ಗುರು ಜ್ಞಾನಅಗ್ರೋಸ್ಟಾರ್ ಅಗ್ರೋನೊಮಿ ಸೆಂಟರ್ ಆಫ್ ಎಕ್ಸೆಲೆನ್ಸ್
ಸೌತೆಕಾಯಿ ಗುಂಪಿಗೆ ಸೇರಿದ ಬೆಳೆಗಳಲ್ಲಿ ಹಣ್ಣು ನೊಣದ ಸಮಗ್ರ ನಿರ್ವಹಣೆ
ಸೌತೆಕಾಯಿ ಗುಂಪಿಗೆ ಸೇರಿದ ಬೆಳೆಗಳಲ್ಲಿ ಹಣ್ಣು ನೊಣದಿಂದಾಗಿ ಬಹುತೇಕ ಬೆಳೆಗಳಿಗೆ ಹಾನಿಗೊಳಗಾಗುತ್ತವೆ, ತುಪ್ಪ ಹಿರೇಕಾಯಿ,ಹಾಗಲಕಾಯಿ,ಕುಂಬಳಕಾಯಿ,ಸೌತೆಕಾಯಿಗಳು,ಹಿರೇಕಾಯಿ,ಕಲ್ಲಂಗಡಿ ಮತ್ತು ಇತರವುಗಳು. ಸೌತೆಕಾಯಿ ಗುಂಪಿಗೆ ಸೇರಿದ ಬೆಳೆಗಳಲ್ಲಿ ಹಣ್ಣು ನೊಣವು ತನ್ನ ತತ್ತಿ ಇಡುವ ಅಂಗಾಂಶದಿಂದ ಚುಚ್ಚುವುದರ ಮೂಲಕ ತನ್ನ ತತ್ತಿ ಗಳನ್ನು ಇಟ್ಟು ಕಾಯಿಯ ಒಳ ಭಾಗವು ತುಂಬಾ ಮೃದುವಾಗುತ್ತದೆ. ನಂತರ ಕಂದು ಬಣ್ಣಕ್ಕೆ ಬದಲಾಗುತ್ತದೆ. ತತ್ತಿಯಿಂದ ಮರಿಹುಳುಗಳು ಹೊರಬಂದು ಮರಿಹುಳುಗಳು ಹಣ್ಣಿನ ಒಳಗಿನ ತಿರುಳನ್ನು ತಿನ್ನಲಾರಂಭಿಸುತ್ತದೆ ಮತ್ತು ಅದರಿಂದಾಗಿ ಹಣ್ಣು ಕೊಳೆಯುತ್ತದೆ. ಬಾಧೆಗೊಂಡ ಹಣ್ಣು ಉದರಲಾರಂಭಿಸುತ್ತವೆ. ಮಾರ್ಚ್ ನಿಂದ ಏಪ್ರಿಲ್ನಲ್ಲಿ ಹಣ್ಣು ನೊಣದ ಬಾಧೆಯು ಹೆಚ್ಚಾಗಿ ಸಂಭವಿಸುತ್ತದೆ.
ನಿರ್ವಹಣೆ:_x000D_  ಹಣ್ಣಿನ ನೊಣಗಳ ಕೋಶಾವಸ್ಥೆಯನ್ನು ನಾಶಮಾಡಲು ಬೆಳೆದ ಮೇಲೆ ಆಳವಾದ ಮಾಗಿ ಉಳುಮೆಗಳನ್ನು ಅನುಸರಿಸಬೇಕು ._x000D_  ಬಾಧೆಗೊಂಡಿರುವ ಹಣ್ಣುಗಳನ್ನು ಸಂಗ್ರಹಿಸಿ ಕನಿಷ್ಠ 15 ಸೆಂ.ಮೀ ಆಳದಲ್ಲಿ ಹೂತು ಹಾಕಬೇಕು ._x000D_  ಸಾಮಾನ್ಯ ಹಣ್ಣುಗಳನ್ನು ಮೊದಲ ಬಾರಿ ಪಕ್ವತೆಗೆ ಬಂದ ಮೇಲೆ ಗಿಡದಿಂದ ತೆಗೆದುಕೊಳ್ಳುವುದು ._x000D_  ಒಂದೇ ಅಂತರದಲ್ಲಿ ಹೆಕ್ಟೇರಿಗೆ 16 ಕ್ಯೂ-ಲ್ಯೂರ್ ಬಲೆಗಳನ್ನು ಸ್ಥಾಪಿಸಿ._x000D_  ಈ ಹಣ್ಣು ನೊಣಗಳನ್ನು ನಿಯಂತ್ರಿಸುವಲ್ಲಿ ಕೀಟನಾಶಕ ಸಿಂಪಡಿಸುವುದು ಸೂಕ್ತವಲ್ಲ._x000D_  ಹಣ್ಣಿನ ನೊಣವನ್ನು ನಾಶಪಡಿಸಲು ವಿಷ ಪಾಷಣವನ್ನು ಸಿಂಪಡಿಸಿ ._x000D_ ವಿಷಯುಕ್ತ ಪಾಷಣ ಸಿದ್ಧತೆಗಾಗಿ: 500 ಗ್ರಾಂ ಬೆಲ್ಲವನ್ನು 10 ಲೀಟರ್ ನೀರಿನಲ್ಲಿ ಕರಗಿಸಿ ರಾತ್ರಿ ಇಡಿ ಇಡಬೇಕು. 40 ಲೀಟರ್ ಹೆಚ್ಚುವರಿ ನೀರು ಸೇರಿಸಿ + ಕ್ವಿನಲ್ಫೋಸ್ 25 ಇಸಿ 50 ಮಿಲಿ ಪ್ರತಿ ಎರಡನೇ ದಿನ ಮತ್ತು ಚೆನ್ನಾಗಿ ಮಿಶ್ರಣ ಮಾಡಿ ಈ ದ್ರಾವಣವನ್ನು ಸರಿಯಾಗಿ ಸಿಂಪಡಿಸಿ.ಒಂದು ವಾರದ ಮಧ್ಯಂತರದ ನಂತರ ಸಿಂಪಡಣೆಯನ್ನು ಪುನರಾವರ್ತಿಸಿ._x000D_ ಡಾ. ಟಿ. ಎಂ. ಭೋರ್ಪೋಡಾ, ಎಕ್ಸ್. ಕೀಟಶಾಸ್ತ್ರದ ಪ್ರೊಫೆಸರ್, ಬಿ. ಎ. ಕೃಷಿ ಕಾಲೇಜು, ಆನಂದ್ ಕೃಷಿ ವಿಶ್ವವಿದ್ಯಾಲಯ, ಆನಂದ್- 388 110 (ಗುಜರಾತ, ಭಾರತ) ಈ ಮಾಹಿತಿಯನ್ನು ಉಪಯುಕ್ತವೆಂದು ನೀವು ತಿಳಿದುಕೊಂಡರೆ, ಈ ಚಿತ್ರದ ಅಡಿಯಲ್ಲಿ ಹಳದಿ ಹೆಬ್ಬೆರಳಿನ ಚಿನ್ಹೆ ಮೇಲೆ ಒತ್ತಿ ಮತ್ತು ಕೆಳಗೆ ನೀಡಿರುವ ಆಯ್ಕೆಗಳನ್ನು ಬಳಸಿಕೊಂಡು ನಿಮ್ಮ ರೈತ ಸ್ನೇಹಿತರೊಂದಿಗೆ ಈ ಮಾಹಿತಿ ಯನ್ನು ಹಂಚಿಕೊಳ್ಳಿ.
149
0
ಕುರಿತು ಪೋಸ್ಟ್