ಗುರು ಜ್ಞಾನಅಗ್ರೋಸ್ಟಾರ್ ಅಗ್ರೋನೊಮಿ ಸೆಂಟರ್ ಆಫ್ ಎಕ್ಸೆಲೆನ್ಸ್
ನಿಮ್ಮ ಔಡಲ ಬೆಳೆಯನ್ನು ಎಲೆ ತಿನ್ನುವ ಕೀಟದಿಂದ ಹೇಗೆ ನಿರ್ವಹಣೆ ಮಾಡಬಹುದು?
ಔಡಲ ಬೆಳೆ ದೇಶದ ಅನೇಕ ಭಾಗಗಳಲ್ಲಿ ಬೆಳೆಯಲಾಗುತ್ತದೆ. ಈ ಬೆಳೆ ಕೆಲವು ರಾಜ್ಯಗಳಲ್ಲಿ ನೆಲಗಡಲೆ ಮತ್ತು ಹತ್ತಿ ಬೆಳೆಯಲ್ಲಿ ಅಂತರ ಬೆಳೆಯಾಗಿ ಬೆಳೆಯಲಾಗುತ್ತದೆ. ಕೆಲವು ರಸ ಹೀರುವ ಕೀಟಗಳ ಜೊತೆಗೆ, ಎಲೆ ತಿನ್ನುವ ಕೀಟ ಬೆಳೆಯ ಎಲೆಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಹಾನಿ ಉಂಟುಮಾಡುತ್ತದೆ.
ಇದು ತನ್ನ ದೇಹದ ಮೇಲೆ ಅನೇಕ ಬಣ್ಣಗಳ ಪಟ್ಟೆಗಳು / ಚುಕ್ಕೆಗಳನ್ನು ಹೊಂದಿದೆ. ಸಣ್ಣ ಮರಿಹುಳುಗಳು ಮತ್ತು ದೊಡ್ಡ ಮರಿಹುಳುಗಳು ಪತ್ರ ಹರಿತ್ತನ್ನು ತಿನ್ನದು ಮಾತ್ರ ಸಿರನಾಳಗಳನ್ನೂಮಾತ್ರ ಬಿಡುತ್ತವೆ. ಮರಿಹುಳುಗಳು ಔಡಲ ಕಾಯಿ ಮತ್ತು ಬೀಜಗಳ ಗುಂಪನ್ನು ಸಹ ತಿನ್ನತ್ತವೆ. ಈ ಕೀಟದ ಪ್ರೌಢ ಪತಂಗವು ನಿಂಬೆ/ಕಿತ್ತಳೆ ಹಣ್ಣುಗಳಿಂದ ರಸವನ್ನು ಹೀರಿ ಬದುಕುತ್ತವೆ. ಬೇಸಿಗೆಯಲ್ಲಿ ಬಾರೆ ಹಣ್ಣಿನ ಸಸ್ಯಗಳ ಮೇಲೆ ಸಹ ವಾಸಿಸುತ್ತವೆ._x000D_ _x000D_ ಸಮಗ್ರ ಕೀಟ ನಿರ್ವಹಣೆ:_x000D_ • ಸಾಮಾನ್ಯವಾಗಿ ಆಗಸ್ಟ್ ತಿಂಗಳ ಎರಡನೇಯ ವಾರದಲ್ಲಿ , ಬಿತ್ತನೆ ಮಾಡಿದ ಬೆಳೆಯಲ್ಲಿ ಪ್ರಮಾಣ ಕಡಿಮೆ ಇರುತ್ತದೆ._x000D_ • ಎಲೆ ಪತಂಗಗಳನ್ನು ಆಕರ್ಷಿಸಲು ಮತ್ತು ನಿಯಂತ್ರಿಸಲು ಬೆಳಕಿನ ಬಲೆಗಳನ್ನು ಸ್ಥಾಪಿಸಿ._x000D_ • ಎಲೆ ತಿನ್ನುವ ಪತಂಗಗಳ ನಿಯಂತ್ರಣಕ್ಕಾಗಿ, ಎಕರೆಗೆ ೧ ರಿಂದ ೨ ಮೋಹಕ ಬಲೆಗಳನ್ನು ಬಳಸಿ._x000D_ • ಎಲೆಗಳನ್ನು ತಿನ್ನುವ ಪತಂಗಗಳ ಮೊಟ್ಟೆ ಮತ್ತು ಮರಿಹುಳುಗಳು ಔಡಲ ಎಲೆಯ ಮೇಲೆ ಕಂಡುಬಂದರೆ, ಅವುಗಳನ್ನು ಸಂಗ್ರಹಿಸಿ ನಾಶಪಡಿಸಬೇಕು._x000D_ • ಬ್ಯಾಸಿಲಸ್ ಥುರಿಂಜಿಯೆನ್ಸಿಸ್ (ಬ್ಯಾಕ್ಟೀರಿಯಾ ಆಧಾರಿತ ಪುಡಿ) ಹೆಕ್ಟೇರಿಗೆ ೧ ರಿಂದ ೧.೫ ಕೆಜಿ ಸಿಂಪಡಿಸಿ._x000D_ • ನ್ಯೂಕ್ಲಿಯರ್ ಪಾಲಿಹೆಡ್ರೋಸಿಸ್ ವೈರಸ್ (ಎಸ್‌ಎನ್‌ಪಿವಿ) ಹೆಕ್ಟೇರ್‌ಗೆ ೨೫೦ ಎಲ್‌ಇ ಸಿಂಪಡಿಸಬೇಕು._x000D_ • ಸಾಮಾನ್ಯವಾಗಿ ಪರಭಕ್ಷಕ ಪಕ್ಷಿಗಳು ಔಡಲ ಬೆಳೆಗಳ ಮೇಲಿರುವ ಮರಿಹುಳುಗಳನ್ನು ತಿನ್ನುತ್ತವೆ. ಆದ್ದರಿಂದ, ಹೊಲದಲ್ಲಿ ಪರಭಕ್ಷಕ ಪಕ್ಷಿಗಳು ಬರುವಂತೆ ಉತ್ತೇಜಿಸುವುದು ಅವಶ್ಯಕ._x000D_ • ಬೇವಿನ ಎಣ್ಣೆ @ ೫ % ಅಥವಾ ಬೇವಿನಧಾರಿತ ಸೂತ್ರೀಕರಣ @ ೫ % @ 2 ಮಿಲಿ 5 ಲೀಟರ್ (0.5% ಇಸಿ) ಯನ್ನು 5 ಲೀಟರ್ ನೀರಿನಲ್ಲಿ ಬೇರೆಸಿ ಸಿಂಪಡಿಸಿ._x000D_ • ಔಡಲ ಬೆಳೆಯ ಮೇಲೆ ಕೀಟದ ಬಾಧೆ ಕಂಡು ಬಂದಾಗ (ಪ್ರತಿ ೪ ಸಸಿಗಳ ನಂತರ), ಕೀಟನಾಶಕವನ್ನು ಸಿಂಪಡಿಸಿ._x000D_ ಮೂಲ: ಡಾ. ಟಿ. ಎಂ. ಭೋರ್ಪೋಡಾ, ಎಕ್ಸ್. ಕೀಟಶಾಸ್ತ್ರದ ಪ್ರೊಫೆಸರ್, ಬಿ. ಎ. ಕೃಷಿ ಕಾಲೇಜು, ಆನಂದ್ ಕೃಷಿ ವಿಶ್ವವಿದ್ಯಾಲಯ, ಆನಂದ್- 388 110 (ಗುಜರಾತ, ಭಾರತ) ಈ ಮಾಹಿತಿಯನ್ನು ಉಪಯುಕ್ತವೆಂದು ನೀವು ತಿಳಿದುಕೊಂಡರೆ, ಈ ಚಿತ್ರದ ಅಡಿಯಲ್ಲಿ ಹಳದಿ ಹೆಬ್ಬೆರಳಿನ ಚಿನ್ಹೆ ಮೇಲೆ ಒತ್ತಿ ಮತ್ತು ಕೆಳಗೆ ನೀಡಿರುವ ಆಯ್ಕೆಗಳನ್ನು ಬಳಸಿಕೊಂಡು ನಿಮ್ಮ ರೈತ ಸ್ನೇಹಿತರೊಂದಿಗೆ ಈ ಮಾಹಿತಿ ಯನ್ನು ಹಂಚಿಕೊಳ್ಳಿ.
182
0
ಕುರಿತು ಪೋಸ್ಟ್