನ್ನು ಬಳಸಬಹುದು. ಸಸಿಗಳನ್ನು ಸಸಿ ಮಡಿಯಿಂದ ಹೊಲಕ್ಕೆ ಸ್ಥಳಾಂತರಿಸಲು, ಬೇರುಗಳನ್ನು ಟ್ರೈಕೊಡರ್ಮಾ ವೈರೈಡ್ ದ್ರಾವಣದಲ್ಲಿ ಅದ್ದಿದ ನಂತರ ಸಸಿಗಳನ್ನು ಸ್ಥಳಾಂತರಿಸಬೇಕು. 2) 1 ಕೆಜಿ ಬೀಜವನ್ನು ಬೀಜೋಪಚಾರ ಮಾಡಲು, 5 ಗ್ರಾಂ ಟ್ರೈಕೊಡರ್ಮಾ ಪುಡಿಯನ್ನು ಬಳಸಲಾಗುತ್ತದೆ. ದಾಳಿಂಬೆ ಗಿಡಕ್ಕೆ50 ರಿಂದ 100 ಗ್ರಾಂ ಟ್ರೈಕೊಡರ್ಮಾ ಪುಡಿಯನ್ನು ಕೊಟ್ಟಿಗೆ ಗೊಬ್ಬರದೊಂದಿಗೆ ಕೊಡಬೇಕು. 3) ನರ್ಸರಿ ಸಸಿ ಮಡಿಗಳ ತಯಾರಿಕೆಯಲ್ಲಿ , ಪ್ರತಿ ಚದರ ಮೀಟರ್ ಗೆ 10 ರಿಂದ 15 ಗ್ರಾಂ ಟ್ರೈಕೊಡರ್ಮಾ ಪುಡಿಯನ್ನು ಬಳಸಬೇಕು. ಎರೆ ಹುಳು ಗೊಬ್ಬರ ಬಳಸುವಾಗ, ಅದರಲ್ಲಿ ಟ್ರೈಕೊಡರ್ಮಾ ಪುಡಿಯನ್ನು ಮಿಶ್ರಣ ಮಾಡಿ ಬಳಕೆ ಮಾಡಿ. 4) ಮಣ್ಣಿನಲ್ಲಿ ಟ್ರೈಕೊಡರ್ಮಾ ಬೆಳವಣಿಗೆಗಾಗಿ ತೇವಾಂಶ ಲಭ್ಯತೆಯ ಮೇಲೆ ಅವಲಂಬಿಸಿರುತ್ತದೆ. ಹೆಚ್ಚು ತೇವಾಂಶ, ಬೆಳವಣಿಗೆ ಉತ್ತಮವಾಗಿರುತ್ತದೆ ಮಣ್ಣಿನ ರಸ ಸಾರ 6.5 ರಿಂದ 7.5 ರ ನಡುವೆ ಇದ್ದರೆ, ಟ್ರೈಕೊಡರ್ಮಾ ಜೈವಿಕ ಗೊಬ್ಬರದ ಫಲಿತಾಂಶವು ತುಂಬಾ ಒಳ್ಳೆಯದಾಗಿರುತ್ತದೆ. 5) ಈರುಳ್ಳಿಯ ಬಿತ್ತನೆ ಮುಂಚಿತವಾಗಿ ಕಂದು ಕೊಳೆರೋಗ ಮತ್ತು ಬಿಳಿ ಕೊಳೆ ರೋಗ ಮುಂತಾದ ರೋಗಗಳ ನಿಯಂತ್ರಣಕ್ಕಾಗಿ ಟ್ರೈಕೊಡರ್ಮಾವನ್ನು ಬಳಸಬೇಕು. ಈರುಳ್ಳಿಯ ಪರಿಣಾಮಕಾರಿ ಇಳುವರಿಗಾಗಿ 2 ಕೆಜಿ ಟ್ರೈಕೊಡರ್ಮಾ ಪುಡಿಯನ್ನು 100 ಕೆಜಿ ಕೊಟ್ಟಿಗೆ ಗೊಬ್ಬರದೊಂದಿಗೆ ಹೊಲಕ್ಕೆ ಹಾಕ ಬೇಕು. 6) ನರ್ಸರಿಯಲ್ಲಿ,ಹೊಲದಲ್ಲಿ ಟ್ರೈಕೊಡರ್ಮಾ ಸೊರಗು ರೋಗ ಮತ್ತು ಸಸಿ ಸಾಯುವ ರೋಗ ನಿಯಂತ್ರಿಸಲು ಸಹಾಯ ಮಾಡುತ್ತದೆ,ತರಕಾರಿಗಳನ್ನು ಸ್ಥಳಾಂತರ ಮಾಡಿದ ನಂತರ ಟ್ರೈಕೊಡರ್ಮಾ ಪುಡಿ ನೀರಿಗೆ ಬೇರೆಸಿ ಗಿಡದ ಸುತ್ತಲು ಹಾಕಬೇಕು. 6) ಟ್ರೈಕೋಡರ್ಮಾದ ಪರಿಣಾಮವನ್ನುಹೊಲದಲ್ಲಿ ಖಚಿತಪಡಿಸಿಕೊಳ್ಳಲು, ಯಾವುದೇ ರಾಸಾಯನಿಕ ಶಿಲೀಂಧ್ರನಾಶಕವನ್ನು 15 ದಿನಗಳ ಮುಂಚಿತ ಅಥವಾ ನಂತರ ಬಳಸಬಾರದು. ಎಲೆಗಳ ಮೇಲೆ ಅಥವಾ ಹಣ್ಣಿನ ಮೇಲೆ ಬರುವ ರೋಗಗಳ ನಿಯಂತ್ರಣಕ್ಕೆ ಟ್ರೈಕೋಡರ್ಮಾವನ್ನು ಸಿಂಪಡಿಸುವುದು ಸಹ ಪ್ರಯೋಜನಕಾರಿಯಾಗಿದೆ. ಆದಾಗ್ಯೂ, ಶಿಲೀಂಧ್ರಗಳ ಬೆಳವಣಿಗೆಗೆ ಕ್ಷೇತ್ರದಲ್ಲಿ ಅನುಕೂಲಕರ ವಾತಾವರಣವನ್ನು ಹೊಂದಿರುವುದು ಅವಶ್ಯಕ. ಮೂಲ: ಶ್ರೀ ತುಷಾರ್ ಉಗಲೆ ಸಹಾಯಕ ಪ್ರಾಧ್ಯಾಪಕರು (ಕೆ.ಕೆ.ವಾಘ್ ಕೃಷಿ ಕಾಲೇಜು, ನಾಸಿಕ)
ಈ ಮಾಹಿತಿಯನ್ನು ಉಪಯುಕ್ತವೆಂದು ನೀವು ತಿಳಿದುಕೊಂಡರೆ, ಈ ಚಿತ್ರದ ಅಡಿಯಲ್ಲಿ ಹಳದಿ ಹೆಬ್ಬೆರಳಿನ ಚಿನ್ಹೆ ಮೇಲೆ ಒತ್ತಿ ಮತ್ತು ಕೆಳಗೆ ನೀಡಿರುವ ಆಯ್ಕೆಗಳನ್ನು ಬಳಸಿಕೊಂಡು ನಿಮ್ಮ ರೈತ ಸ್ನೇಹಿತರೊಂದಿಗೆ ಈ ಮಾಹಿತಿ ಯನ್ನು ಹಂಚಿಕೊಳ್ಳಿ.
146
0
ಕುರಿತು ಪೋಸ್ಟ್