ಗುರು ಜ್ಞಾನಅಗ್ರೋಸ್ಟಾರ್ ಅಗ್ರೋನೊಮಿ ಸೆಂಟರ್ ಆಫ್ ಎಕ್ಸೆಲೆನ್ಸ್
ನುಗ್ಗೆಕಾಯಿಯಲ್ಲಿ ಕೀಟಪೀಡೆ ನಿರ್ವಹಣೆ
ನುಗ್ಗೆಕಾಯಿ ಕೃಷಿಯಿಂದ ರೈತರು ಹೆಚ್ಚಿನ ಆರ್ಥಿಕ ಲಾಭವನ್ನು ಗಳಿಸಬಹುದು. ಆದಾಗ್ಯೂ, ಕೆಲವು ಕೀಟ ಪೀಡೆಗಳು ಬೆಳೆಗೆ ಬಾಧಿಸುತ್ತವೆ. ಮುಖ್ಯವಾಗಿ,ಮರಿಹುಳುಗಳು, ಮೊಗ್ಗು ಕೊರೆಯುವವ ಹುಳು, ರಸ ಹೀರುವ ಕೀಟಗಳು (ಬಿಳಿ ನೊಣಗಳು, ಥ್ರಿಪ್ಸ್ ಮತ್ತು ಸಸ್ಯ ಹೇನುಗಳು) ಮತ್ತು ತೊಗಟೆ ತಿನ್ನುವ ಮರಿಹುಳು, ಕಾಂಡ ಕೊರೆಯುವ ಹುಳು ಮತ್ತು ಕಾಯಿ ನೊಣಗಳು ಬೆಳೆಗೆ ಹಾನಿಯನ್ನುಂಟುಮಾಡುತ್ತವೆ. ಇವುಗಳಲ್ಲಿ, ಎಲೆ ಸುರಂಗ ಕೀಟವು ನುಗ್ಗೆಕಾಯಿ ಬೆಳೆಗೆ ಹೆಚ್ಚಿನ ಬಾಧೆ ಮುತ್ತಿಕೊಳ್ಳುತ್ತವೆ. ಸಮಗ್ರ ಕೀಟಪೀಡೆ ನಿರ್ವಹಣೆ (ಐಪಿಎಂ) • ಹೊಲದಲ್ಲಿ ಬೆಳಕಿನ ಬಲೆ ಸ್ಥಾಪಿಸಿ. • ಕೀಟಪೀಡೆಯ ಬಾಧೆಯ ಆರಂಭದಲ್ಲಿ, ಬೇವಿನ ಬೀಜದ ಕಷಾಯ 5% (500 ಗ್ರಾಂ) ಅಥವಾ ಬೇವಿನ ಆಧಾರಿತ ಸೂತ್ರೀಕರಣಗಳನ್ನು @ 10 ಮಿಲಿ (1% ಇಸಿ) ನಿಂದ 40 ಮಿಲಿ (0.15% ಇಸಿ) ಸಿಂಪಡಿಸುವ ಮೂಲಕ ರಸ ಹೀರುವ ಕೀಟ ಮತ್ತು ಮರಿಹುಳುವಿನ ಬಾಧೆಯನ್ನು ನಿಯಂತ್ರಿಸಬಹುದು . • ಜೈವಿಕ ಕೀಟನಾಶಕಗಳಾದ ವರ್ಟಿಸಿಲಿಯಮ್ ಲಕಾನಿ ಅಥವಾ ಬೌವೇರಿಯಾ ಬಾಸ್ಸಿಯಾನಾ, ಶಿಲೀಂಧ್ರ ಆಧಾರಿತ ಪುಡಿ 10 ಲೀಟರ್ ನೀರಿಗೆ 40 ಗ್ರಾಂ ಬೇರೆಸಿ ಸಿಂಪಡಿಸಿ. • ನಿಯಮಿತವಾಗಿ ಕೆಳಗೆ ಬಿದ್ದ ಮತ್ತು ಬಾಧೆಗೊಂಡಿರುವ ಕಾಯಿಗಳನ್ನು ಸಂಗ್ರಹಿಸಿ ಮಣ್ಣಿನಲ್ಲಿ ಹೂತುಹಾಕಿ ನಾಶಪಡಿಸಬೇಕು. • ಕಾಯಿ ನೊಣದ ಬಾಧೆಯನ್ನು ಕಡಿಮೆ ಮಾಡಲು, ಕಾಯಿ ಬೆಳೆಯುವ ಹಂತದ ಮೊದಲು ಮತ್ತು ಮೊದಲು 35 ದಿನಗಳ ನಂತರ ಬೇವಿನಾಧಾರಿತ ಸೂತ್ರೀಕರಣಗಳನ್ನು ಸಿಂಪಡಿಸಿ.
ಮೂಲ: ಭಾರತ ಸರ್ಕಾರ- ಕೃಷಿ ಮತ್ತು ರೈತರ ಕಲ್ಯಾಣ ಸಚಿವಾಲಯ. ಡಾ. ಟಿ. ಎಂ. ಭೋರ್ಪೋಡಾ,_x000D_ ಎಕ್ಸ್. ಕೀಟಶಾಸ್ತ್ರದ ಪ್ರೊಫೆಸರ್,_x000D_ ಬಿ. ಎ. ಕೃಷಿ ಕಾಲೇಜು, ಆನಂದ್ ಕೃಷಿ ವಿಶ್ವವಿದ್ಯಾಲಯ, ಆನಂದ್- 388 110 (ಗುಜರಾತ, ಭಾರತ)_x000D_ _x000D_ ಈ ಮಾಹಿತಿಯನ್ನು ಉಪಯುಕ್ತವೆಂದು ನೀವು ತಿಳಿದುಕೊಂಡರೆ, ಈ ಚಿತ್ರದ ಅಡಿಯಲ್ಲಿ ಹಳದಿ ಹೆಬ್ಬೆರಳಿನ ಚಿನ್ಹೆ ಮೇಲೆ ಒತ್ತಿ ಮತ್ತು ಕೆಳಗೆ ನೀಡಿರುವ ಆಯ್ಕೆಗಳನ್ನು ಬಳಸಿಕೊಂಡು ನಿಮ್ಮ ರೈತ ಸ್ನೇಹಿತರೊಂದಿಗೆ ಈ ಮಾಹಿತಿ ಯನ್ನು ಹಂಚಿಕೊಳ್ಳಿ.
724
13
ಕುರಿತು ಪೋಸ್ಟ್