AgroStar Krishi Gyaan
Pune, Maharashtra
09 Jun 19, 06:00 PM
ಪಶುಸಂಗೋಪನೆಗಾವ ಕನೆಕ್ಷನ್
ಜಾನುವಾರುಗಳ ಹೊಟ್ಟೆಯಲ್ಲಿನ ಜಂತುಗಳ ತಡೆಗಟ್ಟುವಿಕೆ
ಪಶುಗಳಿಗೆ ಹೊಟ್ಟೆ ಜಂತು ಹುಳುಗಳುಗಳಿಗಾಗಿ ಜಂತುನಾಶಕ ಔಷಧಿಗಳನ್ನು ನೀಡಲಾಗುವುದಿಲ್ಲ. ಇದರಿಂದಾಗಿ ಪಶುಗಳ ಆರೋಗ್ಯದ ತೊಂದರೆಯ ಜೊತೆಗೆ ಪಶುಪಾಲಕರಿಗೆ ಆರ್ಥಿಕ ನಷ್ಟವನ್ನುಂಟು ಮಾಡುತ್ತದೆ. ಜಾನುವಾರುಗಳ ಹೊಟ್ಟೆಯಲ್ಲಿ ಪರಾವಲಂಭಿ ಜಂತುಗಳ ಬಾಧೆಯಿಂದ ಸಮಸ್ಯೆಗಳಾಗುತ್ತವೆ. ಜಾನುವಾರುಗಳಿಗೆ ಜಂತುನಾಶಕ ಔಷಧಿಗಳನ್ನು ನೀಡಿದರೆ, ಪಶು ಸಂಗೋಪನೆಯು ಲಾಭದಾಯಕವಾಗಿರುತ್ತದೆ. ಜಾನುವಾರುಗಳಲ್ಲಿನ ಹೊಟ್ಟೆ ಜಂತುಗಳ ಸಮಸ್ಯೆ ಇದ್ದಾಗ ಹುಳುಗಳು ಪಶುಆಹಾರದ 30% ರಿಂದ 40% ರಷ್ಟು ತಿನ್ನುತ್ತವೆ ಅದಕ್ಕಾಗಿ ಸರಿಯಾದ ಸಮಯಕ್ಕೆ ಜಂತುನಾಶಕ ಔಷಧಿಗಳನ್ನು ನೀಡುವುದರಿಂದ ಜಾನುವಾರುಗಳಲ್ಲಿ ಹೊಟ್ಟೆ ಜಂತುಗಳಿಂದಾಗುವ ಸಮಸ್ಯೆಗಳನ್ನು ಕಡಿಮೆ ಮಾಡಬಹುದು. ಜಾನುವಾರುಗಳಲ್ಲಿನ ಪರಾವಲಂಭಿ ಜಂತುಗಳ ಲಕ್ಷಣಗಳು: • ಜಾನುವಾರು ಮಣ್ಣನ್ನು ತಿನ್ನಲು ಪ್ರಾರಂಭಿಸಿದಾಗ • ಜಾನುವಾರು ಸುಸ್ತು ಮತ್ತು ದುರ್ಬಲವಾಗಿ ಕಂಡುಬರುತ್ತವೆ. • ದುರ್ವಾಸನೆ, ಜಲಯುಕ್ತ ಮತ್ತು ಹಸಿರು ಅತಿಸಾರ. • ಕಂದು ಮಿಶ್ರಿತ ಕೆಂಪು ಬಣ್ಣದ ರಕ್ತ ಮತ್ತು ಹುಳುಗಳು ಸಗಣಿ ಕಾಣಿಸಿಕೊಳ್ಳುತ್ತವೆ. • ಮೇವು ಸೇವಿಸುತ್ತಿದ್ದರೂ ದೇಹದ ಬೆಳವಣಿಗೆ ಕಡಿಮೆಯಾಗುತ್ತದೆ ಮತ್ತು ಹೊಟ್ಟೆಯ ಗಾತ್ರ ಹೆಚ್ಚಾಗುತ್ತದೆ. • ರಕ್ತಹೀನತೆ • ಹಾಲಿನ ಉತ್ಪಾದನೆಯು ಕಡಿಮೆಯಾಗಲಾರಂಭಿಸುತ್ತದೆ •ಗರ್ಭಾವಸ್ಥೆಯ ಸಮಯದಲ್ಲಿ ಸಮಸ್ಯೆ.
