ಪಶುಸಂಗೋಪನೆhpagrisnet.gov.in
ಜಾನುವಾರುಗಳಲ್ಲಿ ಚಪ್ಪೆರೋಗ
ಕ್ಲಾಸ್ಪ್ರಿಡಿಯಂ ಚಾವಯ್ ಎಂಬ ಸೂಕ್ಷ್ಮಾಣು ಜೀವಿನಿಂದ ಆಕಳು ಮತ್ತು ಎಮ್ಮೆಗಳಲ್ಲಿ ಕಂಡು ಬರುತ್ತದೆ. ಮುಖ್ಯವಾಗಿ ಇದು ಜೂನ್ ನಿಂದ ನವೆಂಬರ್ ವರೆಗೆ ಪ್ರತಿ ವರ್ಷವು ಕಾಣಿಸಿಕೊಳ್ಳುತ್ತದೆ. ಸೂಕ್ಷ್ಮಾಣುಗಳಿರುವ ನೀರು ಮತ್ತು ಆಹಾರ ಸೇವಿಸುವುದರಿಂದ ಈ ರೋಗ ಆಕಳು ಮತ್ತು ಎಮ್ಮೆಗಳಲ್ಲಿ ಹರಡುತ್ತದೆ. ಕರುಗಳಲ್ಲಿ ಮತ್ತು ಎಳೆಯ ವಯಸ್ಸಿನ ದನಕರುಗಳಲ್ಲಿ ಈ ರೋಗದ ಬಾಧೆ ಹೆಚ್ಚಾಗಿ ಕಾಣಿಸಿ ಕೊಳ್ಳುತ್ತದೆ. ರೋಗದ ಲಕ್ಷಣಗಳು ದನಕರುಗಳಲ್ಲಿ ಅತಿಯಾದ (೧೦೬ ಫೆ ) ಜ್ವರ ಮತ್ತು ದನಗಳ ದೊಡ್ಡ ಮಾಂಸ ಖಂಡಗಳ ಮೇಲೆ ಕೈಯಾಡಿಸಿದಾಗ ಫರ್ ಫರ್ ಶಬ್ದವು ಕೇಳಿಸುತ್ತದೆ. ಕುಂಟುವುದು ಮತ್ತು ಮಲಗುವುದು, ಆಹಾರ ಸೇವನೆಯನ್ನು ಮಾಡುವುದ್ದಿಲ್ಲ. ಹಾಲು ಕೊಡುವ ಪ್ರಮಾಣವು ಕಡಿಮೆಯಾಗುತ್ತದೆ. ಸೂಕ್ತ ಸಮಯದಲ್ಲಿ ಚಿಕಿತ್ಸೆ ದೊರಕದಿದ್ದಲ್ಲಿ ಆಕಳ ಹಾಗು ಎಮ್ಮೆಯ ಸಾವು ಕೂಡ ಸಂಭವಿಸಬಹುದು. ರೋಗದ ಹತೋಟಿ ಕ್ರಮಗಳು: ಚಪ್ಪೆ ರೋಗದ ಲಸಿಕೆಯನ್ನು ಪ್ರತಿ ವರ್ಷ ಮುಂಗಾರು ಮಳೆ ಆರಂಭವಾಗುವ ಮುನ್ನವೇ ಹಾಕಿಸಬೇಕು. ಚಪ್ಪೆ ರೋಗದಿಂದ ಬಳಲುತ್ತಿರುವ ದನಕರುಗಳನ್ನು ಅರೋಗ್ಯವಂತ ದನಕರುಗಳೊಂದಿಗೆ ಇಡಬಾರದು , ಬೇರ್ಪಡಿಸಿಡಬೇಕು ಮತ್ತು ತಕ್ಷಣ ಪಶು ವೈದ್ಯರ ಭೇಟಿಗೆ ಕರೆದು ಕೊಂಡು ಹೋಗಬೇಕು. ಮೂಲ: hpagrisnet.gov.in
ಈ ಮಾಹಿತಿಯನ್ನು ಉಪಯುಕ್ತವೆಂದು ನೀವು ತಿಳಿದುಕೊಂಡರೆ, ಈ ಚಿತ್ರದ ಅಡಿಯಲ್ಲಿ ಹಳದಿ ಹೆಬ್ಬೆರಳಿನ ಚಿನ್ಹೆ ಮೇಲೆ ಒತ್ತಿ ಮತ್ತು ಕೆಳಗೆ ನೀಡಿರುವ ಆಯ್ಕೆಗಳನ್ನು ಬಳಸಿಕೊಂಡು ನಿಮ್ಮ ರೈತ ಸ್ನೇಹಿತರೊಂದಿಗೆ ಈ ಮಾಹಿತಿ ಯನ್ನು ಹಂಚಿಕೊಳ್ಳಿ.
249
0
ಕುರಿತು ಪೋಸ್ಟ್