ಪಶುಸಂಗೋಪನೆಕೃಷಿ ಮತ್ತು ರೈತರ ಕಲ್ಯಾಣ ಸಚಿವಾಲಯ, ಭಾರತ ಸರ್ಕಾರ
ಒಣ ಮೇವಿನ ಪೌಷ್ಠಿಕಾಂಶದ ಮೌಲ್ಯವನ್ನು ಸುಧಾರಿಸಲು ಯೂರಿಯಾದ ಬಳಕೆ
ಕಿರು ಪರಿಚಯ : ಯೂರಿಯಾ ಬಳಕೆಯಿಂದ ತೊವಡು ಅಥವಾ ಒಣ ಮೇವಿನ ಪೌಷ್ಠಿಕಾಂಶ ಮತ್ತು ಪ್ರೋಟೀನ್ ಪ್ರಮಾಣ ಸುಮಾರು 9% ಹೆಚ್ಚುತ್ತದೆ. ಯೂರಿಯಾ ಉಪಚರಿಸಿದ ಮೇವನ್ನು ಜಾನುವಾರುಗಳಿಗೆ ನೀಡುವುದರಿಂದ ಸಾಮಾನ್ಯವಾಗಿ ನೀಡುವ ಆಹಾರ ಪೂರೈಕೆಯಲ್ಲಿ 30% ವರೆಗೆ ಕಡಿಮೆ ಮಾಡಬಹುದು.
ಉಪಚಾರ:_x000D_ ಉಪಚಾರಕ್ಕಾಗಿ 40 ಲೀಟರ್ ನೀರಿನಲ್ಲಿ 4 ಕಿಲೋ ಗ್ರಾಂ ಯೂರಿಯಾವನ್ನು ಹಾಕಿ ಕರಗಿಸಿ. ಸುಮಾರು 3 ರಿಂದ 4 ಇಂಚುಗಳಷ್ಟು ದಪ್ಪ ಪದರು ಇರುವಂತೆ ಒಂದು ಕ್ವಿಂಟಲ್ ತೊವಡನ್ನು ನೆಲದ ಮೇಲೆ ಹರಡಿ. ಈ ರೀತಿ ಹರಡಿದ ತೊವಡಿನ ಮೇಲೆ 40 ಲೀಟರ್ ಯೂರಿಯಾ ದ್ರಾವಣವನ್ನು ಸ್ಪ್ರಿಂಕ್ಲರ್ ಸಹಾಯದಿಂದ ಸಿಂಪಡಿಸಿ. ಕಾಲುಗಳಿಂದ ತೊವಡಿನ್ನು ಚೆನ್ನಾಗಿ ತುಳಿಯಿರಿ. ಈ ರೀತಿ ತುಳಿದ ತೊವಡಿನ ಮೇಲೆ ಒಂದು ಕ್ವಿಂಟಲ್ ಹುಲ್ಲನ್ನು ಹರಡಿ, 40 ಲೀಟರ್ ನೀರಿನಲ್ಲಿ 4 ಕಿಲೋ ಗ್ರಾಂ ಯೂರಿಯಾವನ್ನು ಹಾಕಿ ಕರಗಿಸಿ ಮತ್ತು ಸ್ಪ್ರಿಂಕ್ಲರ್ ಸಹಾಯದಿಂದ ಮತ್ತೆ ಯೂರಿಯಾ ದ್ರಾವಣವನ್ನು ಸಿಂಪಡಿಸಿ ಮತ್ತು ಪದರನ್ನು ತುಳಿಯಿರಿ. ತಲಾ 100 ಕೆಜಿಯ 10 ಪದರಗಳನ್ನು ಇರಿಸಿ, ದ್ರಾವಣವನ್ನು ಸಿಂಪಡಿಸಿ ಮತ್ತು ಅದನ್ನು ಒತ್ತಿರಿ._x000D_ _x000D_ ಉಪಚರಿಸಿದ ಹುಲ್ಲನ್ನು ಪ್ಲಾಸ್ಟಿಕ್ ಟರ್ಪಾಲಿನ್ನಿಂದ ಮುಚ್ಚಿ ಮತ್ತು ನೆಲಕ್ಕೆ ತಾಕಿದ ಅಂಚುಗಳ ಮೇಲೆ ಮಣ್ಣನ್ನು ಹಾಕಿ. ಇದರಿಂದ ನಂತರದ ಹಂತಗಳಲ್ಲಿ ಉತ್ಪತ್ತಿಯಾಗುವ ಅನಿಲ ಹೊರಹೋಗುವುದಿಲ್ಲ. ಒಂದು ಬಾರಿಗೆ ಕನಿಷ್ಠ ಒಂದು ಟನ್ ಹುಲ್ಲನ್ನು ಈ ರೀತಿ ಉಪಚಾರ ಮಾಡಬೇಕು. ಇದಕ್ಕೆ ಕಲ್ಲು ಅಥವಾ ಸಿಮೆಂಟಿನಿಂದ ತಯಾರಿಸಿದ ತಳ ಹೆಚ್ಚು ಸೂಕ್ತವಾಗಿದೆ ಮತ್ತು ಮುಚ್ಚಿದ ಕೋಣೆ ಹೆಚ್ಚು ಅನುಕೂಲಕರವಾಗಿದೆ. ಬೇಸಿಗೆಯ 21 ದಿನಗಳು ಮತ್ತು ಚಳಿಗಾಲ ಅಥವಾ ಮಾನ್ಸೂನ್ 26 ದಿನಗಳ ನಂತರ, ಉಪಚರಿಸಿದ ಹುಲ್ಲು ತೆರೆದಿಡಿ. ದನಕರುಗಳಿಗೆ ಮೇವನ್ನು ನೀಡುವ ಮೊದಲು ಸುಮಾರು 10 ನಿಮಿಷಗಳ ಕಾಲ ಗಾಳಿಯಲ್ಲಿ ಹರಡಿ ಅದರಲ್ಲಿರುವ ಅನಿಲ ಹೊರಹೋಗುವಂತೆ ಮಾಡಬೇಕು. ಪ್ರಾರಂಭದಲ್ಲಿ, ಜಾನುವಾರುಗಳಿಗೆ ಉಪಚರಿಸಿದ ಮೇವನ್ನು ಸ್ವಲ್ಪ ಪ್ರಮಾಣದಲ್ಲಿ ನೀಡಿ ಏಕೆಂದರೆ ಉಪಚರಿಸಿದ ಮೇವನ್ನು ತಿನ್ನುವ ರೂಢಿಯಾಗುವುದಕ್ಕಾಗಿ ಉಪಚರಿಸಿದ ಮೇವನ್ನು ಸ್ವಲ್ಪ ಪ್ರಮಾಣದಲ್ಲಿ ನೀಡಿಬೇಕಾಗುತ್ತದೆ._x000D_ _x000D_ ಮೂಲ: ಕೃಷಿ ಮತ್ತು ರೈತರ ಕಲ್ಯಾಣ ಸಚಿವಾಲಯ, ಭಾರತ ಸರ್ಕಾರ_x000D_ ಈ ಮಾಹಿತಿಯನ್ನು ಉಪಯುಕ್ತವೆಂದು ನೀವು ತಿಳಿದುಕೊಂಡರೆ, ಈ ಚಿತ್ರದ ಅಡಿಯಲ್ಲಿ ಹಳದಿ ಹೆಬ್ಬೆರಳಿನ ಚಿನ್ಹೆ ಮೇಲೆ ಒತ್ತಿ ಮತ್ತು ಕೆಳಗೆ ನೀಡಿರುವ ಆಯ್ಕೆಗಳನ್ನು ಬಳಸಿಕೊಂಡು ನಿಮ್ಮ ರೈತ ಸ್ನೇಹಿತರೊಂದಿಗೆ ಈ ಮಾಹಿತಿ ಯನ್ನು ಹಂಚಿಕೊಳ್ಳಿ.
406
0
ಕುರಿತು ಪೋಸ್ಟ್