ಪ್ರಮುಖ ಅಂಶಗಳು:  ಹೊಟ್ಟೆ ಜಂತುಗಳನ್ನು ತಡೆಗಟ್ಟಲು ಪ್ರತಿ ಮೂರು ತಿಂಗಳಿಗೊಮ್ಮೆ ಸೂಕ್ತ ಜಂತುನಾಶಕ ಔಷಧಿಗಳನ್ನು ನೀಡಬೇಕು.  ಸಣ್ಣ ಡಬ್ಬದಲ್ಲಿ ಸಂಗ್ರಹಿಸಿದ ಸಗಣಿ ಪರೀಕ್ಷಿಸಿದ ನಂತರ ಜಂತುನಾಶಕ ಔಷಧಿಗಳನ್ನು ನೀಡಬೇಕು.  ಪಶುವೈದ್ಯರಿಂದ ವೈದ್ಯಕೀಯ ಪರೀಕ್ಷೆಯ ನಂತರ ಮಾತ್ರ ದುರ್ಬಲ ಮತ್ತು ಅನಾರೋಗ್ಯ ದಿಂದ ಬಳಲುತ್ತಿರುವ ಜಾನುವಾರುಗಳಿಗೆ ಔಷಧಿಯನ್ನು ನೀಡಬೇಕು.  ಜಾನುವಾರುಗಳಿಗೆ ಜಂತುನಾಶಕ ಔಷಧಿಗಳನ್ನು ಲಸಿಕೆ ಮುಂಚೆ ನೀಡಬೇಕು ಮತ್ತು ಲಸಿಕೆ ನಂತರ ನೀಡಬಾರದು.  ಲಸಿಕೆ ನಂತರ ತಕ್ಷಣ ಔಷಧಿಗಳನ್ನು ನೀಡಬಾರದು; ಲಸಿಕೆಯ 15 ದಿನಗಳ ನಂತರ ನೀಡಬೇಕು.  ಪಶುವೈದ್ಯರ ಸಲಹೆಯ ನಂತರ ಮಾತ್ರ ಜಂತುನಾಶಕ ಔಷಧಿಗಳನ್ನು ನೀಡಿ.  ಜಾನುವಾರುಗಳಿಗೆ ತಾಜಾ ಮೇವು ಮತ್ತು ಧಾನ್ಯಗಳನ್ನು ನೀಡಬೇಕು.  ಶುದ್ಧ ಕುಡಿಯುವ ನೀರನ್ನು ಒದಗಿಸಿ. ಮೂಲ: ಗಾಂವ ಕನೆಕ್ಷನ್ ಈ ಮಾಹಿತಿಯನ್ನು ಉಪಯುಕ್ತವೆಂದು ನೀವು ತಿಳಿದುಕೊಂಡರೆ, ಈ ಚಿತ್ರದ ಅಡಿಯಲ್ಲಿ ಹಳದಿ ಹೆಬ್ಬೆರಳಿನ ಚಿನ್ಹೆ ಮೇಲೆ ಒತ್ತಿ ಮತ್ತು ಕೆಳಗೆ ನೀಡಿರುವ ಆಯ್ಕೆಗಳನ್ನು ಬಳಸಿಕೊಂಡು ನಿಮ್ಮ ರೈತ ಸ್ನೇಹಿತರೊಂದಿಗೆ ಈ ಮಾಹಿತಿ ಯನ್ನು ಹಂಚಿಕೊಳ್ಳಿ.
845
0