AgroStar Krishi Gyaan
Pune, Maharashtra
07 Oct 19, 10:00 AM
ಸಲಹಾ ಲೇಖನಅಗ್ರೋಸ್ಟಾರ್ ಅಗ್ರೋನೊಮಿ ಸೆಂಟರ್ ಆಫ್ ಎಕ್ಸೆಲೆನ್ಸ್
ನರ್ಸರಿಯಲ್ಲಿ ಈರುಳ್ಳಿ ನಿರ್ವಹಣೆ
ಒಂದು ಎಕರೆ ನರ್ಸರಿಗಾಗಿ ಈರುಳ್ಳಿಯನ್ನು ೪ ರಿಂದ ೫ ಗುಂಟೆ ಭೂಮಿಗೆ ಬೇಕಾಗುತ್ತದೆ. ನರ್ಸರಿ ಮಾಡುವ ಜಾಗದಲ್ಲಿ ಗರಿಕೆ ಹುಲ್ಲು ಮತ್ತು ನೀರು ನಿಂತು ಇರುವ ಭೂಮಿಯನ್ನು ಆಯ್ಕೆ ಮಾಡಬಾರದು. ಸೂರ್ಯನ ಬೆಳಕು ಇರುವ ಸ್ಥಳದಲ್ಲಿ ನರ್ಸರಿ ಯಾವಾಗಲೂ ಮಾಡಬೇಕು. ಸಗಣಿಗಳಿಂದ ಕಳೆ ಬರುವ ಅಥವಾ ಕಳೆ ಬೆಳೆಯುವ ಸಾಧ್ಯತೆ ಇದ್ದರೆ , ಬೀಜಗಳನ್ನು ಬಿತ್ತನೆ ಮಾಡುವ ಮೊದಲು ಸಸಿ ಮಡಿಯನ್ನು ತೇವಗೊಳಿಸಬೇಕು . ಕಳೆಗಳನ್ನು ಬಿತ್ತಿದ ನಂತರ ಕಳೆಗಳು ಬಂದರೆ ಖುರುಪಿಯಿಂದ ಕಳೆಗಳನ್ನು ತೆಗೆಯಬೇಕು.
• ಸಸಿ ಮಡಿಯಲ್ಲಿ ಸಸಿಗಳನ್ನು ತಯಾರಿಸಬೇಕು. ಸಸಿ ಮಡಿಯಲ್ಲಿ ಸಸಿಗಳು ಏಕರೂಪವಾಗಿ ಬೆಳೆಯುತ್ತವೆ. ಬೇರುಗಳ ಸುತ್ತ ಹೆಚ್ಚೋತ್ತು ನೀರು ನಿಂತಿರುವುದಿಲ್ಲ. ಆದ್ದರಿಂದ ಸಸಿಗಳು ಕೊಳೆಯುವುದಿಲ್ಲ. ನಾಟಿ ಮಾಡುವಾಗ ಮೊಳಕೆ ಸುಲಭವಾಗಿ ಕಿತ್ತು ತೆಗೆಯಬಹುದು. ಸಸಿಗಳು ದಪ್ಪವಾಗಿ ಮತ್ತು ವೇಗವಾಗಿ ಬೆಳೆಯುತ್ತವೆ. ಸಸಿ ಮಡಿಯು ಒಂದು ಮೀಟರ್ ಅಗಲ, ಮೂರರಿಂದ ನಾಲ್ಕು ಮೀಟರ್ ಉದ್ದವಿರಬೇಕು. ಸಸಿ ಮಡಿಯ ಎತ್ತರವು ೨ ಸೆಂ.ಮೀ ಆಗಿರಬೇಕು. ಸಸಿ ಮಡಿ ತಯಾರಿಸುವಾಗ, ಚೆನ್ನಾಗಿ ಕೊಳೆತ ಸಗಣಿ ಮತ್ತು ಟ್ರೈಕೊಡರ್ಮಾ ಮಿಶ್ರಣವನ್ನು ಸಸಿ ಮಡಿಗೆ ಬೇರೆಸಬೇಕು. ಬೀಜದ ಮೊಳಕೆಯೊಡೆಯುವಿಕೆಯು ಉತ್ತಮವಾಗಿದ್ದರೆ, ೧ ಎಕರೆಗೆ ೨.೫ ರಿಂದ ೩ ಕೆಜಿ ಬೀಜ ಸಾಕು. ಬಿತ್ತನೆ ಮಾಡುವ ಮೊದಲು ಬೀಜಗಳನ್ನು ೧.೫ ರಿಂದ ೫ ಗ್ರಾಂ ಥೈರಾಮ್ ಅಥವಾ ಕ್ಯಾಪ್ಟನ್ ಅಥವಾ ಕಾರ್ಬೆಂಡಾಜಿಮ್ ನೊಂದಿಗೆ ಬೀಜೋಪಚಾರ ಮಾಡಬೇಕು. ಬೀಜಗಳನ್ನು ಬಿತ್ತಿದ ನಂತರ ಕಾಲುವೆ ನೀರಾವರಿಯ ವೇಗವನ್ನು ಕಡಿಮೆ ಮಾಡಬೇಕು. ಬಿತ್ತನೆಯ ನಂತರ, ೩-೫ ದಿನಗಳ ಮಧ್ಯಂತರದಲ್ಲಿ ಇತರ ನೀರಾವರಿನ್ನು ಕೊಡಬೇಕು. ಕಳೆ ಇದ್ದರೆ ಕಳೆ ತೆಗೆಯಬೇಕು. ಸಸ್ಯಗಳ ಸಾಲಿನಲ್ಲಿರುವ ಮಣ್ಣನ್ನು ಸಡಿಲಗೊಳಿಸಬೇಕು ಆದ್ದರಿಂದ ಸಸಿಗಳ ಬೇರುಗಳ ಸುತ್ತ ಗಾಳಿಯಾಡುವುದನ್ನು ಮುಂದುವರಿಸುತ್ತದೆ. ಮರು ನಾಟಿ ಮಾಡುವ ಮೊದಲು ನೀರನ್ನು ಕಡಿಮೆ ಮಾಡಿ. ಆದ್ದರಿಂದ, ಸಸಿಗಳು ಗಟ್ಟಿಯಾಗುತ್ತವೆ. ಸಸಿಗಳನ್ನು ಕಿತ್ತು ತೆಗೆಯುವ ಮುನ್ನ 2 ಗಂಟೆಗಳ ಕಾಲ ಸಸಿಗಳಿಗೆ ನೀರುಣಿಸಬೇಕು, ಆದ್ದರಿಂದಸಸಿಗಳನ್ನು ತೆಗೆಯಲು ಸುಲಭವಾಗುತ್ತದೆ. ಮುಂಗಾರಿನ ಹಂಗಾಮಿನಲ್ಲಿ ೩ ರಿಂದ ೭ ದಿನಗಳಲ್ಲಿ ಸಸಿಗಳು ಸಿದ್ಧವಾಗುತ್ತವೆ. ಉಲ್ಲೇಖ - ಅಗೋಸ್ಟಾರ್ ಅಗ್ರೋನೊಮಿ ಸೆಂಟರ್ ಆಫ್ ಎಕ್ಸೆಲೆನ್ಸ್ ಈ ಮಾಹಿತಿಯನ್ನು ಉಪಯುಕ್ತವೆಂದು ನೀವು ತಿಳಿದುಕೊಂಡರೆ, ಈ ಚಿತ್ರದ ಅಡಿಯಲ್ಲಿ ಹಳದಿ ಹೆಬ್ಬೆರಳಿನ ಚಿನ್ಹೆ ಮೇಲೆ ಒತ್ತಿ ಮತ್ತು ಕೆಳಗೆ ನೀಡಿರುವ ಆಯ್ಕೆಗಳನ್ನು ಬಳಸಿಕೊಂಡು ನಿಮ್ಮ ರೈತ ಸ್ನೇಹಿತರೊಂದಿಗೆ ಈ ಮಾಹಿತಿ ಯನ್ನು ಹಂಚಿಕೊಳ್ಳಿ.
401
10