AgroStar Krishi Gyaan
Pune, Maharashtra
19 Feb 20, 01:00 PM
ಕೃಷಿ ವಾರ್ತಾಕೃಷಿ ಜಾಗರಣ್
ಇತ್ತೀಚಿಗೆ ವಿಜ್ಞಾನಿಗಳು ಗೋಧಿಯ ಹೊಸ ತಳಿಯನ್ನು ಅಭಿವೃದ್ಧಿಪಡಿಸಿದ್ದಾರೆ
ಮಧ್ಯಪ್ರದೇಶದ ಹೋಶಂಗಾಬಾದ್ ಜಿಲ್ಲೆಯ ಪವರ್ಖೇಡದಲ್ಲಿರುವ ಕೃಷಿ ಸಂಶೋಧನಾ ಕೇಂದ್ರದ ವಿಜ್ಞಾನಿಗಳು ಹಲವಾರು ಬಗೆಯ ಗೋಧಿಯ ತಳಿಯನ್ನು ಕಂಡುಹಿಡಿದಿದ್ದಾರೆ. ಈ ಗೋಧಿಯ ತಳಿಗೆ ಸಂಬಂಧಿಸಿದಂತೆ, ಹೊಸ ವಿಧದ ಇಳುವರಿಯು ಒಂದೂವರೆ ಪಟ್ಟು, ಅಂದರೆ ಒಂದು ಹೆಕ್ಟೇರ್‌ನಲ್ಲಿ 55 ರಿಂದ 60 ಕ್ವಿಂಟಾಲ್ ಆಗಿರುತ್ತದೆ, ಇದು ಪ್ರಸ್ತುತ ಹೆಕ್ಟೇರ್‌ಗೆ 35 ರಿಂದ 40 ಕ್ವಿಂಟಾಲ್ ಆಗಿದೆ.
ಕೇಂದ್ರ ಕೃಷಿ ಸಂಶೋಧನಾ ಕೇಂದ್ರ ದೆಹಲಿಯು ಹೊಸ ಬಗೆಯ ಗೋಧಿಯನ್ನು ಪರೀಕ್ಷಿಸಿದ ನಂತರ ಮಾನ್ಯತೆ ನೀಡಿದೆ. ಮಾನ್ಯತೆ ಪಡೆದ ನಂತರ, ಕೃಷಿ ಸಂಶೋಧನಾ ಕೇಂದ್ರ ಪವರ್ಖೇಡಾ ಮ್ಯಾನೇಜ್‌ಮೆಂಟ್ ಕಳೆದ ವರ್ಷ ಹೊಸ ಬಗೆಯ ಬೀಜಗಳನ್ನು ರೈತರಿಗೆ ಮತ್ತು ಸಹಕಾರಿ ಸಂಘಗಳಿಗೆ ವಿತರಿಸಿದ್ದು, ಅದರ ಫಲಿತಾಂಶಗಳು ಈಗ ಗೋಧಿಯ ಸಿದ್ಧ ಪೈರುಗಳಲ್ಲಿ ಕಾಣುತ್ತಿವೆ. ಗಮನಿಸಬೇಕಾದ ಸಂಗತಿಯೆಂದರೆ, ಅದೇ ವರ್ಷದಲ್ಲಿJW-1201, JW -1202 ಮತ್ತು JW-1203 ಬಗೆಯ ಗೋಧಿಯನ್ನು ಕೃಷಿ ಸಂಶೋಧನಾ ಕೇಂದ್ರ ಪವರ್ಖೇಡಾ ಅಭಿವೃದ್ಧಿಪಡಿಸಿದೆ. ಈ ತಳಿಗಳ ಕೆಲಸ ಹಲವು ವರ್ಷಗಳಿಂದ ನಡೆಯುತ್ತಿದೆ. ಈ ಹೊಸ ತಳಿಯ ಗೋಧಿಯನ್ನು ಕೇಂದ್ರ ಕೃಷಿ ಸಂಶೋಧನಾ ಕೇಂದ್ರವು ಕಳೆದ ವರ್ಷ ಪರೀಕ್ಷಿಸಿತ್ತು. ಈ ತಳಿಗಳನ್ನು ಪರೀಕ್ಷೆಯ ನಂತರ ಗುರುತಿಸಲಾಯಿತು. ಈ ಹಿಂದೆ, ಪವರ್ಖೇಡಾ ಸಂಶೋಧನಾ ಕೇಂದ್ರವು ಹಲವು ಬಗೆಯ ಗೋಧಿಯ ತಳಿಯನ್ನು ಅಭಿವೃದ್ಧಿಪಡಿಸಿದೆ. ಮೂಲ- ಕೃಷಿ ಜಾಗರಣ , 18 ಫೆಬ್ರವರಿ 2020 ನಿಮಗೆ ಈ ಮಾಹಿತಿ ಉಪಯುಕ್ತವೆನಿಸಿದರೆ ಈ ಫೋಟೋ ಅಡಿಯಲ್ಲಿರುವ ಹಳದಿ ಹೆಬ್ಬೆರಳಿನ ಚಿಹ್ನೆಯ ಮೇಲೆ ಕ್ಲಿಕ್ ಮಾಡಿ ಮತ್ತು ಕೆಳಗೆ ನೀಡಿರುವ ಆಯ್ಕೆಗಳನ್ನು ಬಳಸಿಕೊಂಡು ಇದನ್ನು ನಿಮ್ಮ ರೈತ ಸ್ನೇಹಿತರೊಂದಿಗೆ ಶೇರ್ ಮಾಡಿ.
149
14