ಗುರು ಜ್ಞಾನಅಗ್ರೋಸ್ಟಾರ್ ಅಗ್ರೋನೊಮಿ ಸೆಂಟರ್ ಆಫ್ ಎಕ್ಸೆಲೆನ್ಸ್
(ಭಾಗ 2) ಟೊಮೆಟೊದಲ್ಲಿ ತ್ರಿವರ್ಣ ಸಮಸ್ಯೆ
1. ರಸ ಹೀರುವ ಕೀಟ ಬಾಧೆ ಮತ್ತು ನಿರ್ವಹಣೆಗೆ - ವಿವಿಧ ಕೀಟಗಳು / ರೋಗದ ಬಾಧೆ ಟೊಮೆಟೊ ಬೆಳೆಗಳ ವಿವಿಧ ಬೆಳವಣಿಗೆಯ ಹಂತಗಳಲ್ಲಿ ಮತ್ತು ವಿವಿಧ ಹವಾಮಾನಗಳಲ್ಲಿ ಕಂಡುಬರುತ್ತವೆ. ತಡೆಗಟ್ಟುವ ಕ್ರಮಗಳನ್ನು ತೆಗೆದುಕೊಳ್ಳುವುದು ಅತ್ಯಗತ್ಯ. ಅವುಗಳಲ್ಲಿ ಅತ್ಯಂತ ಹಾನಿಕಾರಕವು ಬಿಳಿ ನೊಣ ಮತ್ತು ಥ್ರಿಪ್ಸ್ ನಿಯಂತ್ರಿಸುವುದು. ಅವುಗಳನ್ನು ನಿರ್ವಹಿಸಲು ಮತ್ತು ತಡೆಗಟ್ಟಲು ಥಯಾಮೆಥೊಕ್ಷಮ್, ಇಮಿಡಾಕ್ಲೋಪ್ರಿಡ್, ಫಿಪ್ರಾನಿಲ್, ಡೆಲ್ಟಾಮೆಥ್ರಿನ್, ಡಯಾಫೆಂಥಿರೊನ್, ಸ್ಪಿನೋಸಾಡ್ ಮೊದಲಾದ ಕೀಟನಾಶಕಗಳನ್ನು ಸಿಂಪಡಣೆಯಾಗಿ ಬಳಸಿ. 2. ನಂಜಾಣು ರೋಗಗಳಿಗಾಗಿ ಕೈಗೊಳ್ಳುವ ಕ್ರಮಗಳು -ಟೊಮೇಟೊ ಬೆಳೆಗಳಿಗೆ ಟೊಮೆಟೊ ಚುಕ್ಕೆ ಸೊರಗು ರೋಗದ ನಂಜಾಣುವಿನಂತಹ ರೋಗ ತಗಲುತ್ತದೆ. ಪರಿಣಾಮವಾಗಿ, ಟೊಮೇಟೊ ಬೆಳೆಯ ಗುಣಮಟ್ಟ ಕುಸಿಯುತ್ತದೆ, ಆದ್ದರಿಂದ ಈ ಕೀಟವನ್ನು ನಿಯಂತ್ರಿಸಬೇಕು.ಸಮಗ್ರ ಕೀಟ ನಿರ್ವಹಣೆ (ಹಳದಿ-ನೀಲಿ ಜಿಗುಟಾದ ಬಲೆಗಳು) ವಿಧಾನವನ್ನು ಅಳವಡಿಸಿಕೊಳ್ಳಬೇಕು. ಕೀಟಪೀಡೆಗಳ ಅಧ್ಯಯನ ಮಾಡಿ ಸೂಕ್ತ ಕೀಟನಾಶಕವನ್ನು ಬಳಸಬೇಕು. 3. ನಿಯಮಿತ ಜಲ ನಿರ್ವಹಣೆ- ಯಾವುದೇ ಬೆಳೆಗೆ ನಿಯಮಿತವಾಗಿ, ವೇಳೆಗೆ ಸರಿಯಾಗಿ, ಸಕಾಲಿಕ, ಮತ್ತು ಸರಿಯಾದ ಪ್ರಮಾಣದಲ್ಲಿ ನೀರು ಹಾಯಿಸಿದರೆ, ಇದು ಹೆಚ್ಚಳ ಇಳುವರಿ ಮತ್ತು ಗುಣಮಟ್ಟಕ್ಕೆ ಉತ್ತಮ ಪರಿಣಾಮ ಬೀರುತ್ತದೆ. ಆದ್ದರಿಂದ, ಸಮಯ, ದಿನಗಳು, ಎರಡು ನೀರಿನ ಹಾಯಿಸುವ ನಡುವಿನ ಸಮಯದ ಅಂತರವನ್ನು ಬೆಳೆ ಹಂತ, ಮಣ್ಣಿನ ವಿಧ ಮತ್ತು ಹವಾಮಾನದ ಆಧಾರದ ಮೇಲೆ ನಿರ್ಧರಿಸಬೇಕು. ಈ ವಿಧದಲ್ಲಿ ಸಾಧ್ಯವಾದಷ್ಟು ಸ್ಥಿರತೆ ಇರಿಸಿ.
