ಗುರು ಜ್ಞಾನಅಗ್ರೋಸ್ಟಾರ್ ಅಗ್ರೋನೊಮಿ ಸೆಂಟರ್ ಆಫ್ ಎಕ್ಸೆಲೆನ್ಸ್
ಎಲೆ ತಿನ್ನುವ ಮರಿಹುಳುಗಳಿಗಾಗಿ ವಿಷ ಪಾಷಾಣ ತಯಾರಿಕೆ
ಎಲೆ ತಿನ್ನುವ ಮರಿಹುಳುಗಳು ಮತ್ತು ಸೈನಿಕ ಮರಿಹುಳುಗಳು ಔಡಲ, ಹತ್ತಿ, ಭತ್ತ, ಲೂಸರ್ನ್, ತಂಬಾಕು, ತರಕಾರಿ ನರ್ಸರಿಗಳು, ಎಲೆಕೋಸು, ಹೂಕೋಸು, ವಿವಿಧ ಬೆಳೆಯ ಬೀಜಗಳು,ಆಲೂಗಡ್ಡೆ, ಬಾಳೆಹಣ್ಣು,ಗೋಧಿ, ಮೆಕ್ಕೆಜೋಳ, ಸಜ್ಜೆ , ಜೋಳ, ನೆಲಗಡಲೆ, ಸೋಯಾಬೀನ್ ಮುಂತಾದ ಬೆಳೆಗಳಿಗೆ ಹಾನಿಯನ್ನುಂಟುಮಾಡುತ್ತವೆ. . ಹೆಣ್ಣು ಪತಂಗವು ಎಲೆಗಳ ಕೆಳಗಿನ ಮೇಲ್ಮೈಯಲ್ಲಿ ಗುಂಪುಗಳಲ್ಲಿ ಸುಮಾರು 200-300 ಮೊಟ್ಟೆಗಳನ್ನು ಇಡುತ್ತದೆ. ಮೊಟ್ಟೆಯ ರಾಶಿಗಳ ಮೇಲೆ ರೇಷ್ಮೆ ಕೂದಲಿನಂತಹ ಹೊದಿಕೆ ಇರುತ್ತದೆ ಮತ್ತು ಆದ್ದರಿಂದ ನೈಸರ್ಗಿಕ ಶತ್ರುಗಳಿಂದ ರಕ್ಷಣೆ ಮತ್ತು ಕೀಟನಾಶಕಗಳ ಕನಿಷ್ಠ ಪರಿಣಾಮವೂ ಮೊಟ್ಟೆಗಳ ಮೇಲೆ ಆಗುತ್ತದೆ. ಹೊರ ಬರುವ ಮರಿಹುಳುಗಳು ಒಟ್ಟುಗೂಡಿ ಎಲೆಗಳ ಎಪಿಡರ್ಮಲ್ ಪದರದ ಮೇಲೆ ಕೊರೆದು ತಿನ್ನುತ್ತವೆ . ನಂತರ, ದೊಡ್ಡ ಮರಿಹುಳುಗಳು ಸಸ್ಯದ ಎಲ್ಲ ಭಾಗಗಳಿಗೆ ಹರಡುತ್ತವೆ ಮತ್ತು ಇತರ ಸಸ್ಯಗಳಿಗೆ ವಲಸೆಗೂ ಹೋಗುತ್ತವೆ. ದೊಡ್ಡ ಮರಿಹುಳುಗಳು ಹೊಟ್ಟೆಬಾಕತನದ ಸ್ವಭಾವದ ಈ ಹುಳು ಶೀಘ್ರದಲ್ಲೇ ಬೆಳೆಗಳನ್ನು ವಿರೂಪಗೊಳಿಸುತ್ತವೆ.ಅವು ಮಣ್ಣಿನಲ್ಲಿ ಕೋಶಾವಸ್ಥೆಯ ರೂಪದಲ್ಲಿ ಬದುಕುಳಿಯುತ್ತವೆ ಮತ್ತು ಆಲೂಗೆಡ್ಡೆ ಗೆಡ್ಡೆ ಬೆಳೆಗಳಿಗೆ ಹಾನಿಯನ್ನುಂಟುಮಾಡುತ್ತವೆ. ಭತ್ತದಂತಹ ಬೆಳೆಯಲ್ಲಿ, ಅವುಗಳು ಒಂದು ಹೊಲ ದಿಂದ ಮತ್ತೊಂದು ಹೊಲಕ್ಕೆ ಗುಂಪು ಗುಂಪಾಗಿ ರೂಪದಲ್ಲಿ ವಲಸೆ ಹೋಗುತ್ತವೆ.
