ಗುರು ಜ್ಞಾನಅಗ್ರೋಸ್ಟಾರ್ ಅಗ್ರೋನೊಮಿ ಸೆಂಟರ್ ಆಫ್ ಎಕ್ಸೆಲೆನ್ಸ್
ದ್ವಿದಳ ಧಾನ್ಯದಲ್ಲಿ ಕಾಯಿಕೊರಕದ ಸಮಗ್ರ ಕೀಟ ನಿರ್ವಹಣೆ
ತೊಗರಿ ಮತ್ತು ಇತರ ದ್ವಿದಳ ಧಾನ್ಯಗಳ ಪ್ರಮುಖ ಕೀಟ (ಅಲಸಂದಿ,ಹೆಸರು, ಉದ್ದು ). ದ್ವಿದಳ ಎಲೆಗಳು, ಮಧ್ಯಮ ಮತ್ತು ಸ್ಥಳೀಯ ತಳಿಗಳು, ಹವಾಮಾನ ಸ್ಥಿತಿ, ಸಂತಾನೋತ್ಪತ್ತಿ ಪದ್ಧತಿ , ಸನಿಹದಲ್ಲಿ ಹೂಬಿಡುವಿಕೆಗಳು ಮರುಕಾ ಪ್ರಭೇದವು ಹೆಸರು, ಉದ್ದು, ಅವರೆಕಾಯಿ ಮತ್ತು ಧೈನಚಾ ಎಲೆಗಳಿಗೂ ಹಾನಿಯನ್ನು ಉಂಟುಮಾಡುತ್ತದೆ. ಈ ಕೈಕೊರಕದ ಮರಿಹುಳುಗಳು ಹೂವುಗಳು, ಮೊಗ್ಗುಗಳು ಮತ್ತು ಅಭಿವೃದ್ಧಿಶೀಲ ಬೀಜಕೋಶಗಳನ್ನು ಕೂಡಾ ಬಾಧಿಸಿ ಬೆಳೆಯನ್ನು ಹಾನಿ ಮಾಡುತ್ತವೆ ಮತ್ತು ಬೆಳೆಯುವ ಕಾಯಿಗಳನ್ನು ತಿನ್ನುತ್ತವೆ. ಈ ಕೀಟವು ಎಲೆಗಳ ಮೇಲೆ ತನ್ನ ಲಾಲಾಗ್ರಂಥಿಯಿಂದ ಜಾಲಿಯನ್ನು ಮಾಡಿ ಎಲೆ ಮತ್ತು ಕಾಯಿಯನ್ನು ಬಾಧಿಸುತ್ತದೆ.
ಸಮಗ್ರ ಕೀಟ ನಿರ್ವಹಣೆ  ಆರಂಭಿಕ ಹಂತದಲ್ಲಿ, 10 ಲೀಟರ್ ನೀರಿಗೆ ಪ್ರತಿ ಲೀಟರಿಗೆ ಬೇವಿನ ಸೂತ್ರೀಕರಣವನ್ನು (5%) @ 40 ಗ್ರಾಂ, ಅಥವಾ ಬೇವಿನ ಎಣ್ಣೆ @ 50 ಮಿಲಿ.  ಅಗತ್ಯತೆಗೆ ಅನುಸಾರವಾಗಿ,ಸಿಪೆರ್ಮೆಥ್ರಿನ್ 4% ಇಸಿ @ 10 ಮಿಲಿ ಅಥವಾ ಲುಫುನುರಾನ್ 5.4% ಇಸಿ @ 10 ಮಿಲಿ ಅಥವಾ ಥಿಯೊಡಿಕಾರ್ಬ್ 75 ಡಬ್ಲ್ಯೂಪಿ @ 10 ಗ್ರಾಂ ಅಥವಾ ಕ್ಲೋರಂಟ್ರಾನಿಲಿಪ್ರೊಲ್ 18.5 ಎಸ್ಸಿ @ 3 ಮೀ . ಲೀ.  