ಸಾವಯವ ಕೃಷಿಅಗ್ರೋಸ್ಟಾರ್ ಅಗ್ರೋನೊಮಿ ಸೆಂಟರ್ ಆಫ್ ಎಕ್ಸೆಲೆನ್ಸ್
ಕೀಟಪೀಡೆಗಳ ನಿಯಂತ್ರಣಕ್ಕಾಗಿ ಬೇವಿನ ಕಷಾಯವನ್ನು ತಯಾರಿಸುವ ವಿಧಾನ
ಬೇವಿನ ಕಷಾಯವು ಕೀಟಪೀಡೆಗಳ ನಿಯಂತ್ರಿಸುವಲ್ಲಿ ಅಗ್ಗದ ಸಸ್ಯಜನ್ಯ ಕೀಟನಾಶಕವಾಗಿದೆ. ಬೇವಿನ ಬೀಜದ ಕಷಾಯವನ್ನು ಇಂದು ವ್ಯಾಪಕವಾಗಿ ಬಳಸಲಾಗುತ್ತದೆ. ತರಕಾರಿ ಬೆಳೆಗಳಲ್ಲಿ, ಕಿರುಧಾನ್ಯಗಳು, ದ್ವಿದಳ ಧಾನ್ಯಗಳು, ಹತ್ತಿ ಎಲ್ಲಾ ಇತರ ಬೆಳೆಗಳಲ್ಲಿ ಇದನ್ನು ಕೀಟನಾಶಕವಾಗಿ ಬಳಸಲಾಗುತ್ತದೆ. ಬೇವಿನ ಕಷಾಯವನ್ನು ತಯಾರಿಸುವ ವಿಧಾನ: - ಬೇವಿನ ಬೀಜವನ್ನು ಚೆನ್ನಾಗಿ ಪುಡಿಯಾಗಿ ಮಾಡಿಕೊಳ್ಳಬೇಕು. ಬೇವಿನ ಬೀಜ ಸಂಗ್ರಹಿಸದಿದ್ದರೆ ಅಥವಾ ಲಭ್ಯವಿಲ್ಲದಿದ್ದರೆ ಮಾರುಕಟ್ಟೆಯಲ್ಲಿ ಲಭ್ಯವಿರುವ ನೆಮೊ ಪುಡಿಯನ್ನು ಬಳಸಿ ಕಷಾಯವನ್ನು ತಯಾರಿಸಲು ಬಳಸಬಹುದು. ಇಂತಹ ಬೇವಿನ ಬೀಜದ ಪುಡಿ ವರ್ಷಪೂರ್ತಿ ಮಾರುಕಟ್ಟೆಯಲ್ಲಿ ಲಭ್ಯವಿರುತ್ತದೆ. ಸಾವಯವ ಪದಾರ್ಥಗಳನ್ನು ಸಿಂಪಡಣೆ ಮಾಡುವುದಕ್ಕೆ ಕಷಾಯಗಳನ್ನು 5% ವರೆಗೆ ಬೀಜದಿಂದ ತೆಗೆದ ಕಷಾಯವನ್ನು ಉಪಯೋಗಿಸಬೇಕು. 2% ಶೇಕಡಾ ಬೇವಿನ ಕಷಾಯವನ್ನು ತಯಾರಿಸಲು, ಅದನ್ನು ರಾತ್ರಿಯಿಡೀ 2 ಲೀಟರ್ ಪ್ಲಾಸ್ಟಿಕ್ ಬಕೆಟ್ನಲ್ಲಿ ನೆನೆಸಿ . ಬೇವಿನ ಬೀಜವನ್ನು ನೆನೆಸುವಾಗ, ಬಕೆಟನ್ನು ಮುಚ್ಚಿಡ ಬೇಕು ಮತ್ತು ತಣ್ಣೀರನ್ನು ಬಳಸಿ ಮತ್ತು ಬಿಸಿ ನೀರನ್ನು ಬಳಸಬೇಡಿ, ಬೇವಿನ ಪುಡಿಯನ್ನು ನೆನೆಸಿಡಿ. ಬಿಸಿ ನೀರು ಬೇವಿನ ಬೀಜದ ಕಷಾಯದ ಸಕ್ರಿಯ ಘಟಕಾಂಶವನ್ನು ಕಡಿಮೆ ಮಾಡುತ್ತದೆ. ಬೇವಿನ ಪುಡಿಯನ್ನು ರಾತ್ರಿಯಿಡೀ ನೆನೆಸಿದ ನಂತರ ಅದನ್ನು ಚೆನ್ನಾಗಿ ಸೋಸಿಕೊಳ್ಳಬೇಕು . ಬೇವಿನ ಪುಡಿಯನ್ನು ಹಿಂಡಿದ ನಂತರ ಗಿಡಗಳಿಗೆ ಗೊಬ್ಬರವಾಗಿ ಕೊಡಬಹುದು. ಬೇವಿನ ಬೀಜದ ಕಷಾಯ ಸೋಸಿದ ನೀರಿನಲ್ಲಿ ೧ ಲೀಟರ್ ಕಷಾಯವನ್ನು ೧೦೦ ಲೀಟರ್ ನೀರಿನಲ್ಲಿ ಮಿಶ್ರಣ ಮಾಡಿ. ಈ ರೀತಿಯಾಗಿ ತಯಾರಿಸಿದ ಕಷಾಯವನ್ನು ಸಿಂಪಡಿಸುವಾಗ, ಉತ್ತಮ ಗುಣಮಟ್ಟದ ಸ್ಪ್ರೆಡರ್-ಸ್ಟಿಕ್ಕರ್ ಬೇರೆಸಿ. ಆದ್ದರಿಂದ, ಸಿಂಪಡಣೆ ಮಾಡಿದ ಕಷಾಯವು ಚೆನ್ನಾಗಿ ಬೆಳೆಗಳ ಹರಡುವುದರಿಂದ ಉತ್ತಮ ಫಲಿತಾಂಶ ಸಿಗುತ್ತದೆ. ಬೇವಿನ ಕಷಾಯದ ಪ್ರಯೋಜನಗಳು: -  ಸಾವಯವ ಮೂಲಗಳಿಂದ ತಯಾರಿಸಲಾಗಿರುವುದರಿಂದ, ವೆಚ್ಚವು ತುಂಬಾ ಕಡಿಮೆಯಾಗುತ್ತದೆ. ಸುಲಭವಾಗಿ ರಚಿಸಬಹುದು  ಬೇವಿನ ಕಷಾಯವನ್ನು ಸಿಂಪಡಿಸುವುದರಿಂದ ರಸ ಹೀರುವ ಕೀಟಗಳ ಬಾಧೆಯು ಕಡಿಮೆ ಮಾಡಬಹುದು. ರಸ ಹೀರುವ ಕೀಟಗಳ ಜೀವನ ಚಕ್ರವನ್ನು ಅಡ್ಡಿಪಡಿಸುವ ಮೂಲಕ ಎಲ್ಲಾ ಬೆಳೆಗಳಲ್ಲಿ 3 ದಿನಗಳ ಮಧ್ಯಂತರದಲ್ಲಿ ನಿಯಮಿತವಾಗಿ ಕಷಾಯವನ್ನು ಸಿಂಪಡಿಸುವುದು ಕೀಟಗಳನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.  ಕೀಟಪೀಡೆಗಳ ಜೀವನ ಚಕ್ರದಲ್ಲಿ, ಪತಂಗ ಗುಂಪಿಗೆ ಸೇರಿರಿರುವ ಕೀಟಗಳು ಮೊಟ್ಟೆ ಇಡುವುದನ್ನು ನಿಲ್ಲಿಸುತ್ತವೆ, ಹಾಗೆಯೇ ರಸ ಹೀರುವ ಕೀಟಗಳ ಮೊಟ್ಟೆಗಳನ್ನು ಇಡುವ ನೈಸರ್ಗಿಕ ಪ್ರಕ್ರಿಯೆಗೆ ಅಡ್ಡಿಯಾಗಲಾರಂಭಿಸುತ್ತದೆ. ಆದ್ದರಿಂದ ಇದು ಇಡೀ ಜೀವನ ಚಕ್ರವನ್ನು ತಡೆಯುತ್ತದೆ.  ಸಾವಯವ ಘಟಕಾಂಶವಾಗಿ, ಯಾವುದೇ ರಾಸಾಯನಿಕ ಅಂಶಗಳು ಲಭ್ಯವಿರುವುದಿಲ್ಲ, ಆದ್ದರಿಂದ ಸಾವಯವ ಕೃಷಿಯಲ್ಲಿ ಬಳಸುವುದು ಸುಲಭ. ತರಕಾರಿ ಬೆಳೆಗಳನ್ನು ರಫ್ತುಗಾಗಿ ಬೆಳೆಯುವುದಾದರೆ ಬೇವಿನ ಕಷಾಯ ಸಿಂಪಡಿಸುವುದು ಪ್ರಯೋಜನಕಾರಿಯಾಗಿದೆ.  ಇದನ್ನು ಕೀಟನಾಶಕಗಳ ಜೊತೆಗೆ ಸಮಗ್ರ ಕೀಟ ನಿಯಂತ್ರಣ ವಿಧಾನದಲ್ಲಿ ಬಳಸಬಹುದಾಗಿರುವುದರಿಂದ, ಸಾವಯವ ಕೀಟನಾಶಕವನ್ನು ಬಳಸುವುದು ತುಂಬಾ ಸುಲಭ.  ಬಿಳಿ ನೊಣ, ಸಸ್ಯ ಹೇನು , ಹೂಕೋಸುನಲ್ಲಿರುವ ವಿವಿಧ ರೀತಿಯ ಮರಿ ಹುಳುಗಳನ್ನು ಸಹ ಚೆನ್ನಾಗಿ ನಿಯಂತ್ರಿಸಬಹುದು. ಮೂಲ: ಶ್ರೀ ತುಷಾರ್ ಉಗಳೆ, ಕೀಟಶಾಸ್ತ್ರಜ್ಞ
ಈ ಮಾಹಿತಿಯನ್ನು ಉಪಯುಕ್ತವೆಂದು ನೀವು ತಿಳಿದುಕೊಂಡರೆ, ಈ ಚಿತ್ರದ ಅಡಿಯಲ್ಲಿ ಹಳದಿ ಹೆಬ್ಬೆರಳಿನ ಚಿನ್ಹೆ ಮೇಲೆ ಒತ್ತಿ ಮತ್ತು ಕೆಳಗೆ ನೀಡಿರುವ ಆಯ್ಕೆಗಳನ್ನು ಬಳಸಿಕೊಂಡು ನಿಮ್ಮ ರೈತ ಸ್ನೇಹಿತರೊಂದಿಗೆ ಈ ಮಾಹಿತಿ ಯನ್ನು ಹಂಚಿಕೊಳ್ಳಿ.
516
1
ಕುರಿತು ಪೋಸ್ಟ್