4. ಉಷ್ಣಾಂಶದಿಂದ ಬೆಳೆಗಳನ್ನು ರಕ್ಷಿಸುವುದು - ಬೇಸಿಗೆಯಲ್ಲಿ ಟೊಮೆಟೊ ಸಾಗುವಳಿ ಹೆಚ್ಚಾಗಿ ನಡೆಯುತ್ತದೆ. ತಾಪಮಾನವು 35 ಡಿಗ್ರಿ ಸೆಲ್ಸಿಯಸ್ ಮೀರಿದಾಗ ಟೊಮ್ಯಾಟೊ ಹಣ್ಣಿನ ಲಿಕೋಪೀನ್ ಎಂಬ ವರ್ಣದ್ರವ್ಯವು ಸಾಯುತ್ತದೆ. ಆದ್ದರಿಂದ ಹಣ್ಣು ಏಕರೂಪದ ಕೆಂಪು ಬಣ್ಣವನ್ನು ನೀಡುವುದಿಲ್ಲ. ಆದ್ದರಿಂದ, ವಿಶೇಷವಾಗಿ ಬೇಸಿಗೆಯಲ್ಲಿ ಕೃಷಿಗಾಗಿ ಸಾವಯವ ಅಥವಾ ಬಿಳಿ ಮಲ್ಚಿಂಗ್ ಪ್ಲಾಸ್ಟಿಕ್ ಅನ್ನು ಸಾಧ್ಯವಾದಷ್ಟು ಬೇಗ ಬಳಕೆ ಮಾಡಬೇಕು. ಇದು ಉಷ್ಣತೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ, ಇದರಿಂದಾಗಿ ಉತ್ತಮ ಇಳುವರಿ ಸಿಗುತ್ತದೆ. 5. ತ್ರಿವರ್ಣ ಹಣ್ಣುಗಳನ್ನು ಕಂಡು ಬಂದಲ್ಲಿ ತೆಗೆದುಕೊಳ್ಳಬೇಕಾದ ಕ್ರಮಗಳು- ತಡೆಗಟ್ಟುವ ಕ್ರಮಗಳನ್ನು ಮುಂಚಿತವಾಗಿ ತೆಗೆದುಕೊಳ್ಳದಿದ್ದರೆ, ಕಟಾವಿನ ಸಮಯದಲ್ಲಿ ತ್ರಿವರ್ಣ ಹಣ್ಣುಗಳ ಸಂಖ್ಯೆಯು ಹೆಚ್ಚಾಗುತ್ತದೆ. ಬಿಳಿ ಬೇರುಗಳನ್ನು ಸಕ್ರಿಯಗೊಳಿಸಲು, ಪ್ರತಿ ವಾರ ತುರ್ತುಸ್ಥಿತಿಯಲ್ಲಿ ಹನಿ ನಿರಾವರಿ ಮೂಲಕ ಹ್ಯೂಮಿಕ್ ನೀಡಿ. ತದ ನಂತರ, ಪ್ರತಿ 8 ದಿನಗಳಲ್ಲಿ 5 ಕೆ.ಜಿ. ಪೊಟ್ಯಾಸಿಯಮ್ ಶೋಯೆನೈಟ್, 5 ಕೆಜಿ ಕ್ಯಾಲ್ಸಿಯಂ ನೈಟ್ರೇಟ್, 5 ಕೆ.ಜಿ. ಮೆಗ್ನೀಸಿಯಮ್ ಸಲ್ಫೇಟ್, 500 ಗ್ರಾಂನ ಬೋರಾನ ಅನ್ನು ಪ್ರತಿ ಎಕರೆಗೆ ವಿವಿಧ ಸಮಯಗಳಲ್ಲಿ ನೀಡಿ. ಅವುಗಳ ಜೊತೆಯಲ್ಲಿ, ಸಿಲಿಕಾನ್ 200 ಮಿಲಿ ಮತ್ತು ಕೆಟೋಗ್ವಾರ್ಡ್ 250 ಮಿ ಲೀ ಯನ್ನು ಪ್ರತಿ 15 ದಿನಗಳಲ್ಲಿ ತಾಪಮಾನ ಮತ್ತು ಪರಿಸರ ಒತ್ತಡವನ್ನು ಕಡಿಮೆ ಮಾಡಲು ಸಿಂಪಡಿಸಿ. ಇದಲ್ಲದೆ, ಹನಿ ನೀರಾವರಿ ಮೂಲಕ ಸಮುದ್ರದ ಪಾಚಿಯ ಕಷಾಯವು ನೀಡಿದರೆ ಬಹುಉಪಯೋಗಿಯಾಗಿದೆ. ತ್ರಿವರ್ಣ ತೊಂದರೆಯಿಂದ ಸಂಪೂರ್ಣ ನಿಯಂತ್ರಣವನ್ನು ಪಡೆಯಲು, ವಿವಿಧ ಬೆಳೆ ಹಂತಗಳ ಮೂಲಕ ಅಂದರೆ ಬಿತ್ತನೆಯಿಂದ ಹಿಡಿದು ಕೊಯ್ಲು ಮಾಡುವ ತನಕ ಮೇಲೆ ತಿಳಿಸಲಾದ ವಿವಿಧ ಕ್ರಮಗಳನ್ನು ಅನ್ವಯಿಸಿ, ಉಲ್ಲೇಖ- ತೇಜಸ್ ಕೋಲ್ಹೆ, ಹಿರಿಯ ಕೃಷಿ ತಜ್ಞರು ಈ ಮಾಹಿತಿಯನ್ನು ಉಪಯುಕ್ತವೆಂದು ನೀವು ತಿಳಿದುಕೊಂಡರೆ, ಈ ಚಿತ್ರದ ಅಡಿಯಲ್ಲಿ ಹಳದಿ ಹೆಬ್ಬೆರಳಿನ ಚಿನ್ಹೆ ಮೇಲೆ ಒತ್ತಿ ಮತ್ತು ಕೆಳಗೆ ನೀಡಿರುವ ಆಯ್ಕೆಗಳನ್ನು ಬಳಸಿಕೊಂಡು ನಿಮ್ಮ ರೈತ ಸ್ನೇಹಿತರೊಂದಿಗೆ ಈ ಮಾಹಿತಿ ಯನ್ನು ಹಂಚಿಕೊಳ್ಳಿ.
406
1
ಕುರಿತು ಪೋಸ್ಟ್