AgroStar Krishi Gyaan
Pune, Maharashtra
09 Dec 19, 01:00 PM
ಕೃಷಿ ವಾರ್ತಾಕೃಷಿ ಜಾಗರಣ್
ಮಾರ್ಚ್‌ನಿಂದ ನ್ಯಾನೊ ಯೂರಿಯಾ ಅಗ್ಗವಾಗಿ ಸಿಗಲಿದೆ, ಇದರಿಂದ ರೈತರ ಹಣ ಉಳಿತಾಯವಾಗುತ್ತದೆ.
ನವದೆಹಲಿ: ಇಫ್ಕೊ (ಇಂಡಿಯನ್ ಫಾರ್ಮರ್ಸ್ ಫರ್ಟಿಲೈಜರ್ ಕೋಆಪರೇಟಿವ್ ಲಿಮಿಟೆಡ್ ) ಹೊಸ ನ್ಯಾನೊ ತಂತ್ರಜ್ಞಾನ ಆಧಾರಿತ ಸಾರಜನಕ ಗೊಬ್ಬರದ ಉತ್ಪಾದನೆಯನ್ನು ಮಾರ್ಚ್ 2020 ರಿಂದ ಪ್ರಾರಂಭಿಸಲಿದೆ. ಯೂರಿಯಾ ಚೀಲದ ಬದಲು ನ್ಯಾನೊ ಆಧಾರಿತ ಬಾಟಲ್ ಉತ್ಪನ್ನವು ದೊರೆಯಲಿದೆ. ಇದರಿಂದಾಗಿ ರೈತರಿಗೆ ಸಾಕಷ್ಟು ಉಳಿತಾಯವಾಗಲಿದೆ, ಒಂದು ಬಾಟಲ್ ನ್ಯಾನೋ ಯೂರಿಯಾದ ಬೆಲೆ ಸುಮಾರು 240 ರೂಪಾಯಿಗಳು. ಇದು ಒಂದು ಚೀಲ ಯೂರಿಯಾಕ್ಕಿಂತ ಹತ್ತು ಪ್ರತಿಶತ ಕಡಿಮೆ ವೆಚ್ಚವಾಗಲಿದೆ. ಗುಜರಾತ್‌ನ ಅಹಮದಾಬಾದ್‌ನ ಕಲೋಲ್ ಕಾರ್ಖಾನೆಯಲ್ಲಿ ಸಾರಜನಕ ಆಧಾರಿತ ಗೊಬ್ಬರವನ್ನು ಉತ್ಪಾದಿಸಲಾಗುವುದು ಎಂದು ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಉದಯಶಂಕರ ಅವಸ್ಥಿ ತಿಳಿಸಿದ್ದಾರೆ.
ಇದು ಸಂಪೂರ್ಣವಾಗಿ ಮೇಕ್ ಇನ್ ಇಂಡಿಯಾದ ಅಡಿಯಲ್ಲಿದೆ. ಕಂಪನಿಯು ವಾರ್ಷಿಕವಾಗಿ 25 ಮಿಲಿಯನ್ ಬಾಟಲಿಗಳನ್ನು ಉತ್ಪಾದಿಸಲು ಯೋಜಿಸಿದೆ. 500 ಮಿಲಿ ಬಾಟಲ್ ನ್ಯಾನೋ ಯೂರಿಯಾವು 45 ಕೆಜಿ ಯೂರಿಯಾಕ್ಕೆ ಸಮಾನವಾಗಿರುತ್ತದೆ ಎಂದು ಅವಸ್ಥಿಯವರು ಹೇಳಿದರು. ಈ ಹೊಸ ಉತ್ಪನ್ನದಿಂದ ಯೂರಿಯಾವನ್ನು ಬಳಸುವುದರಿಂದ ದೇಶದಲ್ಲಿ ಬಳಕೆ ಶೇಕಡಾ 50 ರಷ್ಟು ಕಡಿಮೆಯಾಗುತ್ತದೆ. ದೇಶವು ಪ್ರಸ್ತುತ 30 ದಶಲಕ್ಷ ಟನ್ ಯೂರಿಯಾವನ್ನು ಬಳಸುತ್ತದೆ ಮತ್ತು ರೈತರು ಇದನ್ನು ಹೆಚ್ಚು ಬಳಸುತ್ತಾರೆ. ಪ್ರಸ್ತುತ, ಎಕರೆಗೆ 100 ಕೆಜಿ ಯೂರಿಯಾ ಅಗತ್ಯವಿದೆ. ಎಕರೆಗೆ ಒಂದು ಬಾಟಲ್ ನ್ಯಾನೋ ಗೊಬ್ಬರ ಅಥವಾ ಒಂದು ಚೀಲ ಯೂರಿಯಾ ಬೇಕಾಗುತ್ತದೆ. ಭಾರತೀಯ ಕೃಷಿ ಸಂಶೋಧನಾ ಮಂಡಳಿಯ ಸಹಾಯದಿಂದ ದೇಶದ 11000 ಸ್ಥಳಗಳಲ್ಲಿ ಇಫ್ಕೊ ಪ್ರಯೋಗ ನಡೆಸುತ್ತಿದೆ. ಮೂಲ - ಕೃಷಿ ಜಾಗರಣ,4 ಡಿಸೆಂಬರ್ 2019 ಈ ಮಾಹಿತಿಯು ನಿಮಗೆ ಉಪಯುಕ್ತವೆನಿಸಿದರೆ, ಫೋಟೋ ಕೆಳಗಿನ ಹಳದಿ ಹೆಬ್ಬೆರಳಿನ ಗುರುತನ್ನು ಕ್ಲಿಕ್ ಮಾಡಿ ಮತ್ತು ಕೆಳಗಿನ ಆಯ್ಕೆಗಳ ಮೂಲಕ ಅದನ್ನು ನಿಮ್ಮ ಎಲ್ಲಾ ರೈತ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.
981
1