ಸಾವಯವ ಕೃಷಿಅಗ್ರೋಸ್ಟಾರ್ ಅಗ್ರೋನೊಮಿ ಸೆಂಟರ್ ಆಫ್ ಎಕ್ಸೆಲೆನ್ಸ್
ಸಮಗ್ರ ಕೀಟ ನಿರ್ವಹಣೆಯಲ್ಲಿ ಮೋಹಕ ಬಲೆಯ ಬಳಕೆಯ ಮಹತ್ವ
ಹೊಲದಲ್ಲಿ ಮೋಹಕ ಬಲೆ ಬಳಸಿದರೆ, ಗಂಡು ಕೀಟವು ಹೆಣ್ಣು ಕೀಟಗಳ ಕೃತಕ ವಾಸನೆಗೆ ಆಕರ್ಷಿತವಾಗುತ್ತವೆ. ವಿವಿಧ ಕೀಟಗಳ ವಾಸನೆಯು ಪ್ರಕೃತಿಯಲ್ಲಿ ಬಹಳ ಭಿನ್ನವಾಗಿರುತ್ತದೆ. ಅಂತಹ ಕೃತಕ ಆಕರ್ಷಣಕಾರಕಗಳನ್ನು ಪ್ರಯೋಗಾಲಯದಲ್ಲಿ ವೃತ್ತಿಪರ ಮಟ್ಟದಲ್ಲಿ ತಯಾರಿಸಲಾಗುತ್ತದೆ._x000D_ ಮೋಹಕ ಬಲೆಯ ಕಾರ್ಯ ಮಾಡುವ ರೀತಿ:_x000D_ ಗಂಡು ಪತಂಗದ ಹೆಣ್ಣು ಪತಂಗ ವಾಸನೆಯಿಂದ ಆಕರ್ಷಿಸುತ್ತದೆ ಮತ್ತು ಗಂಡು ಪತಂಗ ಅದರಲ್ಲಿ ಸಿಲುಕಿಕೊಳ್ಳುತ್ತದೆ. ಮೋಹಕ ಬಲೆ ರಚನೆಯ ಪ್ರಕಾರ, ಒಮ್ಮೆ ಗಂಡು ಪತಂಗ ಸಿಲುಕಿ ಕೊಂಡರೆ ಬದುಕಲು ಸಾಧ್ಯವಿಲ್ಲ. ಗಂಡು ಪತಂಗ ಬಲೆಗೆ ಬಿದ್ದ ನಂತರ, ಗಂಡು ಹೆಣ್ಣಿನ ಮಿಲನದ ಕ್ರಿಯೆಯಲ್ಲಿ ಅಡ್ಡಿಯಾಗುತ್ತದೆ ಮತ್ತು ಮುಂದಿನ ಪೀಳಿಗೆಯನ್ನು ಉತ್ಪಾದಿಸಲು ಸಾಧ್ಯವಾಗುವುದಿಲ್ಲ, ಇದರಿಂದಾಗಿ ಕೀಟವು ಸುಲಭವಾಗಿ ನಿಯಂತ್ರಣ ಮಾಡಬಹುದು._x000D_ ಕೀಟ ನಿರ್ವಹಣೆಗಾಗಿ ಬಳಕೆ:_x000D_ ಕೀಟಗಳ ಬಾಧೆ ಹೆಚ್ಚಾದಾಗ, ಅಂತಹ ಸಮಯದಲ್ಲಿ ಹೆಣ್ಣು ಪತಂಗವನ್ನು ಹಿಡಿಯಲು ಮೋಹಕ ಬಲೆಯನ್ನು ಬಳಸಬಹುದು. ಇದಕ್ಕಾಗಿ, ಹೆಚ್ಚಿನ ಸಂಖ್ಯೆಯ ಮೋಹಕ ಬಲೆಯನ್ನು ಸ್ಥಾಪಿಸುವುದು, ಪತಂಗಗಳನ್ನು ಹಿಡಿಯಲು ಸಹಾಯ ಮಾಡುತ್ತದೆ ಮತ್ತು ಇದರಿಂದಾಗಿ ಕೀಟನಾಶಕಗಳ ಬಳಕೆ ಕಡಿಮೆಯಾಗುತ್ತದೆ. ಹೀಗಾಗಿ, ಕೀಟಗಳ ಸಂಖ್ಯೆಯಲ್ಲಿ ಗಮನಾರ್ಹ ಇಳಿಕೆ ಕಂಡುಬರುತ್ತದೆ. ವರ್ಷದುದ್ದಕ್ಕೂ ಲ್ಯೂರ್ ನ್ನು ಬಳಸುವುದು ಸುಲಭ, ಲ್ಯೂರ್ ನ್ನು ಮಾತ್ರ ನಿಯಮಿತವಾಗಿ ಬದಲಾಯಿಸ ಬೇಕಾಗುತ್ತದೆ. ರಾಸಾಯನಿಕ ಕೀಟನಾಶಕಗಳ ನಷ್ಟವು ಸಾವಯವ ಕೃಷಿಯಲ್ಲಿ ಕೀಟ ನಿಯಂತ್ರಣದ ಬಳಕೆಯನ್ನು ಕಡಿಮೆ ಮಾಡುತ್ತದೆ. ನಿಸರ್ಗದ ಸಮತೋಲನವನ್ನು ಕಾಯದಿಡಲು ಸಹಾಯ ಮಾಡುತ್ತದೆ. ಈ ಕೀಟ ನಿರ್ವಹಣಾ ವಿಧಾನವು ಬಳಸಲು ತುಂಬಾ ಸುಲಭ ಮತ್ತು ಅಗ್ಗವಾಗಿದೆ, ಮತ್ತು ಅದಕ್ಕೆ ಯಾವುದೇ ತರಬೇತಿಯ ಅಗತ್ಯವಿಲ್ಲ._x000D_ ಮೋಹಕ ಬಲೆ ಬಳಸುವಾಗ ವಹಿಸಬೇಕಾದ ಕಾಳಜಿ :_x000D_ 1) ಬೆಳೆಯಲ್ಲಿನ ಕೀಟಗಳ ಪ್ರಕಾರಕ್ಕೆ ಅನುಗುಣವಾಗಿ, ಬಲೆಗೆ ಲ್ಯೂರಿನ ಆಯ್ಕೆ ಮಾಡಬೇಕು._x000D_ 2) ಸಮೀಕ್ಷೆಗಾಗಿ, ಪ್ರತಿಯೊಂದು ರೀತಿಯ ಕೀಟಕ್ಕಾಗಿ ಹೆಕ್ಟೇರಿಗೆ 5ಮೋಹಕ ಬಲೆಗಳನ್ನು ಬಳಸಬೇಕು, _x000D_ 3) ಮೋಹಕ ಬಲೆಯನ್ನು ಸ್ಥಾಪನೆ ಮಾಡುವಾಗ ಕೈಗಳು ಪೆಟ್ರೋಲ್, ಡೀಸೆಲ್, ಆರೊಮ್ಯಾಟಿಕ್ ವಸ್ತುಗಳು, ಸುಗಂಧ ದ್ರವ್ಯ,ಈರುಳ್ಳಿ - ಬೆಳ್ಳುಳ್ಳಿ ತಂಬಾಕು ಅಂತಹ ಉಗ್ರ ವಾಸನೆಯಾಗಿರಬಾರದು, ಆದರೆ ಹೆಚ್ಚಿನ ಪ್ರಮಾಣದಲ್ಲಿ ಕೀಟಗಳನ್ನು ಸೆರೆಹಿಡಿಯಲು ಹೆಕ್ಟೇರಿಗೆ 15 ರಿಂದ 20 ಮೋಹಕ ಬಲೆ ಹೆಕ್ಟೇರ್‌ಗೆ ಬಳಸಬೇಕು._x000D_ 4) ಸಾಮಾನ್ಯವಾಗಿ ಬೆಳೆಯ ಎತ್ತರಕ್ಕಿಂತ 2 ರಿಂದ 3 ಅಡಿ ನೆಲದಿಂದ ಎತ್ತರದಲ್ಲಿ ಸ್ಥಾಪಿಸಬೇಕು. ಅಲ್ಲದೆ, ಪಕ್ಷಿಗಳು, ಸಾಕು ಬೆಕ್ಕುಗಳು, ನಾಯಿಗಳು ಮತ್ತು ಚಿಕ್ಕ ಮಕ್ಕಳಿಂದ ಬಲೆಗೆ ಹಾನಿಯಾಗದಂತೆ ಎಚ್ಚರಿಕೆ ವಹಿಸಬೇಕು._x000D_ 5) ಮೋಹಕ ಬಲೆಗೆ ಸಿಕ್ಕಿಬಿದ್ದ ಕೀಟಗಳನ್ನು 2-3 ದಿನಗಳ ನಂತರ ತೆಗೆದುಹಾಕಬೇಕು. ಮಳೆ ನೀರು ಬಲೆಗೆ ಬೀಳದಂತೆ ಗಮನ ವಹಿಸಬೇಕು._x000D_ 6) ಮಾರುಕಟ್ಟೆಯಲ್ಲಿ, ಮೋಹಕ ಬಲೆ ತೆಗೆದುಕೊಳ್ಳುವಾಗ, ಲ್ಯೂರ್ ನ್ನು ಬೆಳೆ ಮತ್ತು ಕೀಟಗಳ ಪ್ರಕಾರ ಬಳಸಿ._x000D_ ಶ್ರೀ. ತುಷಾರ್ ಉಗಳೆ , ಬೆಳೆ ಸಂರಕ್ಷಣಾ ತಜ್ಞರು.
ಈ ಮಾಹಿತಿಯನ್ನು ಉಪಯುಕ್ತವೆಂದು ನೀವು ತಿಳಿದುಕೊಂಡರೆ, ಈ ಚಿತ್ರದ ಅಡಿಯಲ್ಲಿ ಹಳದಿ ಹೆಬ್ಬೆರಳಿನ ಚಿನ್ಹೆ ಮೇಲೆ ಒತ್ತಿ ಮತ್ತು ಕೆಳಗೆ ನೀಡಿರುವ ಆಯ್ಕೆಗಳನ್ನು ಬಳಸಿಕೊಂಡು ನಿಮ್ಮ ರೈತ ಸ್ನೇಹಿತರೊಂದಿಗೆ ಈ ಮಾಹಿತಿ ಯನ್ನು ಹಂಚಿಕೊಳ್ಳಿ.
219
0
ಕುರಿತು ಪೋಸ್ಟ್