AgroStar Krishi Gyaan
Pune, Maharashtra
03 Jan 20, 01:00 PM
ಕೃಷಿ ವಾರ್ತಾಲೋಕಮತ
ಪಿಎಂ-ಕಿಸಾನ್ ಸಮ್ಮಾನ ನಿಧಿಯ ಮೂರನೇ ಕಂತು 6 ಕೋಟಿ ರೂಪಾಯಿಗಳನ್ನು ರೈತರಿಗಾಗಿ ಬಿಡುಗಡೆ ಮಾಡಲಾಗಿದೆ
ಪ್ರಧಾನಿ ನರೇಂದ್ರ ಮೋದಿ ಅವರು ಕರ್ನಾಟಕದ ತುಮಕೂರಿನಲ್ಲಿ 6 ಕೋಟಿ ರೂಪಾಯಿಗಳನ್ನು ರೈತರಿಗಾಗಿ ಪ್ರಧಾನ್ ಮಂತ್ರಿ ಕಿಸಾನ್ ಸಮ್ಮಾನ ನಿಧಿ (ಪಿಎಂ-ಕಿಸಾನ್) ಯೋಜನೆಯ ಮೂರನೇ ಕಂತು ಬಿಡುಗಡೆ ಮಾಡಿದ್ದಾರೆ. ಇದರ ಅಡಿಯಲ್ಲಿ ರೈತರಿಗೆ ರೂ.12 ಸಾವಿರ ಕೋಟಿ ಜಾರಿ ಗೊಳಿಸಲಾಗಿದೆ. ಹೊಸ ವರ್ಷದ ಆರಂಭದಲ್ಲಿ ಧಾನ್ಯ ಬೆಳೆಗಾರರಿಗೆ ಧನ್ಯವಾದ ಅರ್ಪಿಸುತ್ತೇನೆ ಎಂದು ಪ್ರಧಾನಿ ಮೋದಿಯವರು ಹೇಳಿದರು. ಇಂದು, ನಿಮ್ಮ ಕಠಿಣ ಪರಿಶ್ರಮದಿಂದಾಗಿ, ಭಾರತದಲ್ಲಿ ಆಹಾರ ಉತ್ಪಾದನೆಯು ದಾಖಲೆಯ ಮಟ್ಟದಲ್ಲಿದೆ. ದೇಶದ ಕೃಷಿ ಕ್ಷೇತ್ರಯಲ್ಲಿ ಮುಂದೆ ಸಾಗುತ್ತಿರುವ ರೈತ ಮಿತ್ರರನ್ನು ಗೌರವಿಸಲು ನನಗೆ ಅವಕಾಶ ಸಿಕ್ಕಿದೆ ಎಂದು ಹೇಳಿದರು. ಕೃಷಿ ಕರ್ಮಣ ಪ್ರಶಸ್ತಿ ನೀಡಲು ನನಗೆ ಅವಕಾಶ ಸಿಕ್ಕಿದೆ, ಅವರ ಪ್ರಯತ್ನವನ್ನು ನಾನು ಮೆಚ್ಚುತ್ತೇನೆ. ಮೀನುಗಾರರಿಗೆ, ಗೆ ಡೀಪ್ ಸಿ ಡಿಪ್ಪಿಂಗ್ ಹಡಗು ದೋಣಿಗಳು ಮತ್ತು ಟ್ರಾನ್ಸ್‌ಪಾಂಡರ್‌ಗಳನ್ನು ಒದಗಿಸಲಾಗಿದೆ. ಇದಕ್ಕಾಗಿ ನನ್ನ ಎಲ್ಲ ಮೀನುಗಾರ ಮಿತ್ರರನ್ನು ಅಭಿನಂದಿಸುತ್ತೇನೆ. ಕೃಷಿ ಕರ್ಮಣ ಪ್ರಶಸ್ತಿಯೊಂದಿಗೆ ಕರ್ನಾಟಕದ ಭೂಮಿ ಮತ್ತೊಂದು ಸಾಧನೆಗೆ ಸಾಕ್ಷಿಯಾಗಿದೆ ಎಂದು ಅವರು ಹೇಳಿದರು. ಇಂದು, 8 ಕೋಟಿ ರೈತ ಪಾಲುದಾರರ ಖಾತೆಗೆ ಹಣವನ್ನು ಜಮಾ ಮಾಡಲಾಗಿದೆ. ಇಷ್ಟು ಕಡಿಮೆ ಸಮಯದಲ್ಲಿ ಈ ಸಾಧನೆಯನ್ನು ಸಾಧಿಸುವುದು ದೊಡ್ಡ ವಿಷಯ. ಒಟ್ಟಾರೆಯಾಗಿ ದೇಶದ 6 ಕೋಟಿ ರೈತ ಕುಟುಂಬಗಳ ಬ್ಯಾಂಕ್ ಖಾತೆಗಳಲ್ಲಿ 12 ಸಾವಿರ ಕೋಟಿ ರೂಪಾಯಿಗಳನ್ನು ಜಮಾ ಮಾಡಲಾಗಿದೆ. ಮೂಲ - ಲೋಕಮತ, 2 ಜನವರಿ 2020 ಈ ಮಾಹಿತಿಯು ನಿಮಗೆ ಉಪಯುಕ್ತವೆನಿಸಿದರೆ, ಫೋಟೋದ ಕೆಳಗಿನ ಹಳದಿ ಹೆಬ್ಬೆರಳಿನ ಗುರುತನ್ನು ಕ್ಲಿಕ್ ಮಾಡಿ ಮತ್ತು ಕೆಳಗಿನ ಆಯ್ಕೆಯ ಮೂಲಕ ನಿಮ್ಮ ಎಲ್ಲಾ ರೈತ ಸ್ನೇಹಿತರೊಂದಿಗೆ ಹಂಚಿಕೊಳ್ಳಿ!
1479
26