ಪಶುಸಂಗೋಪನೆಅಗ್ರೋವನ್
ಹಸು ಎಮ್ಮೆಯಲ್ಲಿ ಹೆಚ್ಚಿನ ಹಾಲಿನ ಉತ್ಪಾದನೆಗಾಗಿ ಪೌಷ್ಟಿಕಆಹಾರದ ನಿರ್ವಹಣೆ
ಎಮ್ಮೆ ಮತ್ತು ಹಸುವಿಗೆ ಅಸಮರ್ಪಕ ಆಹಾರದ ಕಾರಣ, ಪ್ರಾಣಿಗಳ ದೈಹಿಕ ಬೆಳವಣಿಗೆ, ಹಾಲು ಉತ್ಪಾದನೆ, ಸಂತಾನೋತ್ಪತ್ತಿ ಮತ್ತು ಜಾನುವಾರುಗಳ ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮಗಳು ಕಾಣಿಸಿ ಕೊಳ್ಳುತ್ತವೆ. ಪ್ರಾಣಿಗಳ ಉತ್ತಮ ಆಹಾರ ನಿರ್ವಹಣೆ ಪರಿವರ್ತನೆಯು ಸಂಕ್ರಮಣದ ವೇಳೆಯಿಂದಲೇ ಪ್ರಾರಂಭವಾಗಬೇಕು. ಜಾನುವಾರುಗಳಲ್ಲಿ ಹೆಚ್ಚಿನ ಪ್ರೊಟೀನ್ ಮತ್ತು ಶಕ್ತಿಯುತ ಆಹಾರ ಹಾಗು ಒಣ ಆಹಾರ ಮೇವಿನ ಪ್ರಮಾಣ ಹೆಚ್ಚಿಸುವುದರಿಂದ ನಿರೀಕ್ಷಿತ ಪರಿಣಾಮಗಳು ಕಾಣಿಸಿಕೊಳ್ಳುತ್ತವೆ. ಜಾನುವಾರಿನ ದೇಹದ ತೂಕ ಮತ್ತು ಅದರ ಆರೋಗ್ಯದ ಕಡೆ ಗಮನವಹಿಸಬೇಕು. ಹಸು,ಎಮ್ಮೆ ಈಯದ ನಂತರ ಮೂರೂ ವಾರಗಳ ವರೆಗೆ ಯೋಗ್ಯ ರೀತಿಯಿಂದ ಕಾಳಜಿಯನ್ನು ತೆಗೆದು ಕೊಳ್ಳಬೇಕು. ತದನಂತರದ ಕಾಲದಲ್ಲಿ ಜಾನುವಾರುಗಳಲ್ಲಿ ಶಕ್ತಿಯ ಕೊರತೆಯನ್ನು ಬೈಪಾಸ್ ಫ್ಯಾಟ್ ಮತ್ತು ಇತರ ಪಶುಆಹಾರವನ್ನು ಕೊಟ್ಟು ಪೂರ್ಣಗೊಳಿಸಬಹುದು ಇದರಿಂದಾಗಿ ಮುಂಬರುವ ಸಮಯದಲ್ಲಿ ಉತ್ತಮ ಗುಣ್ಣಮಟ್ಟದ ಹಾಲಿನ ಉತ್ಪಾದನೆಯನ್ನು ಪಡೆಯಬಹುದು.
ಹಸು,ಎಮ್ಮೆ ಅವುಗಳ ಹಾಲು ಕೊಡುವ ಹಂತಕ್ಕೆ ತಲುಪಿದ ಮೇಲೆ ಪಶುಆಹಾರವನ್ನು ಸರಿಯಾದ ಸಮಯಕ್ಕೆ ಕೊಡಬೇಕು._x000D_ ಹಾಲು ಕೊಡುವ ಹಸು,ಎಮ್ಮೆಗೆ ಬೇಕಾಗುವ ಪಶುಆಹಾರ- ಮೇವಿನಲ್ಲಿ ಪ್ರೊಟೀನ್,ಮತ್ತು ಅದರ ಉತ್ತಮ ರೀತಿಯ ಜೀರ್ಣ ಕ್ರಿಯೆಗೆ ಖನಿಜ ಪದಾರ್ಥ್ಗಳನ್ನೂ ಪಶುವೈದ್ಯರ ಸಲಹೆಯಂತೆ ಪ್ರಮಾಣೀಕರಿಸಿ ಕೊಡಬೇಕು. ಎಲ್ಲ ಮಿಶ್ರಣಗೊಳಿಸಿದ ಪಶುಆಹಾರ ಅಥವಾ ಟಿಎಂಆರ್ ತಂತ್ರಜ್ಞಾನವನ್ನು ಉಪಯೋಗಿಸಿ ಜಾನುವಾರುಗಳ ಹೊಟ್ಟೆಯಲ್ಲಿಯ ಆಮ್ಲಿಯತೆಯನ್ನು ಕಡಿಮೆ ಮಾಡಲು ಉಪಯುಕ್ತವಾಗುತ್ತದೆ. _x000D_ _x000D_ ಮೂಲ: ಡಾ. ಪರಾಗ ಘೋತಲೆ, ಅಗ್ರೋವನ,೨೫ ಫೆಬ್ರವರಿ ೨೦೧೯_x000D_ ಈ ಮಾಹಿತಿಯನ್ನು ಉಪಯುಕ್ತವೆಂದು ನೀವು ತಿಳಿದುಕೊಂಡರೆ, ಈ ಚಿತ್ರದ ಅಡಿಯಲ್ಲಿ ಹಳದಿ ಹೆಬ್ಬೆರಳಿನ ಚಿನ್ಹೆ ಮೇಲೆ ಒತ್ತಿ ಮತ್ತು ಕೆಳಗೆ ನೀಡಿರುವ ಆಯ್ಕೆಗಳನ್ನು ಬಳಸಿಕೊಂಡು ನಿಮ್ಮ ರೈತ ಸ್ನೇಹಿತರೊಂದಿಗೆ ಈ ಮಾಹಿತಿ ಯನ್ನು ಹಂಚಿಕೊಳ್ಳಿ.
507
6
ಕುರಿತು ಪೋಸ್ಟ್