ಅಲಸಂದಿ ಮತ್ತು ಉದ್ದಿನಲ್ಲಿ ಎಮಾಮ್ಯಾಕ್ಟಿನ್ ಬೆಂಜೊಯೇಟ್ 5 ಡಬ್ಲ್ಯುಜಿ @ 5 ಗ್ರಾಂ ಅಥವಾ ಫ್ಲೂಬೆಂಡಿಯಾಮೈಡ್ 39.35% ಎಂ / ಎಮ್ ಎಸ್ಸಿ @ 2 ಮಿಲಿ ಅಥವಾ ಕ್ಲೋರಂಟ್ರಾನಿಲಿಪ್ರೊಲ್ 18.5 ಎಸ್ಸಿ @ 3 ಮಿಲೀ ನೀರಿಗೆ 10 ಲೀಟರ್ ನೀರಿನಲ್ಲಿ ಸಿಂಪಡಿಸಿ.ತೊಗರಿಯಲ್ಲಿ ಇಂಡೊಕ್ಸ್ಕಾರಾಬ್ 14.5 ಎಸ್ಸಿ @ 3.5 ಮೀ.ಲೀ. ಅಥವಾ ಎಮಾಮ್ಯಾಕ್ಟಿನ್ ಬೆಂಜೊಯೇಟ್ 5 ಎಸ್ಜಿ @ 3 ಗ್ರಾಂ 10 ಲೀಟರ್ ನೀರಿನಲ್ಲಿ  50% ಗಿಡಗಳ ಹೂಬಿಡುವ ಮತ್ತು 7-ದಿನಗಳ ನಂತರ ಎರಡನೇ ಸಿಂಪಡಣೆಯನ್ನು ಮಾಡಿ.ಹೆಸರಿನಲ್ಲಿ, ಕ್ಲೋರಂಟ್ರಾನಿಲಿಪೊರೆಲ್ 18.5 ಎಸ್ಸಿ @ 3 ಮಿಲೀ ಅಥವಾ ಫ್ಲೂಬೆಂಡಿಯಾಮೈಡ್ 39.35% ಎಮ್ / ಎಮ್ ಎಸ್ ಸಿ @ 2 ಲೀ. ಪ್ರತಿಯೊಂದು ಸಿಂಪಡಣೆಯಲ್ಲಿ ಕೀಟನಾಶಕಗಳನ್ನು ಬದಲಾಯಿಸಬೇಕು.  ಈ ಕೀಟ ನೈಸರ್ಗಿಕವಾಗಿ ಮರಿಹುಳುಗಳ ಪರತಂತ್ರಜೀವಿಯಿಂದಲೂ ಬಾಸಸ್ ರಿಲಾಟೈವಸ್ ನಿಯಂತ್ರಿಸಬಹುದು.  ಮರಿಹುಳುಗಳ ಪರತಂತ್ರಜೀವಿಗಳನ್ನು ಪರಿಸರದಲ್ಲಿ ಸಂರಕ್ಷಿಸಬೇಕು . ಡಾ. ಟಿ. ಎಂ. ಭೋರ್ಪೋಡಾ, ಎಕ್ಸ್. ಕೀಟಶಾಸ್ತ್ರದ ಪ್ರೊಫೆಸರ್, ಬಿ. ಎ. ಕೃಷಿ ಕಾಲೇಜು, ಆನಂದ್ ಕೃಷಿ ವಿಶ್ವವಿದ್ಯಾಲಯ, ಆನಂದ್- 388 110 (ಗುಜರಾತ, ಭಾರತ) ಈ ಮಾಹಿತಿಯನ್ನು ಉಪಯುಕ್ತವೆಂದು ನೀವು ತಿಳಿದುಕೊಂಡರೆ, ಈ ಚಿತ್ರದ ಅಡಿಯಲ್ಲಿ ಹಳದಿ ಹೆಬ್ಬೆರಳಿನ ಚಿನ್ಹೆ ಮೇಲೆ ಒತ್ತಿ ಮತ್ತು ಕೆಳಗೆ ನೀಡಿರುವ ಆಯ್ಕೆಗಳನ್ನು ಬಳಸಿಕೊಂಡು ನಿಮ್ಮ ರೈತ ಸ್ನೇಹಿತರೊಂದಿಗೆ ಈ ಮಾಹಿತಿ ಯನ್ನು ಹಂಚಿಕೊಳ್ಳಿ.
185
0
ಕುರಿತು ಪೋಸ್ಟ್