ಗುರು ಜ್ಞಾನಅಗ್ರೋಸ್ಟಾರ್ ಅಗ್ರೋನೊಮಿ ಸೆಂಟರ್ ಆಫ್ ಎಕ್ಸೆಲೆನ್ಸ್
ಕಡಲೆಯಲ್ಲಿ ಹಸಿರು ಕಾಯಿ ಕೊರಕದ ಸಮಗ್ರ ಕೀಟ ನಿರ್ವಹಣೆ
ಚಳಿಗಾಲದಲ್ಲಿ ಕಡಲೆ ನೀರಾವರಿ ಅಥವಾ ನೀರಾವರಿವಲ್ಲದ ಬೆಳೆಯಾಗಿ ಎಂದು ಭಾರತದಾದ್ಯಂತ ಬೆಳೆಯಲಾಗುತ್ತಿದೆ. ಬಿತ್ತನೆಯಿಂದ ಕೊಯ್ಲಿನ ವರೆಗೆ ಮಾತ್ರ ಹಸಿರು ಕಾಯಿ ಕೊರಕದ ಈ ಬೆಳೆಯಲ್ಲಿ ಹಾನಿಯನ್ನುಂಟು ಮಾಡುತ್ತದೆ. ಮೊಟ್ಟೆಯಿಂದ ಹೊರ ಬಂದ ಮರಿಹುಳುಗಳು ಮೊದಲು ಕೋಮಲವಾದ ಎಲೆಗಳ ಎಪಿಡರ್ಮಲ್ ಪದರವನ್ನು ಅಥವಾ ಬೀಜಕೋಶ ಕೆರೆದು ತಿನ್ನುತ್ತವೆ. ಈ ಮರಿಹುಳುಗಳು ಪ್ರಕೃತಿಯಲ್ಲಿ ವಿವಿಧ ಬೆಳೆಗಳ ಮೇಲೆ ಮತ್ತು ಹೊಟ್ಟೆಬಾಕತನದ ಪ್ರವರ್ತಿಯಿಂದಾಗಿ ಹಲವಾರು ಬೆಳೆಗಳಿಗೆ ಹಾನಿಕಾರಕವಾಗಿದೆ. ಕಾಯಿ ರಚನೆಯ ಸಮಯದಲ್ಲಿ, ಮರಿಹುಳುಗಳು ಅಭಿವೃದ್ಧಿ ಹೊಂದುತ್ತಿರುವ ಕಾಯಿ ಮತ್ತು ಬೀಜದ ಮೇಲೆ ರಂಧ್ರವನ್ನು ಮಾಡುತ್ತವೆ. ಆಗ್ಗಾಗೆ , ಮರಿಹುಳುಗಳು ಸಂಪೂರ್ಣವಾಗಿ ಕಾಯಿಯನ್ನು ಪ್ರವೇಶಿಸಿ ಸಂಪೂರ್ಣವಾಗಿ ಅಭಿವೃದ್ಧಿ ಹೊಂದುತ್ತಿರುವ ಬೀಜಗಳನ್ನು ತಿನ್ನುತ್ತವೆ._x000D_ _x000D_ ಈ ಕೀಟವನ್ನು ನಿಯಂತ್ರಿಸಲು ಬೆಳೆಯ ಪಲ್ಲಟನೆಯು ಸಹ ಮಾಡಬೇಕಾಗಿದೆ._x000D_ _x000D_  ಹೊಲದಲ್ಲಿ, ಪ್ರತಿ ಎಕರೆಗೆ ೪೦ ಮೋಹಕ ಬಲೆಗಳನ್ನು ಸ್ಥಾಪಿಸಿ._x000D_ _x000D_  ಸಾಧ್ಯವಾದರೆ, ಚೆಂಡು ಹೂವನ್ನು ಹೊಲದಲ್ಲಿ ಮತ್ತು ಸುತ್ತಮುತ್ತಲು ಬಲೆ ಬೆಳೆಯಾಗಿ ಬೆಳೆಯಿರಿ._x000D_  ಒಂದು ಎಕರೆಗೆ ಹೊಲದಲ್ಲಿ ಬೆಳಕಿನ ಬಲೆಗಳನ್ನು ಅನ್ವಯಿಸುವ ಮೂಲಕ, ಪ್ರೌಢ ಪತಂಗಗಳನ್ನು ಆಕರ್ಷಿಸುವ ಮೂಲಕ ಉತ್ತಮವಾಗಿ ಹತೋಟಿಯನ್ನು ಮಾಡಬಹುದು._x000D_ _x000D_  ಕಡಲೆ ಬೆಳೆಯಲ್ಲಿ, "ಟಿ" ಆಕಾರದ ಕೋಲಿನಿಂದ ಮಾಡಿದ ಕೃತಕ ಪಕ್ಷಿತಾಣಗಳನ್ನು ೨೫-೫೦ ಪ್ರತಿ ಎಕರೆ ದರದಲ್ಲಿ ಸ್ಥಾಪಿಸಬೇಕು. ಇದು ಪಕ್ಷಿಗಳ ಹೊಲದಲ್ಲಿ ಕುಳಿತು ಕೀಟಗಳ ನೈಸರ್ಗಿಕ ಮಾರ್ಗವನ್ನು ನಿಯಂತ್ರಿಸಲು ಅನುವು ಮಾಡಿಕೊಡುತ್ತದೆ._x000D_ _x000D_  ಪ್ರೌಢ ಚಿಟ್ಟೆ ಬಲೆಗೆ ಸಿಕ್ಕಿ ಬಿದ್ದ ತಕ್ಷಣ, ಬೇವಿನ ಕಷಾಯ @ 5%ನ್ನು ಸಿಂಪಡಿಸಿ. ಬೇವಿನ ಕಷಾಯದಲ್ಲಿ ಸ್ಟಿಕ್ಕರ್ ಬಳಸಿ ಇದರಿಂದ ಕಷಾಯವು ಎಲ್ಲಾ ಎಲೆಗಳ ಮೇಲೆ ಹರಡಲು ಸಹಾಯಕವಾಗುತ್ತದೆ._x000D_ _x000D_  ನಫಾಟಿಯಾ ಅಥವಾ ಅರ್ಡುಶಿ ಅಥವಾ ಕಹಿ ಮೆಹದಿ ಅಥವಾ ಜತ್ರೋಫಾ ಎಲೆಗಳ ಕಷಾಯವನ್ನು @ 5% ನ್ನು ಆರಂಭಿಕ ಹಂತದಲ್ಲಿ ಕಾಯಿ ಕೊರಕದ ನಿಯಂತ್ರಣಕ್ಕಾಗಿ ಸಿಂಪಡಿಸಬಹುದು.ಕಾಯಿ ಕೊರಕದ ನಿಯಂತ್ರಣಕ್ಕಾಗಿ, ಹೆಲಿಕೋವರ್ಪಾ _x000D_ _x000D_  ನಂಜಾಣುವಿನಿಂದ ತಯಾರಿಸಿದ ಹೆಚಎಲ್ಎನ್ ಪಿವಿ@೨೫೦ ಮಿಲೀ ಕೀಟನಾಶಕವನ್ನು ೧೦೦-೨೦೦ ಮಿಲೀಯನ್ನು ನೀರಿಗೆ ಬೇರೆಸಿ ಸಿಂಪಡಿಸಬೇಕು._x000D_ _x000D_  ಹೆಚ್ಚಿನ ಸಂಖ್ಯೆಯಲ್ಲಿ, ಕೊರಕ ಹುಳುವಿನ ಬಾಧೆ ಇದ್ದಲ್ಲಿ ಫೆನ್ವಾಲೆರೇಟ್ 20 ಇಸಿ @ 10 ಮಿಲಿ ಅಥವಾ ಲ್ಯಾಂಬ್ಡಾ ಸಿಹೆಲೋಥ್ರಿನ್ 5 ಇಸಿ @ 5 ಮಿಲಿ ಅಥವಾ ಲುಫೆನುರಾನ್ 5 ಇಸಿ @ 10 ಮಿಲಿ ಅಥವಾ ಥಿಯೋಡಿಕಾರ್ಬ್ 75 ಡಬ್ಲ್ಯೂಪಿ @ 20 ಗ್ರಾಂ ಅಥವಾ ಕ್ಲೋರಾಂಟ್ರಾನಿಲಿಪ್ರೊಲ್ 18.5 ಎಸ್ಸಿ @ 3 ಮಿಲಿ ಅಥವಾ ಎಮಾಮೆಕ್ಟಿನ್ ಬೆಂಜೊಯೇಟ್ 5 ಎಸ್ಜಿ @ 5 ಗ್ರಾಂ ಅಥವಾ ಫ್ಲುಬೆಂಡಿಯಾಮೈಡ್ 20 ಡಬ್ಲ್ಯೂಜಿ @ 5 ಮಿಲಿಯನ್ನು 10 ಲೀಟರ್ ನೀರಿಗೆ ಬೇರೆಸಿ ಸಿಂಪಡಿಸಿ._x000D_ _x000D_  ದೊಡ್ಡ ಮರಿಹುಳುಗಳನ್ನು ಕೀಟನಾಶಕಗಳಿಂದ ನಿಯಂತ್ರಿಸಲಾಗುವುದಿಲ್ಲ. ಕೈಯಿಂದ ಸಂಗ್ರಹಿಸಿ ಅವುಗಳನ್ನು ನಾಶಮಾಡುವುದು ಉತ್ತಮ ಹತೋಟಿ ಕ್ರಮವಾಗುತ್ತದೆ._x000D_ _x000D_ ಮೂಲ- ಅಗೋಸ್ಟಾರ್ ಅಗ್ರೋನೊಮಿ ಸೆಂಟರ್ ಆಫ್ ಎಕ್ಸೆಲೆನ್ಸ್ _x000D_ _x000D_ ಈ ಮಾಹಿತಿಯು ನಿಮಗೆ ಸಹಾಯಕವಾಗಿದ್ದರೆ, ಫೋಟೋದ ಕೆಳಗಿನ ಹಳದಿ ಹೆಬ್ಬೆರಳಿನ ಗುರುತನ್ನು ಕ್ಲಿಕ್ ಮಾಡಿ ಮತ್ತು ಕೆಳಗಿನ ಆಯ್ಕೆಯ ಮೂಲಕ ನಿಮ್ಮ ಎಲ್ಲಾ ರೈತ ಸ್ನೇಹಿತರೊಂದಿಗೆ ಹಂಚಿಕೊಳ್ಳಿ!_x000D_
377
0
ಕುರಿತು ಪೋಸ್ಟ್