ಸಾವಯವ ಕೃಷಿಅಗ್ರೋಸ್ಟಾರ್ ಅಗ್ರೋನೊಮಿ ಸೆಂಟರ್ ಆಫ್ ಎಕ್ಸೆಲೆನ್ಸ್
ಮೆಣಸಿನಕಾಯಿ ಮತ್ತು ಬೆಳ್ಳುಳ್ಳಿ ಕಷಾಯ ತಯಾರಿಕೆ: ವಿವಿಧ ಬೆಳೆಗಳಲ್ಲಿ ಕೀಟ ಪೀಡೆಯನ್ನು ನಿಯಂತ್ರಣ
ಪರಿಚಯ: ಮೆಣಸಿನಕಾಯಿ ಮತ್ತು ಬೆಳ್ಳುಳ್ಳಿ ಕಷಾಯ ಬೆಳೆಗಳಲ್ಲಿ ಪ್ರಮುಖ ಕೀಟ ಪೀಡೆಗಳನ್ನು ನಿರ್ವಹಿಸಲು ಸಸ್ಯಜನ್ಯ ಕೀಟನಾಶಕಗಳನ್ನು ತಯಾರಿಸುವ ಸ್ಥಳೀಯ ವಿಧಾನಗಳಲ್ಲಿ ಒಂದಾಗಿದೆ, ಈ ಕೀಟನಾಶಕವನ್ನು ಕೀಟ ಪೀಡೆಯು ಇದು ಬೆಳೆಗಳಿಗೆ ಆರ್ಥಿಕ ಹಾನಿಯನ್ನುಂಟು ಮಾಡುವುದನ್ನು ನಿಯಂತ್ರಿಸಬಹುದು. ಮೆಣಸಿನಕಾಯಿ ಮತ್ತು ಬೆಳ್ಳುಳ್ಳಿ ಕಷಾಯದಿಂದ ನಿಯಂತ್ರಿಸಲ್ಪಡುವ ಕೀಟ ಪೀಡೆಗಳಂದರೆ ಕಾಯಿ ಕೊರಕ , ಸಸ್ಯ ಹೇನುಗಳು, ಸೈನಿಕ ಹುಳು ,ಹತ್ತಿಯಲ್ಲಿ ಕಾಯಿ ಕೊರಕ, ಹಣ್ಣಿನ ಕೊರೆಕ, ಎಲೆ ಸುರುಳಿ ಸುತ್ತುವ ಕೀಟ, ಕುಡಿ ಕೊರಕ , ಥ್ರಿಪ್ಸ್ ನುಶಿ , ಬಿಳಿ ನೊಣ . ಈ ರೀತಿಯ ಸಸ್ಯಜನ್ಯ ಕೀಟನಾಶಕಗಳನ್ನು ಬಳಸುವುದರಿಂದ ರಾಸಾಯನಿಕ ಅವಶೇಷ / ಕೀಟನಾಶಕ ಉಳಿಕೆ ಮುಕ್ತ ಹೆಚ್ಚಿನ ಇಳುವರಿಯನ್ನು ಪಡೆಯಲು ಸಹಾಯ ವಾಗು ತ್ತದೆ. ಬಳಸಬೇಕಾದ ವಸ್ತುಗಳು: 1. 50 ಗ್ರಾಂ ಬೆಳ್ಳುಳ್ಳಿ 2. ಹಸಿ ಮೆಣಸಿನಕಾಯಿ 25 ಗ್ರಾಂ 3. ಸೀಮೆ ಎಣ್ಣೆಯ 10 ಮಿಲಿ 4. 12 ಗ್ರಾಂ ಸೋಪ್ ಪುಡಿ 5. 3 ಲೀಟರ್ ನೀರು 6. ಗ್ರೈಂಡರ್ 7. 1 ಎಕರೆಗೆ 1 ಕೆಜಿ ಬೆಳ್ಳುಳ್ಳಿ ಮತ್ತು ½ ಕೆಜಿ ಮೆಣಸಿನಕಾಯಿ ಅಗತ್ಯವಿದೆ. ತಯಾರಿಕೆಯ ವಿಧಾನ: 1. ಬೆಳ್ಳುಳ್ಳಿಯನ್ನು ಪೇಸ್ಟ್ ಆಗಿ ಮಾಡಿ, ಬೆಳ್ಳುಳ್ಳಿ ಮತ್ತು ಮೆಣಸಿನಕಾಯಿ ಪೇಸ್ಟ್ ಅನ್ನು ಸೀಮೆ ಎಣ್ಣೆಯಲ್ಲಿ ರಾತ್ರಿಯಿಡೀ ನೆನೆಸಿ (12 ಗಂ). 2. 50 ಮಿಲಿ ನೀರು ಸೇರಿಸಿ. 3. ಎಲ್ಲಾ ಪದಾರ್ಥಗಳನ್ನು ಸೋಪ್ ಪುಡಿಯೊಂದಿಗೆ ನೀರಿನಲ್ಲಿ ಬೇರೆಸಿ . 4. ಕಷಾಯವನ್ನು ಸೋಸಿಕೊಳ್ಳಬೇಕು ಮತ್ತು ಮಿಶ್ರಣ ಮಾಡಿ, ಸಿಂಪಡಿಸುವ ಮೊದಲು ಚೆನ್ನಾಗಿ ಬೆರೆಸಿ. ಬಳಸುವ ವಿಧಾನ: ಬಾಧೆಗೊಂಡಿರುವ ಸಸ್ಯಗಳ ಮೇಲೆ 10 ಮಿಲಿ / ಲೀಟರ್ ನೀರನಲ್ಲಿ ಚೆನ್ನಾಗಿ ಸಿಂಪಡಿಸಿ. ಮೂಲ: ಅಗ್ರೋಸ್ಟಾರ್ ಅಗ್ರೋನೊಮಿ ಸೆಂಟರ್ ಆಫ್ ಎಕ್ಸೆಲೆನ್ಸ್
ಈ ಮಾಹಿತಿಯನ್ನು ಉಪಯುಕ್ತವೆಂದು ನೀವು ತಿಳಿದುಕೊಂಡರೆ, ಈ ಚಿತ್ರದ ಅಡಿಯಲ್ಲಿ ಹಳದಿ ಹೆಬ್ಬೆರಳಿನ ಚಿನ್ಹೆ ಮೇಲೆ ಒತ್ತಿ ಮತ್ತು ಕೆಳಗೆ ನೀಡಿರುವ ಆಯ್ಕೆಗಳನ್ನು ಬಳಸಿಕೊಂಡು ನಿಮ್ಮ ರೈತ ಸ್ನೇಹಿತರೊಂದಿಗೆ ಈ ಮಾಹಿತಿ ಯನ್ನು ಹಂಚಿಕೊಳ್ಳಿ.
230
0
ಕುರಿತು ಪೋಸ್ಟ್