ಪಶುಸಂಗೋಪನೆಅಗ್ರೋಸ್ಟಾರ್ ಅಗ್ರೋನೊಮಿ ಸೆಂಟರ್ ಆಫ್ ಎಕ್ಸೆಲೆನ್ಸ್
ಜಾನುವಾರುಗಳಿಗಾಗಿ ಆದರ್ಶ ಮತ್ತು ಆರಾಮದಾಯಕ ಕೊಟ್ಟಿಗೆಯ ಬಗ್ಗೆ ಮಾಹಿತಿ
ಜಾನುವಾರುಗಳ ಕೊಟ್ಟಿಗೆಯು ಸಾಮಾನ್ಯವಾಗಿ ಮಾನವ ವಸತಿಗಳಿಂದ ಸ್ವಲ್ಪ ದೂರದಲ್ಲಿರಬೇಕು, ಇದು ಸೂಕ್ತವಾಗಿರುತ್ತದೆ. ಕೊಟ್ಟಿಗೆ ಸುತ್ತಮುತ್ತಲಿನ ಪ್ರದೇಶಕ್ಕಿಂತ ಸ್ವಲ್ಪ ಎತ್ತರ ಮತ್ತು ಇಳಿಜಾರಾಗಿರಬೇಕು, ಮಳೆನೀರು ಮತ್ತು ಸೆಗಣಿ ಮೂತ್ರವನ್ನು ತೆಗೆಯಲು ಸುಲಭವಾಗುತ್ತದೆ.
ಜಾನುವಾರುಗಳ ಕೊಟ್ಟಿಗೆ ಸ್ವಚ್ಛವಾಗಿಡಲು, ಅರೆಗಲ್ಲು ಅಥವಾ ಸಿಮೆಂಟಿನ ಬೇಸಮೆಂಟ್ ಮಾಡುವುದರಿಂದಾಗಿ ನೀರಿನಿಂದ ತೊಳೆದು ಸ್ವಚ್ಛವಾಗಿಡಲು ಸಹಾಯವಾಗುತ್ತದೆ. ಜಾನುವಾರುಗಳಿಗೆ 24 ಗಂಟೆಗಳ ಕಾಲ ಶುದ್ಧ ಕುಡಿಯುವ ನೀರು ಕೊಡಬೇಕು. ಸರಿಯಾದ ಬೆಳಕು, ತೀವ್ರ ಶೀತ ಮತ್ತು ಬಿಸಿ ಗಾಳಿಯಿಂದ ಜಾನುವಾರುಗಳನ್ನು ರಕ್ಷಿಸಲು ಉತ್ತಮ ಕೊಟ್ಟಿಗೆಯನ್ನು ಹೊಂದಿರುವುದು ಬಹುಮುಖ್ಯ, ಆದ್ದರಿಂದ ದಿಕ್ಕು ಉತ್ತರ-ದಕ್ಷಿಣವಾಗಿರಬೇಕು. ಡೈರಿ ಉತ್ಪನ್ನಗಳನ್ನು ಸಾಗಿಸಲು ಸುಲಭವಾಗುವಂತೆ ಜಾನುವಾರುಗಳ ಕೊಟ್ಟಿಗೆಯ ಪಕ್ಕದಲ್ಲಿ ಸುಸಜ್ಜಿತ ರಸ್ತೆಯು ಹತ್ತಿರದಲ್ಲಿರಬೇಕು. ಜಾನುವಾರುಗಳ ಕೊಟ್ಟಿಗೆಯ ಹತ್ತಿರ ವನ್ಯಜೀವಿಗಳು ಮತ್ತು ಕಳ್ಳತನದ ಬೆದರಿಕೆ ಇರಬಾರದು. ವಿದ್ಯುತ್ ಸರಬರಾಜು ಸಾಕಷ್ಟು ಮತ್ತು ಪ್ರತಿದಿನವೀರಬೇಕು. ದಟ್ಟ ಮರಗಳನ್ನು ಪೂರ್ವ ಮತ್ತು ಪಶ್ಚಿಮ ದಿಕ್ಕಿಗೆ ಜಾನುವಾರುಗಳ ಬಳಿ ನೆಡಬೇಕು ಇದರಿಂದಾಗಿ ಚಳಿಗಾಲ ಮತ್ತು ಬೇಸಿಗೆ ಹವಾಮಾನದಿಂದ ಜಾನುವಾರುಗಳು ಚೇತರಿಸಿಕೊಳ್ಳಲು ಸಹಾಯವಾಗುತ್ತದೆ. ಈ ಮಾಹಿತಿಯನ್ನು ಉಪಯುಕ್ತವೆಂದು ನೀವು ತಿಳಿದುಕೊಂಡರೆ, ಈ ಚಿತ್ರದ ಅಡಿಯಲ್ಲಿ ಹಳದಿ ಹೆಬ್ಬೆರಳಿನ ಚಿನ್ಹೆ ಮೇಲೆ ಒತ್ತಿ ಮತ್ತು ಕೆಳಗೆ ನೀಡಿರುವ ಆಯ್ಕೆಗಳನ್ನು ಬಳಸಿಕೊಂಡು ನಿಮ್ಮ ರೈತ ಸ್ನೇಹಿತರೊಂದಿಗೆ ಈ ಮಾಹಿತಿ ಯನ್ನು ಹಂಚಿಕೊಳ್ಳಿ.
351
0
ಕುರಿತು ಪೋಸ್ಟ್