AgroStar Krishi Gyaan
Pune, Maharashtra
25 Sep 19, 01:00 PM
ಕೃಷಿ ವಾರ್ತಾಪುಢಾರಿ
ವಾರಣಾಸಿಯಿಂದ ಅಭಿವೃದ್ಧಿಪಡಿಸಲಾದ ಕೆಂಪು ಬಣ್ಣದ ಬೆಂಡೆಕಾಯಿ ತಳಿ
ವಾರಣಾಸಿ ಭಾರತೀಯ ಕೃಷಿ ವಿಜ್ಞಾನಿಗಳು ಸುಮಾರು 23 ವರ್ಷಗಳ ಕಠಿಣ ಪರಿಶ್ರಮದ ನಂತರ ಹೊಸ ಜಾತಿಯ ಬೆಂಡೆಕಾಯಿಯನ್ನು ಅಭಿವೃದ್ಧಿಪಡಿಸಿದ್ದಾರೆ. ಭಾರತೀಯ ತರಕಾರಿ ಸಂಶೋಧನಾ ಕೇಂದ್ರ (ಐಐವಿಆರ್) ದ ವಿಜ್ಞಾನಿಗಳು ವಿಶೇಷ ಕೆಂಪು ಬಣ್ಣದ
ಬೆಂಡೆಕಾಯಿಯನ್ನು ಅಭಿವೃದ್ಧಿಪಡಿಸಿದ್ದಾರೆ. ಅದಕ್ಕೆ 'ಕಾಶಿ ಲಲಿಮಾ' ಎಂದು ಹೆಸರಿಡಲಾಗಿದೆ. ವಿಜ್ಞಾನಿಗಳ ಪ್ರಕಾರ ಈ ಬೆಂಡೆಕಾಯಿಯಲ್ಲಿ ಆಂಟಿ ಆಕ್ಸಿಡೆಂಟ್, ಕಬ್ಬಿಣ ಮತ್ತು ಕ್ಯಾಲ್ಸಿಯಂ ಸೇರಿದಂತೆ ಎಲ್ಲಾ ಪೋಷಕಾಂಶಗಳು ದೊರಕುತ್ತವೆ ಎಂದು ಹೇಳಿದರು. ಇದು ಸಾಮಾನ್ಯವಾಗಿ ಮಾರುಕಟ್ಟೆಯಲ್ಲಿ ಬರುವ ಬೆಂಡೆಕಾಯಿಗಿಂತಲೂ ಹೆಚ್ಚಿನ ಬೆಲೆ ಸಿಗುತ್ತದೆ. ೧ ಕೆ.ಜಿ. ಕಾಶಿ ಲಲಿಮಾ ಬೆಂಡೆಕಾಯಿಗೆ 100 ರಿಂದ 500 ರೂಪಾಯಿಗಳವರೆಗೆ ಬೆಲೆ ಇರುತ್ತದೆ. ಕೆಂಪು ಬೆಂಡೆಕಾಯಿಯು ಪಾಶ್ಚಿಮಾತ್ಯ ದೇಶಗಳಲ್ಲಿ ಕಂಡುಬರುತ್ತದೆ ಮತ್ತು ನಮ್ಮ ದೇಶದಲ್ಲಿ ಬಳಕೆಗಾಗಿ ಅಲ್ಲಿಂದ ಆಮದು ಮಾಡಿಕೊಳ್ಳಲಾಗುತ್ತದೆ ಎಂದು ಹೇಳಲಾಗಿದೆ. ದೇಶದಲ್ಲಿ ಅದರ ತಳಿಯನ್ನು ಅಭಿವೃದ್ಧಿಪಡಿಸಿದ ನಂತರ, ಅದನ್ನು ಆಮದು ಮಾಡುವ ಅಗತ್ಯವಿಲ್ಲ. ಈಗ ಭಾರತೀಯ ರೈತರು ಕೂಡ ಇದನ್ನು ಉತ್ಪಾದಿಸಲು ಸಾಧ್ಯವಾಗುತ್ತದೆ. 1995-96ರಲ್ಲಿ ಇದರ ಕೆಲಸ ಪ್ರಾರಂಭವಾಯಿತು ಎಂದು ಸಂಸ್ಥೆ ಹೇಳಿದೆ. ಆದರೆ ಈಗ ನಮಗೆ ಯಶಸ್ಸು ಸಿಕ್ಕಿದೆ. ಕಾಶಿ ಲಲಿಮಾ ಬೆಂಡೆಕಾಯಿಯ ಬೀಜಗಳು ಡಿಸೆಂಬರ್‌ನಿಂದ ಸಾಮಾನ್ಯ ಜನರಿಗೆ ಲಭ್ಯವಾಗಲಿದೆ. ಇದರಿಂದ ರೈತರಿಗೆ ಅನುಕೂಲವಾಗಲಿದ್ದು, ಸಾಮಾನ್ಯ ಜನರಿಗೆ ಅದರಿಂದ ಸಮೃದ್ಧ ಪೋಷಕಾಂಶಗಳು ಸಿಗುತ್ತವೆ. ಮೂಲ - ಪುಢಾರಿ, 22 ಸೆಪ್ಟೆಂಬರ್ 2019 ಈ ಮಾಹಿತಿಯನ್ನು ಉಪಯುಕ್ತವೆಂದು ನೀವು ತಿಳಿದುಕೊಂಡರೆ, ಈ ಚಿತ್ರದ ಅಡಿಯಲ್ಲಿ ಹಳದಿ ಹೆಬ್ಬೆರಳಿನ ಚಿನ್ಹೆ ಮೇಲೆ ಒತ್ತಿ ಮತ್ತು ಕೆಳಗೆ ನೀಡಿರುವ ಆಯ್ಕೆಗಳನ್ನು ಬಳಸಿಕೊಂಡು ನಿಮ್ಮ ರೈತ ಸ್ನೇಹಿತರೊಂದಿಗೆ ಈ ಮಾಹಿತಿ ಯನ್ನು ಹಂಚಿಕೊಳ್ಳಿ.
410
1