ಗುರು ಜ್ಞಾನಅಗ್ರೋಸ್ಟಾರ್ ಅಗ್ರೋನೊಮಿ ಸೆಂಟರ್ ಆಫ್ ಎಕ್ಸೆಲೆನ್ಸ್
ಹತ್ತಿಯ ಗುಲಾಬಿ ಕಾಯಿಕೊರಕದ ನಿರ್ವಹಣೆಗಾಗಿ ಬಿತ್ತನೆ ಮಾಡುವ ಮುಂಚೆ ತೆಗೆದುಕೋಳ್ಳುವ ಮುನ್ನೆಚ್ಚರಿಕೆಯ ಕ್ರಮಗಳು
ಕಳೆದ ವರ್ಷದಲ್ಲಿ ಬಾಧೆಗೊಂಡಿರುವ ಪ್ರದೇಶದಲ್ಲಿ ಹತ್ತಿಯ ಗುಲಾಬಿ ಕಾಯಿಕೊರಕ ಬಾಧೆಯಾಗಿರಬಹುದು . ಆದ್ದರಿಂದ, ರೈತರು ಈ ಕೀಟಕ್ಕಾಗಿ ಕೆಲವು ಮುನ್ನೆಚ್ಚರಿಕೆಯ ಕ್ರಮಗಳನ್ನು ತೆಗೆದುಕೊಳ್ಳಬೇಕು.  ಹತ್ತಿಯ ಕಟ್ಟಿಗೆಗಳು ಇನ್ನು ನಿಮ್ಮ ಹೊಲದಲ್ಲಿಯೇ ಅಥವಾ ಬದುಗಳಲ್ಲಿದ್ದರೆ, ಅವುಗಳನ್ನು ನಾಶಪಡಿಸಿ.  ಸಣ್ಣ ಗಾತ್ರದ ಹತ್ತಿ ಕಟ್ಟಿಗೆಗಳನ್ನು ಕೊಡಲಿಯ ಸಹಾಯದಿಂದ ತುಂಡುಗಳನ್ನು ಮಾಡಿ ಮತ್ತು ಸಾವಯವ ಗೊಬ್ಬರವನ್ನು ತಯಾರಿಸಲು ಉಪಯೋಗಿಸಿ.  ಹತ್ತಿಯ ನೂಲು ತೆಗೆಯುವುವ ಕಾರ್ಖಾನೆಗಳ ಆವರಣದಲ್ಲಿ ಮೋಹಕ ಬಲೆಗಳನ್ನು ಸ್ಥಾಪಿಸಿ.  ಪ್ಲಾಸ್ಟಿಕ್ ಹಾಳೆಯಿಂದ ಹತ್ತಿ ಕಟ್ಟಿಗೆಗಳಿಂದ ತುಂಡುಗಳ ಮುಚ್ಚಿ ಮತ್ತು ಅದನ್ನು ಇಂಧನಕ್ಕಾಗಿ ಸಂಗ್ರಹಿಸಿಡಬಹುದು .
 ಮುನ್ನಚಿತವಾಗಿ ಕಟಾವಿಗೆ ಬರುವ ತಳಿಗಳನ್ನು ಆಯ್ಕೆ ಮಾಡಿ.  ಸಮಯಕ್ಕೆ ಸರಿಯಾಗಿ ಬಿತ್ತನೆ ಮಾಡಿ ; ಬೇಗನೆ ಬಿತ್ತನೆ ಮಾಡುವುದರಿಂದ ಬಾಧೆ ಹೆಚ್ಚಾಗುತ್ತದೆ.  ಬಿಟಿ-ಹತ್ತಿ ಬೀಜಗಳನ್ನು ಬಿತ್ತುವುದರ ಜೊತೆಗೆ ಬಿಟಿ ರಹಿತ ಹತ್ತಿ ಬೀಜಗಳನ್ನು ರೆಫ್ಯೂಜಿಯಾ ಬೀಜಗಳಾಗಿ ಬಿತ್ತಿ ಪ್ಯಾಕೆಟ್ನಲ್ಲಿ ಒದಗಿಸದ ಪ್ರಮಾಣದಲ್ಲಿ ಬಳಸಿ.  ಸಮತೋಲಿತ ರಸಗೊಬ್ಬರ ಮತ್ತು ನೀರಾವರಿ ಬಳಸಿ.  ಬೆಳೆ ಪಲ್ಲಟನೆಯನ್ನು ಮತ್ತು ಹತ್ತಿಯಲ್ಲಿ ಸರಿಯಾದ ಅಂತರವನ್ನು ಅನುಸರಿಸಿ. ಡಾ. ಟಿ. ಎಂ. ಭೋರ್ಪೋಡಾ, ಎಕ್ಸ್. ಕೀಟಶಾಸ್ತ್ರದ ಪ್ರೊಫೆಸರ್, ಬಿ. ಎ. ಕೃಷಿ ಕಾಲೇಜು, ಆನಂದ್ ಕೃಷಿ ವಿಶ್ವವಿದ್ಯಾಲಯ, ಆನಂದ್- 388 110 (ಗುಜರಾತ, ಭಾರತ) ಈ ಮಾಹಿತಿಯನ್ನು ಉಪಯುಕ್ತವೆಂದು ನೀವು ತಿಳಿದುಕೊಂಡರೆ, ಈ ಚಿತ್ರದ ಅಡಿಯಲ್ಲಿ ಹಳದಿ ಹೆಬ್ಬೆರಳಿನ ಚಿನ್ಹೆ ಮೇಲೆ ಒತ್ತಿ ಮತ್ತು ಕೆಳಗೆ ನೀಡಿರುವ ಆಯ್ಕೆಗಳನ್ನು ಬಳಸಿಕೊಂಡು ನಿಮ್ಮ ರೈತ ಸ್ನೇಹಿತರೊಂದಿಗೆ ಈ ಮಾಹಿತಿ ಯನ್ನು ಹಂಚಿಕೊಳ್ಳಿ.
529
0
ಕುರಿತು ಪೋಸ್ಟ್