ಕೃಷಿ ವಾರ್ತಾಔಟ್ ಲುಕ್ ಕೃಷಿ
ಖಾದ್ಯ ಮತ್ತು ಖಾದ್ಯವಲ್ಲದ ತೈಲಗಳ ಆಮದು ಜುಲೈನಲ್ಲಿ ಶೇಕಡಾ 26 ರಷ್ಟು ಹೆಚ್ಚಾಗಿದೆ
ಖಾದ್ಯ ಮತ್ತು ಖಾದ್ಯವಲ್ಲದ ತೈಲಗಳ ಆಮದು ಜುಲೈನಲ್ಲಿ ಶೇಕಡಾ 26 ರಷ್ಟು ಏರಿಕೆಯಾಗಿ 14,12,001 ಟನ್‌ಗಳಿಗೆ ತಲುಪಿದ್ದು, ಇದು ದೇಶೀಯ ಮಾರುಕಟ್ಟೆಯಲ್ಲಿ ತೈಲಬೀಜಗಳ ಬೆಲೆಯ ಮೇಲೂ ಪರಿಣಾಮ ಬೀರುತ್ತಿದೆ. ಉತ್ಪಾದಕ ಮಾರುಕಟ್ಟೆಯಲ್ಲಿ ಸಾಸಿವೆ ಬೆಲೆ ಕ್ವಿಂಟಲ್‌ಗೆ 3,775 ರೂ.ಗಳಿಂದ 3,800 ರೂ.ಗಳಷ್ಟಿದ್ದರೆ, ಸಾಸಿವೆಗೆ ಕನಿಷ್ಠ ಬೆಂಬಲ ಬೆಲೆಯು (ಎಂಎಸ್‌ಪಿ) ಪ್ರತಿ ಕ್ವಿಂಟಲ್‌ಗೆ 4,200 ರೂ.ಗೆ ಕೇಂದ್ರ ಸರ್ಕಾರ ನಿಗದಿಪಡಿಸಿದೆ. ಸಾಲ್ವೆಂಟ್ ಎಕ್ಸ್‌ಟ್ರಾಕ್ಟರ್ಸ್ ಅಸೋಸಿಯೇಶನ್ ಆಫ್ ಇಂಡಿಯಾ (ಎಸ್‌ಇಎ) ಪ್ರಕಾರ, ಖಾದ್ಯ ಮತ್ತು ಖಾದ್ಯವಲ್ಲದ ತೈಲಗಳ ಆಮದು ಜುಲೈನಲ್ಲಿ 14,12,001 ಟನ್‌ಗಳಿಗೆ ಏರಿಕೆಯಾಗಿದ್ದು, ಕಳೆದ ವರ್ಷ ಇದೇ ಅವಧಿಯಲ್ಲಿ 11,19,538 ಟನ್‌ಗಳಷ್ಟು ಇತ್ತು. ದೇಶೀಯ ಮಾರುಕಟ್ಟೆಯಲ್ಲಿ ತೈಲಬೀಜಗಳ ಬೆಲೆಯ ಮೇಲೆ ಪರಿಣಾಮ ಬೀರಿದೆ. ಕೇಂದ್ರ ಸರ್ಕಾರವು ಐದು ತಿಂಗಳ ಹಿಂದೆ ಮಲೇಷ್ಯಾದಿಂದ ಆಮದು ಮಾಡಿಕೊಂಡ ಕಚ್ಚಾ ಪಾಮ್ ಎಣ್ಣೆ ಮತ್ತು ಆರ್‌ಬಿಡಿ ಪಾಮೋಲಿನ್ ತೈಲದ ಆಮದು ಶುಲ್ಕದಲ್ಲಿನ ಅಂತರದಿಂದಾಗಿ ಸಂಸ್ಕರಿಸಿದ ತೈಲದ ಆಮದು ತೀವ್ರವಾಗಿ ಹೆಚ್ಚಾಗಿದೆ. ಇದು ದೇಶೀಯ ಉದ್ಯಮದ ಮೇಲೂ ಪರಿಣಾಮ ಬೀರುತ್ತಿದೆ. ಮೂಲ - ಔಟ್ ಲುಕ್ ಕೃಷಿ, 14 ಆಗಸ್ಟ್ 2019
ಈ ಮಾಹಿತಿಯನ್ನು ಉಪಯುಕ್ತವೆಂದು ನೀವು ತಿಳಿದುಕೊಂಡರೆ, ಈ ಚಿತ್ರದ ಅಡಿಯಲ್ಲಿ ಹಳದಿ ಹೆಬ್ಬೆರಳಿನ ಚಿನ್ಹೆ ಮೇಲೆ ಒತ್ತಿ ಮತ್ತು ಕೆಳಗೆ ನೀಡಿರುವ ಆಯ್ಕೆಗಳನ್ನು ಬಳಸಿಕೊಂಡು ನಿಮ್ಮ ರೈತ ಸ್ನೇಹಿತರೊಂದಿಗೆ ಈ ಮಾಹಿತಿ ಯನ್ನು ಹಂಚಿಕೊಳ್ಳಿ.
42
0
ಕುರಿತು ಪೋಸ್ಟ್