ಸಾವಯವ ಕೃಷಿಅಗ್ರಿಕಲ್ಚರ್ ಫಾರ್ ಎವ್ರಿಬಡಿ
ಬೇವಿನ ಬೀಜದ ಕಷಾಯ ತಯಾರಿಕೆ ವಿಧಾನ
ಬೇವಿನ ಬೀಜದ ಕಷಾಯ ಮಾಡುವ ಸರಳ ವಿಧಾನವು ಕೆಳಗಿನ ಹಂತಗಳನ್ನು ಒಳಗೊಂಡಿದೆ -  ಬೇವಿನ ಒಣಗಿದ ಬೀಜದ ಸಿಪ್ಪೆಯನ್ನು ತೆಗೆದು ಚೆನ್ನಾಗಿರುವ ಬೀಜಗಳನ್ನು ಆರಿಸಿಕೊಳ್ಳಬೇಕು.  ತದನಂತರ ೧ಕೆಜಿ ಬೇವಿನ ಬೀಜವನ್ನು ಪುಡಿ ಮಾಡಿ ಕೊಳ್ಳಬೇಕು ಮತ್ತು ಪುಡಿಮಾಡಿ ಕೊಳ್ಳುವ ವೇಳೆಯಲ್ಲಿ ಎಣ್ಣೆ ಹೊರಬರದಂತೆ ನೋಡಿಕೊಳ್ಳಬೇಕು. ಪುಡಿಮಾಡಿದ ಬೇವಿನ ಬೀಜವನ್ನು ೧೦ ಲೀಟರ್ ನೀರಿನಲ್ಲಿ ನೆನೆಯಿಡಬೇಕು ಮತ್ತು ೧೦ ಮಿಲಿ ನ್ಯೂಟ್ರಲ್ ಆಯ್ಡಜುವಂಟ್ (ಎಮಲ್ಸಿಫೈಯರ್, ಸ್ಪ್ರೆಡ್ಅರ್ ,ಸ್ಟಿಕೇರ್, ಇತ್ಯಾದಿ) ಮಿಶ್ರಣವನ್ನು ಬೆರೆಸಿ ಮತ್ತು ಅದನ್ನು ಚೆನ್ನಾಗಿ ಕಟ್ಟಿಗೆಯ ಸಹಾಯದಿಂದ ಕಲುಕಬೇಕು.  ಆ ಮಿಶ್ರಣವನ್ನು ಇಡೀ ರಾತ್ರಿ ನೆನೆ ಇಡಬೇಕು ಮತ್ತು ಮರುದಿನ ಶುದ್ಧವಾಗಿರುವ ಮಸ್ಲಿನ್ ಬಟ್ಟೆಯಿಂದ ಸೋಸಿಕೊಳ್ಳಬೇಕು . ಉಳಿದಿರುವ ನೀರು ಹಾಕಿ 2-3 ಬಾರಿ ಹೊರ ತೆಗೆಯಿರಿ. ನಂತರ ಗೊಬ್ಬರವಾಗಿ ಸಸ್ಯಗಳಿಗೆ ಕಷಾಯವನ್ನು ಬಳಸಿಬಹುದು
 ಬೇವಿನ ಬೀಜದ ಕಷಾಯ ಸಿಂಪರಣೆ: • ಬೇವಿನ ಬೀಜದ ಕಷಾಯವನ್ನು 1.25 % ರಿಂದ 5 % ಪ್ರತಿಶತದಷ್ಟು ಸಿಂಪಡಿಸುವುದನ್ನು ಬೆಳೆಗಳಿಗೆ ಶಿಫಾರಸ್ಸು ಮಾಡಲಾಗಿದೆ. • ಕಡಿಮೆ ಪ್ರಮಾಣದಲ್ಲಿ ತಡೆಗಟ್ಟುವಂತೆ ಮತ್ತು ಹೆಚ್ಚಿನ ಪ್ರಮಾಣದಲ್ಲಿ ರಕ್ಷಣಾತ್ಮಕವಾಗಿ, ಅಂದರೆ 5 ಪ್ರತಿಶತದವರೆಗೆ ಇದನ್ನು ಶಿಫಾರಸ್ಸು ಮಾಡಲಾಗಿದೆ. • ಒಂದೇ ದಿನದಕ್ಕಾಗಿ ಸಿಂಪಡಣೆ ಮಾಡಬೇಕು. • ಕಡಿಮೆ ಸೂರ್ಯನ ಬೆಳಕನ ತೀವ್ರತೆಯಲ್ಲಿ ಮಧ್ಯಾಹ್ನದ ಸಮಯದಲ್ಲಿ ಸಿಂಪಡಿಸಬೇಕು. • ಬೇವಿನ ಬೀಜದ ಕಷಾಯದ ಸಿಂಪಡಣೆಯ ಪರಿಣಾಮವು 7 ರಿಂದ 10 ದಿನಗಳ ವರೆಗೆ ಉಳಿಯುತ್ತದೆ; ಬೇವಿನ ಬೀಜದ ಕಷಾಯವು ಎಲ್ಲಾ ಸಸ್ಯ ಎಲೆಗಳನ್ನು ಆವರಿಸಿದೆಯೆ ಇಲ್ಲವೊ ಎನ್ನುವ ಕಾಳಜಿಯನ್ನು ತೆಗೆದುಕೊಳ್ಳಬೇಕು. ಮೂಲ: TNAU ಅಗ್ರಿಪೋರ್ಟ್ಲ್ ಈ ಮಾಹಿತಿಯನ್ನು ಉಪಯುಕ್ತವೆಂದು ನೀವು ತಿಳಿದುಕೊಂಡರೆ, ಈ ಚಿತ್ರದ ಅಡಿಯಲ್ಲಿ ಹಳದಿ ಹೆಬ್ಬೆರಳಿನ ಚಿನ್ಹೆ ಮೇಲೆ ಒತ್ತಿ ಮತ್ತು ಕೆಳಗೆ ನೀಡಿರುವ ಆಯ್ಕೆಗಳನ್ನು ಬಳಸಿಕೊಂಡು ನಿಮ್ಮ ರೈತ ಸ್ನೇಹಿತರೊಂದಿಗೆ ಈ ಮಾಹಿತಿ ಯನ್ನು ಹಂಚಿಕೊಳ್ಳಿ.
574
1
ಕುರಿತು ಪೋಸ್ಟ್