ಗುರು ಜ್ಞಾನಅಗ್ರೋಸ್ಟಾರ್ ಅಗ್ರೋನೊಮಿ ಸೆಂಟರ್ ಆಫ್ ಎಕ್ಸೆಲೆನ್ಸ್
ಬದನೆಯಲ್ಲಿ ಕುಡಿ ಮತ್ತು ಕಾಯಿ ಕೊರಕದ ಸಮಗ್ರ ಕೀಟ ನಿರ್ವಹಣೆ
ಬಾಧೆಯ ಲಕ್ಷಣಗಳು • ಕುಡಿ ಮತ್ತು ಕಾಯಿ ಕೊರಕವು ಅತಿಯಾದ ಹಾನಿಯನ್ನುಂಟು ಮಾಡುವ ಕೀಟಪೀಡೆಯಾಗಿದ್ದು, ಕುಡಿ ಮತ್ತು ಕಾಯಿ ಕೊರಕದ ಮರಿ ಹುಳುವು ಎಲೆ ಮತ್ತು ನವಿರಾದ ಕುಡಿಗಳನ್ನು ಬಾಧಿಸುತ್ತದೆ. ಕುಡಿ ಮತ್ತು ಕಾಯಿ ಕೊರಕದ ಬಾಧೆಯಿಂದಾಗಿ ಎಲೆ ಮತ್ತು ಹೂವಿನ ಮೊಗ್ಗು ಉದುರಲಾರಭಿಸುತ್ತವೆ. • ಮರಿಹುಳುಗಳ ಬಾಧೆಯಿಂದ ಕಾಯಿಗಳನ್ನು ಬಾಧಿಸುತ್ತವೆ. ಒಂದೇ ಮರಿಹುಳು ೪-೬ ಕಾಯಿಗಳನ್ನು ಬಾಧಿಸುತ್ತವೆ.ಬಾಧೆಗೊಂಡ ಕಾಯಿಗಳಲ್ಲಿ ವೃತ್ತಾಕಾರದ ರಂದ್ರಗಳು ಕಾಣಿಸಿಕೊಳುತ್ತವೆ. • ಬಾಧೆಗೊಂಡ ಕಾಯಿಯ ಹೊರ ಭಾಗದಲ್ಲಿ ಮರಿಹುಳುವಿನ ಹಿಕ್ಕೆಯನ್ನು ಕಾಣಬಹುದು ಆದರೆ ಇದರಿಂದಾಗಿ ಮಾರುಕಟ್ಟೆಯ ಮೌಲ್ಯವು ಕಡಿಮೆಯಾಗುತ್ತದೆ. ಸಮಗ್ರ ಕೀಟ ನಿರ್ವಹಣೆ : • ಎಕರೆಗೆ 10-15 ವೋಟಾ ಬಲೆಗಳನ್ನು ಸ್ಥಾಪಿಸಿ. • ಪದೆ ಪದೆ ಒಂದೆ ಬೆಳೆಯನ್ನು ಬೆಳೆಯುವುದನ್ನು ತಪ್ಪಿಸಬೇಕು. • ನರ್ಸರಿಯಿಂದ ಬದನೆಯ ಗಿಡಗಳನ್ನು ಸ್ಥಳಾಂತರ ಮಾಡುವ ಸಮಯವನ್ನು ಜೂನ್ ತಿಂಗಳ ೪ನೆ ವಾರಕ್ಕೆ ಹೊಂದುವ ಹಾಗೆ ಮಾಡಬೇಕು. • ಕುಡಿಗಳನ್ನು ಕ್ಲಿಪ್ ಮಾಡಬೇಕು ಮತ್ತು ಬಾಧೆಗೊಂಡ ಕಾಯಿಗಳನ್ನು ಕಿತ್ತು ನಾಶಪಡಿಸಬೇಕು. • ರಾಸಾಯನಿಕ