ಅದಕ್ಕಾಗಿ ಪ್ರಾರಂಭದಿಂದಲೇ ಕಾಳಜಿಯನ್ನು ತೆಗೆದುಕೊಳ್ಳದಿದ್ದರೆ, ಯಾವುದೇ ಕೀಟನಾಶಕಗಳು ತೃಪ್ತಿದಾಯಕ ಫಲಿತಾಂಶವನ್ನು ನೀಡುವುದಿಲ್ಲ. ಕೋಶಾವಸ್ಥೆಯ ಹಂತವು ಮಣ್ಣಿನಲ್ಲಿ ಇರುವುದರಿಂದ ಮತ್ತು ಆದ್ದರಿಂದಾಗಿ ಸಮಗ್ರ ನಿರ್ವಹಣೆಯಲ್ಲಿ ಪರಿಣಾಮಕಾರಿಯಾಗಿರುವುದಿಲ್ಲ.ಪ್ರೌಢ ಕೀಟಗಳು ರಾತ್ರಿಯ ಹೊತ್ತಲ್ಲಿ ಹೊಟ್ಟೆಬಾಕತನದಿಂದ ತಿನ್ನುವ ಸ್ವಭಾವದವರಾಗಿರುವುದರಿಂದ ಅವುಗಳನ್ನು ನಿಯಂತ್ರಿಸುವುದು ತುಂಬಾ ಕಷ್ಟ. ಈ ವಿಶಿಷ್ಟ ರೀತಿಯ ಜೀವನ ಚಕ್ರದಿಂದಾಗಿ, ಕೀಟನಾಶಕಗಳು ಈ ಸಂದರ್ಭದಲ್ಲಿ, ಮರಿಹುಳುಗಳು ನಿಯಂತ್ರಿಸಲ್ಪಡುವುದಿಲ್ಲ ಮತ್ತು ಕಡಿಮೆ-ವೆಚ್ಚದ ವಿಷ ಪಾಷಾಣ ತಂತ್ರಜ್ಞಾನವನ್ನು ಬಳಸಿ ಅವುಗಳನ್ನು ಕೊಲ್ಲಬಹುದು. ಎಲೆ ತಿನ್ನುವ ಮರಿಹುಳುಗಳು ಮತ್ತು ಸೈನಿಕ ಹುಳುಗಳನ್ನು ನಿರ್ವಹಣೆ ಮಾಡಲು ರೈತರು ಈ ವಿಷ ಪಾಷಾಣ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಲು ಸೂಚಿಸಲಾಗಿದೆ._x000D_ _x000D_ ವಿಷ ಪಾಷಾಣ ತಂತ್ರಜ್ಞಾನವನ್ನು ತಯಾರಿಕೆ ಮತ್ತು ಬಳಕೆ:_x000D_ _x000D_ ಮೊದಲು, ಅಕ್ಕಿ ಅಥವಾ ಗೋಧಿ ಹೊಟ್ಟು 12.5 ಕೆ.ಜಿ ತೆಗೆದುಕೊಂಡು ಮೊಲಾಸಸ್ ಲಭ್ಯವಿದ್ದರೆ 2.5 ಕೆ.ಜಿ. ಅದು ಸುಲಭವಾಗಿ ಲಭ್ಯವಿಲ್ಲದಿದ್ದರೆ, ಬೆಲ್ಲವನ್ನು 500 ಗ್ರಾಂ ನಿಂದ 1 ಕೆಜಿ ಬಳಸಿ. ಇದನ್ನು ಚೆನ್ನಾಗಿ ನೀರಿನಲ್ಲಿ ಬೇರೆಸಿ ಅದರ ಪಾಕವನ್ನು ಬಳಸಿ ಸುಮಾರು 400-500 ಮಿಲಿ ಕ್ಲೋರ್ಪೈರಿಫೋಸ್ 20 ಇಸಿ ಅಥವಾ ಕ್ವಿನಾಲ್ಫೋಸ್ 25 ಇಸಿ ಸೇರಿಸಿ. ಅಗತ್ಯವಿರುವಂತೆ ನೀರನ್ನು ಬೇರೆಸಿ. ಕೈ ಗವಚನ್ನು ಧರಿಸಿ ಚೆನ್ನಾಗಿ ಮಿಶ್ರಣ ಮಾಡಿ._x000D_ ಈಗ ವಿಷ ಪಾಷಾಣ ಸಿದ್ಧವಾಗಿದೆ ಮತ್ತು ಸಂಜೆಯ ವೇಳೆಯಲ್ಲಿ (ಮುಸ್ಸಂಜೆಯ ಅವಧಿಯಲ್ಲಿ) ಮಣ್ಣಿನ ಮೇಲ್ಮೈಯಲ್ಲಿ ಕಾಂಡದ ಬಳಿಯ ಹೊಲದಲ್ಲಿ ಹರಡಿ. ಹೊಲದ ಬದುಗಳಲ್ಲಿಯೂ ಬಳಸಿ._x000D_ ವಿಷ ಪಾಷಾಣವನ್ನು ಬಳಸುವುದು ಉತ್ತಮ. ತಯಾರಿಸಿದ ನಂತರ ತಕ್ಷಣ ಬಳಸಿ._x000D_ ಎಲೆಗಳನ್ನು ತಿನ್ನುವ ಮರಿಹುಳುಗಳು ಮತ್ತು ಸೈನಿಕ ಹುಳುಗಳು ಮೊಲಾಸಸ್ ಅಥವಾ ಬೆಲ್ಲದ ಉಪಸ್ಥಿತಿಗೆ ವಿಷ ಪಾಷಾಣ ಕಡೆಗೆ ಆಕರ್ಷಿತವಾಗುತ್ತವೆ. ವಿಷ ಪಾಷಾಣನಲ್ಲಿರುವ ಹೊಟ್ಟೆಯ ವಿಷದಿಂದಾಗಿ ಮರಿಹುಳುಗಳು ಸಾಯಲು ಪ್ರಾರಂಭಿಸುತ್ತವೆ._x000D_ ಒಂದು ಬಾರಿಯ ಬಳಕೆಯು ತೃಪ್ತಿದಾಯಕ ಫಲಿತಾಂಶಗಳನ್ನು ನೀಡದಿದ್ದರೆ, ಒಂದು ವಾರದ ನಂತರ ಅದೇ ವಿಷ ಪಾಷಾಣ ಉಪಯೋಗವನ್ನು ಪುನರಾವರ್ತಿಸಿ._x000D_ ಈ ವಿಷದ ವಿಷ ಪಾಷಾಣವನ್ನು ಒಮ್ಮೆ ಅಥವಾ ಎರಡು ಬಾರಿ ಬಳಸಿದ ನಂತರ ಹೆಚ್ಚಿನ ಸಂಖ್ಯೆಯನ್ನು ನಿಯಂತ್ರಿಸಬಹುದು. ಸರಳ ಕೀಟನಾಶಕಗಳ ಬಳಕೆಯಿಂದ ಮರಿಹುಳುಗಳ ಜನಸಂಖ್ಯೆಯನ್ನು ಸುಲಭವಾಗಿ ನಿಯಂತ್ರಿಸಬಹುದು._x000D_ ವಿಷ ಪಾಷಾಣ ಬಳಸಿದ ಹೊಲದಲ್ಲಿ ಯಾವುದೇ ಸಾಕು ಪ್ರಾಣಿಗಳನ್ನು ಹೊಲದಲ್ಲಿ ಬಿಡಬಾರದು._x000D_ ವಿಷ ಪಾಷಾಣವನ್ನು ಪಕ್ಷಿಗಳು ಸೇವಿಸಿದರೆ ಪರಿಣಾಮಕಾರಿಯಾಗ ಬಹುದು, ಕಾಳಜಿಯನ್ನು ತೆಗೆದುಕೊಳ್ಳಬೇಕು._x000D_ ಅಗತ್ಯಕ್ಕೆ ತಕ್ಕಂತೆ ವಿಷ ಪಾಷಾಣ ತಯಾರಿಸಿ ಮತ್ತು ಉಳಿದಿರುವ ವಸ್ತುಗಳನ್ನು ಸರಿಯಾಗಿ ನಾಶ ಮಾಡಿ._x000D_ ಮೂಲ: ಆಗ್ರೊಸ್ಟಾರ್ ಅಗ್ರೋನೊಮಿ ಸೆಂಟರ್ ಆಫ್ ಎಕ್ಸೆಲೆನ್ಸ್_x000D_ ಈ ಮಾಹಿತಿಯನ್ನು ಉಪಯುಕ್ತವೆಂದು ನೀವು ತಿಳಿದುಕೊಂಡರೆ, ಈ ಚಿತ್ರದ ಅಡಿಯಲ್ಲಿ ಹಳದಿ ಹೆಬ್ಬೆರಳಿನ ಚಿನ್ಹೆ ಮೇಲೆ ಒತ್ತಿ ಮತ್ತು ಕೆಳಗೆ ನೀಡಿರುವ ಆಯ್ಕೆಗಳನ್ನು ಬಳಸಿಕೊಂಡು ನಿಮ್ಮ ರೈತ ಸ್ನೇಹಿತರೊಂದಿಗೆ ಈ ಮಾಹಿತಿ ಯನ್ನು ಹಂಚಿಕೊಳ್ಳಿ.
164
0
ಕುರಿತು ಪೋಸ್ಟ್