ಸಲಹಾ ಲೇಖನಕೃಷಿ ಜಾಗರಣ್
ಪಾಲಿಹೌಸಿನ ಪ್ರಯೋಜನಗಳು
ವಿಶೇಷವಾಗಿ ಸಾವಯವ ಬೇಸಾಯಕ್ಕೆ ಆದ್ಯತೆ ನೀಡುವ ರೈತರಿಗೆ ಪಾಲಿಹೌಸ್ ತುಂಬಾ ಪ್ರಯೋಜನಕಾರಿಯಾಗಿದೆ. ಪಾಲಿಹೌಸ್ನ ಕೆಲವು ಲಾಭಗಳು ಇಲ್ಲಿವೆ.
 ನಾವು ಬೆಳೆಗಳನ್ನು ನಿಯಂತ್ರಿತ ತಾಪಮಾನದಲ್ಲಿ ಬೆಳೆಸಬಹುದಾಗಿದೆ, ಇದರಿಂದಾಗಿ ಬೆಳೆ ನಷ್ಟ ಅಥವಾ ಹಾನಿಯ ಕಡಿಮೆ ಸಾಧ್ಯತೆ ಇರುತ್ತದೆ.  ವರ್ಷವಿಡೀ ಬೆಳೆಗಳನ್ನು ಯಾವುದೇ ತರಹದ ಬೆಳೆಯನ್ನು ಬೆಳೆಸಬಹುದು ಮತ್ತು ಯಾವುದೇ ನಿರ್ದಿಷ್ಟ ಕಾಲಕ್ಕಾಗಿ ಕಾಯಬೇಕಾಗಿಲ್ಲ.  ಪಾಲಿಹೌಸ್ನಲ್ಲಿ ಕಡಿಮೆ ಕೀಟಗಳು ಮತ್ತು ಸಸ್ಯ ರೋಗಗಳನ್ನು ಕಾಣಬಹುದಾಗಿದೆ.  ಬಾಹ್ಯ ವಾತಾವರಣವು ಬೆಳೆಗಳ ಬೆಳವಣಿಗೆಯ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ.  ಹೊಲದಲ್ಲಿಯ ಬೆಳೆಯ ತುಲನೆಯಲ್ಲಿ ಪಾಲಿಹೌಸ್ನಲ್ಲಿ ಬೆಳೆಯ ಉತ್ಪಾದನೆಯ ಗುಣಮಟ್ಟವು ಹೆಚ್ಚಾಗುತ್ತದೆ.  ಉತ್ತಮ ಒಳಚರಂಡಿ ಮತ್ತು ಗಾಳಿಯಾಡುವ ವ್ಯವಸ್ಥೆ ಕೂಡಾ ಗುಣಮಟ್ಟದಾಗಿರುತ್ತದೆ.  ಯಾವುದೇ ಕಾಲದಲ್ಲಿ ಸಸ್ಯಗಳಿಗೆ ಪಾಲಿಹೌಸ್ ಬೆಳೆಗಳಿಗೆ ಅನುಕೂಲಕರ ಹವಾಗುಣವನ್ನು ಒದಗಿಸುತ್ತದೆ.  ಇದು ಸುಮಾರು 5 ರಿಂದ 10 ಬಾರಿ ಇಳುವರಿಯನ್ನು ಹೆಚ್ಚಿಸುತ್ತದೆ.  ಬೆಳೆ ಕೊಯ್ಯಿಲಿಗೆ ಬರುವ ಅವಧಿಯನ್ನು ಕೂಡಾ ಕಡಿಮೆ ಮಾಡುತ್ತದೆ.  ರಸಗೊಬ್ಬರ ನೀಡುವುದು ಕೂಡಾ ಸುಲಭವಾಗಿರುತ್ತದೆ ಮತ್ತು ಹನಿ ನೀರಾವರಿ ಸಹಾಯದಿಂದ ಸ್ವಯಂಚಾಲಿತವಾಗಿ ನಿಯಂತ್ರಿಸಲ್ಪಡುತ್ತದೆ. ಮೂಲ: ಕೃಷಿ ಜಾಗರಣ ಈ ಮಾಹಿತಿಯನ್ನು ಉಪಯುಕ್ತವೆಂದು ನೀವು ತಿಳಿದುಕೊಂಡರೆ, ಈ ಚಿತ್ರದ ಅಡಿಯಲ್ಲಿ ಹಳದಿ ಹೆಬ್ಬೆರಳಿನ ಚಿನ್ಹೆ ಮೇಲೆ ಒತ್ತಿ ಮತ್ತು ಕೆಳಗೆ ನೀಡಿರುವ ಆಯ್ಕೆಗಳನ್ನು ಬಳಸಿಕೊಂಡು ನಿಮ್ಮ ರೈತ ಸ್ನೇಹಿತರೊಂದಿಗೆ ಈ ಮಾಹಿತಿ ಯನ್ನು ಹಂಚಿಕೊಳ್ಳಿ.
266
0
ಕುರಿತು ಪೋಸ್ಟ್