ಸಾವಯವ ಕೃಷಿಶೇತಕರಿ ಮಾಸಿಕ್ (ಮರಾಠಿ ಮಾಸ ಪತ್ರಿಕೆ)
ಹಣ್ಣು ಕೊರೆಕ ಹುಳುವಿನ ಸಾವಯವ ಹತೋಟಿ ಕ್ರಮಗಳು
ಟೊಮ್ಯಾಟೋ, ಬದನೆಕಾಯಿ, ಬೆಂಡೆ, ಬಟಾಣಿ ಮುಂತಾದ ಬೆಳೆಗಳಲ್ಲಿ ಈ ಕೀಟಗಳ ಬಾಧೆ ಕಂಡುಬರುತ್ತದೆ. ಹಣ್ಣು ಕೊರೆಕದಿಂದ ಸೋಂಕು ಉಂಟಾಗುತ್ತದೆ. ಇದರಿಂದಾಗಿ ರೈತರಿಗೆ ದೊಡ್ಡ ಆರ್ಥಿಕ ನಷ್ಟವನ್ನುಂಟು ಮಾಡುತ್ತದೆ. ಆದ್ದರಿಂದ, ಈ ಕೀಟಗಳನ್ನು ಸರಿಯಾದ ಸಮಯದಲ್ಲಿ ಹತೋಟಿ ಮಾಡಬೇಕು.
1. ಈ ಹುಳುಗಳನ್ನು ಹತೋಟಿ ಮಾಡಲು, ಮೆಕ್ಕೆಜೋಳ,ಅಲಂಸಂದಿ ಬೆಳೆಗಳನ್ನು ಮುಖ್ಯ ಬೆಳೆಯೊಂದಿಗೆ ಬಲೆ ಬೆಳೆಯಾಗಿ ನಾಟಿಬೇಕು. 2. ಟೊಮ್ಯಾಟೋ ಬೆಳೆಯಲ್ಲಿ, ೧೪-೧೫ ಬೆಳೆ ಸಾಲುಗಳ ನಡುವೆ ಚೆಂಡು ಹೂಗಳನ್ನು ಎರಡು ಸಾಲುಗಳಲ್ಲಿ ನಾಟಿ ಮಾಡಬೇಕು. ಚೆಂಡು ಹೂಗಳನ್ನು ಬಿತ್ತನೆಯನ್ನು ಟೊಮ್ಯಾಟೋ ಬೆಳೆ ನಾಟಿ ಮಾಡುವ 15 ದಿನಗಳ ಮೊದಲು ಬಿತ್ತನೆ ಮಾಡಬೇಕು. 3. ನಾಟಿ ಮಾಡಿದ 40-45 ದಿನಗಳ ನಂತರ, ಟ್ರೈಕೊಗ್ರಾಮಾ ಚಿಲೋನಿಸ್‌ನ ಪರಜೀವಿಗಳನ್ನು ಎಕರೆಗೆ ೧ ಲಕ್ಷ ಪ್ರತಿ ಎಕರೆ ಹೊಲಗಳಲ್ಲಿ ಬಿಡಬೇಕು. ಈ ಕೀಟಗಳು ಪ್ರೌಢ ಪತಂಗದ ಮೊಟ್ಟೆಗಳಲ್ಲಿ ತನ್ನ ಮೊಟ್ಟೆಗಳನ್ನು ಇಡುವುದರಿಂದ ಅದು ಹಣ್ಣಿನ ಕೊರೆಕದ ಮೊಟ್ಟೆಗಳ ಭ್ರೂಣವನ್ನು ನಾಶಪಡಿಸುತ್ತದೆ. 4. ಹಣ್ಣಿನ ಕೊರೆಕವನ್ನು ಹತೋಟಿ ಮಾಡಲು ಬೇವಿನ ಬೀಜದ ಕಷಾಯವನ್ನು 5% ಸಿಂಪಡಿಸಬೇಕು. 5. ಎಕರೆಗೆ ೫-೬ ಮೋಹಕ ಬಲೆಗಳನ್ನು ಹೊಲದಲ್ಲಿ ಅಳವಡಿಸಬೇಕು 6. ಬಾಧೆಗೊಂಡ ಹಣ್ಣುಗಳನ್ನು ತೆಗೆದು ನಾಶಪಡಿಸಬೇಕು. ಮೂಲ: ಶೇತಕರಿ ಮಾಸಿಕ್ (ಮರಾಠಿ ಮಾಸ ಪತ್ರಿಕೆ) ಈ ಮಾಹಿತಿಯನ್ನು ಉಪಯುಕ್ತವೆಂದು ನೀವು ತಿಳಿದುಕೊಂಡರೆ, ಈ ಚಿತ್ರದ ಅಡಿಯಲ್ಲಿ ಹಳದಿ ಹೆಬ್ಬೆರಳಿನ ಚಿನ್ಹೆ ಮೇಲೆ ಒತ್ತಿ ಮತ್ತು ಕೆಳಗೆ ನೀಡಿರುವ ಆಯ್ಕೆಗಳನ್ನು ಬಳಸಿಕೊಂಡು ನಿಮ್ಮ ರೈತ ಸ್ನೇಹಿತರೊಂದಿಗೆ ಈ ಮಾಹಿತಿ ಯನ್ನು ಹಂಚಿಕೊಳ್ಳಿ.
182
0
ಕುರಿತು ಪೋಸ್ಟ್