ಸಲಹಾ ಲೇಖನಅಗ್ರೋಸ್ಟಾರ್ ಅಗ್ರೋನೊಮಿ ಸೆಂಟರ್ ಆಫ್ ಎಕ್ಸೆಲೆನ್ಸ್
ಮಣ್ಣಿನ ಮಾದರಿಗಳನ್ನು ಪರೀಕ್ಷಿಸುವ ವಿಧಾನಗಳು
ಮಣ್ಣಿನ ಮಾದರಿಯನ್ನು ಆಯ್ಕೆ ಮಾಡಲು ಮಣ್ಣಿನ ಪ್ರಕಾರ ಮತ್ತು ಹಿಂದಿನ ಬೆಳೆಯ ಪದ್ಧತಿ,ರಸಗೊಬ್ಬರಗಳ ಬಳಕೆ ಮತ್ತು ಆಯ್ಕೆಮಾಡಿದ ಪ್ರತಿ ಮಾದರಿ ಪ್ರದೇಶವೂ ಏಕರೂಪವಾಗಿರಬೇಕು.  ಒಣಗಿದ ಜಾಗದಲ್ಲಿ ಅಣೆಕಟ್ಟುಗಳು, ಕಲ್ಲುಗಳು, ಆರ್ದ್ರ ಬುಗ್ಗೆಗಳು ಮತ್ತು ಮರಗಳಿಂದ ಮಣ್ಣಿನ ಮಾದರಿಗಳನ್ನು ತೆಗೆದುಹಾಕುವುದನ್ನು ತಪ್ಪಿಸಿ.  ಒಂದು ಸಸ್ಯದ ಸಂಪೂರ್ಣ ಮಣ್ಣಿನ ಮಾದರಿಯನ್ನು ಆಯ್ಕೆ ಮಾಡುವಾಗ, 15-20 ಕಡೆ ಇಂಗ್ಲೀಷ ವರ್ಣಮಾಲೆಯ Z ಆಕಾರದ ನಡೆದು ಆಯ್ಕೆಮಾಡಿ.
 ಮಣ್ಣಿನ ಮಾದರಿ ತೆಗೆದುಕೊಳ್ಳುವಾಗ ಅಗಾರ್ ಇಲ್ಲದಿದಾಗ ಪಿಕಾಸಿನ ಸಹಾಯದಿಂದ ''V ''ಆಕಾರದಲ್ಲಿ ಗುಂಡಿ ತೋಡಿ ತದನಂತರ ಮಣ್ಣಿನ ಮಾದರಿಯನ್ನು ತೆಗೆದು ಕೊಳ್ಳಿ ಮತ್ತು ಕಸಕಡ್ಡಿಯನ್ನು ಮಣ್ಣಿನಿಂದ ತೆಗೆಯಬೇಕು ಅದರಿಂದಾಗಿ ಮಣ್ಣಿನ ಮಾದರಿ ತೆಗೆದುಕೊಳ್ಳಲು ಸುಲಭವಾಗುತ್ತದೆ.  ಒಂದು ಪ್ಲಾಸ್ಟಿಕ್ ಚೀಲದಲ್ಲಿ ಸಂಗ್ರಹಿಸಿದ ಎಲ್ಲಾ ಮಾದರಿಗಳಿಂದ ಕಲ್ಲುಗಳು, ಧೂಳು ಮತ್ತು ಕಡ್ಡಿಗಳನ್ನು ತೆಗೆದುಹಾಕಬೇಕು.  ಕಸ ಕಡ್ಡಿಗಳನ್ನು ತೆಗೆದ ನಂತರ ಎಲ್ಲ ಕಡೆಯಿಂದ ಸಂಗ್ರಹಿಸಿದ ಮಣ್ಣಿನ ಮಾದರಿಗಳ್ಳನ್ನು ನಾಲ್ಕು ಸಮಾನ ಭಾಗಗಗಳಾಗಿ ಮಾಡಿ ಮತ್ತು ಅದರಿಂದ ೫೦೦ಗ್ರಾಂನಷ್ಟು ಮಣ್ಣುನ್ನು ತೆಗೆದು ಕೊಂಡು ಪ್ಲಾಸ್ಟಿಕ್ ಚೀಲದಲ್ಲಿ ಹಾಕಿ ಅದರ ಜೊತೆ ರೈತನ ಹೆಸರು ಮತ್ತು ಸರ್ವೆ ನಂಬರ್, ಬೆಳೆಯ ಹೆಸರು, ಹಳ್ಳಿಯ ಹೆಸರು, ತಾಲ್ಲೂಕಿನ ಹೆಸರು, ಜಿಲ್ಲೆಯ ಹೆಸರು ಬರೆದು ಆ ಚೀಟಿಯನ್ನು ಮಣ್ಣಿನ ಮಾದರಿಯ ಪ್ಲಾಸ್ಟಿಕ್ ಚೀಲದಲ್ಲಿ ಅಥವಾ ಚೀಲದ ಮೇಲೆ ಅಂಟಿಸಿ ಮಣ್ಣು ಮತ್ತು ನೀರು ತಪಾಸಣೆ ಪ್ರಯೋಗಾಲಯಕ್ಕೆ ಕಳುಹಿಸಬೇಕು. ಅಗ್ರೋಸ್ಟಾರ್ ಅಗ್ರೋನೋಮಿ ಎಕ್ಸೆಲೆನ್ಸ್ ಕೇಂದ್ರ ಈ ಮಾಹಿತಿಯನ್ನು ಉಪಯುಕ್ತವೆಂದು ನೀವು ತಿಳಿದುಕೊಂಡರೆ, ಈ ಚಿತ್ರದ ಅಡಿಯಲ್ಲಿ ಹಳದಿ ಹೆಬ್ಬೆರಳಿನ ಚಿನ್ಹೆ ಮೇಲೆ ಒತ್ತಿ ಮತ್ತು ಕೆಳಗೆ ನೀಡಿರುವ ಆಯ್ಕೆಗಳನ್ನು ಬಳಸಿಕೊಂಡು ನಿಮ್ಮ ರೈತ ಸ್ನೇಹಿತರೊಂದಿಗೆ ಈ ಮಾಹಿತಿ ಯನ್ನು ಹಂಚಿಕೊಳ್ಳಿ.
25
0
ಕುರಿತು ಪೋಸ್ಟ್