ನಿಯಂತ್ರಣ ಕ್ರಮಗಳು: • ಪರಾವಲಂಬಿ ಚಟುವಟಿಕೆಯನ್ನು ವೀಕ್ಷಿಸುತ್ತಿರಬೇಕು ಮತ್ತು ಆರಂಭದಲ್ಲಿ ಸಸ್ಯಜನ್ಯ ಕೀಟನಾಶಕಗಳನ್ನು ಬಳಸಿ. • ಹಸುವಿನ-ಮೂತ್ರ @ 20% ಜೊತೆಗೆ,ಬೇವಿನ ಎಲೆಯ ಕಷಾಯ,ಸೀತಾಫಲ ಬೀಜದ ಕಷಾಯ, ಲ್ಯಾಂಟಾನಾ ಕ್ಯಾಮೆರಾ ಎಲೆಯ ಕಷಾಯ ಇತ್ಯಾದಿಗಳನ್ನು ಸಿಂಪಡಣೆ ಮಾಡಬೇಕು @ @ 10%. • ಕ್ಲೋರಂಟ್ರಾನಿಲಿಪೊರೆಲ್ 18.5 ಎಸ್ಸಿ @ 4 ಮಿಲಿ ಅಥವಾ ಥಿಯಾಕ್ಲೋಪ್ರಿಡ್ 21.7 ಎಸ್ಸಿ @ 10 ಮಿಲಿ ಅಥವಾ ಎಮಾಮೇಕ್ಟಿನ್ ಟಿನ್ ಬೆಂಜೊಯೇಟ್ 5 ಡಬ್ಲ್ಯುಜಿ @ 4 ಗ್ರಾಂ ಅಥವಾ ಥಿಯೊಡಿಕಾರ್ಬ್ 75 ಡಬ್ಲ್ಯೂ @ 10 ಗ್ರಾಂ. • ಲ್ಯಾಂಬ್ಡ ಸೈಹಲೋಥ್ರಿನ್ 5 ಇಸಿ @ 5 ಮಿಲಿ ಅಥವಾ ಥೈಯಾಮೆಟನ್ 25 ಇಸಿ @ 10 ಮಿಲೀ ಅಥವಾ ಬೀಟಾ ಸೈಫ್ಲುಥ್ರೈನ್ 8.49% + ಇಮಿಡಾಕ್ಲೋಪ್ರಿಡ್ 19.81 ಓಡಿ @ 4 ಮಿಲಿ. • ಪ್ರತಿ ಸ್ಪ್ರೇ ನಲ್ಲಿ ಕೀಟನಾಶಕವನ್ನು ಬದಲಾಯಿಸಿ. • ಸುಗ್ಗಿಯ ನಂತರ ಬೆಳೆ ಉಳಿಕೆಗಳನ್ನು ನಾಶಮಾಡಿ. ಡಾ. ಟಿ. ಎಂ. ಭೋರ್ಪೋಡಾ, ಎಕ್ಸ್. ಕೀಟಶಾಸ್ತ್ರದ ಪ್ರೊಫೆಸರ್, ಬಿ. ಎ. ಕೃಷಿ ಕಾಲೇಜು, ಆನಂದ್ ಕೃಷಿ ವಿಶ್ವವಿದ್ಯಾಲಯ, ಆನಂದ್- 388 110 (ಗುಜರಾತ, ಭಾರತ) ಈ ಮಾಹಿತಿಯನ್ನು ಉಪಯುಕ್ತವೆಂದು ನೀವು ತಿಳಿದುಕೊಂಡರೆ, ಈ ಚಿತ್ರದ ಅಡಿಯಲ್ಲಿ ಹಳದಿ ಹೆಬ್ಬೆರಳಿನ ಚಿನ್ಹೆ ಮೇಲೆ ಒತ್ತಿ ಮತ್ತು ಕೆಳಗೆ ನೀಡಿರುವ ಆಯ್ಕೆಗಳನ್ನು ಬಳಸಿಕೊಂಡು ನಿಮ್ಮ ರೈತ ಸ್ನೇಹಿತರೊಂದಿಗೆ ಈ ಮಾಹಿತಿ ಯನ್ನು ಹಂಚಿಕೊಳ್ಳಿ.
702
3
ಕುರಿತು ಪೋಸ್ಟ್