ಕೃಷಿ ವಾರ್ತಾಇಂಡಿಯನ್ ಎಕ್ಸ್‌ಪ್ರೆಸ್
ಹತ್ತಿಯಲ್ಲಿ ಮೊದಲ ಬಾರಿಗೆ ಸೈನಿಕ ಹುಳುವಿನ (ಫಾಲ್ ಆರ್ಮಿ ವರ್ಮ್) ಬಾಧೆ ವರದಿಯಾಗಿದೆ
ಈ ವರ್ಷ, ಮಹಾರಾಷ್ಟ್ರವು 8.60 ಲಕ್ಷ ಹೆಕ್ಟೇರ್ ಮೆಕ್ಕೆ ಜೋಳದ ಬೆಳೆಯ 2.63 ಲಕ್ಷ ಹೆಕ್ಟೇರ್ಗಿಂತ ಹೆಚ್ಚು ಸೈನಿಕ ಹುಳುವಿನ ಬಾಧೆಯನ್ನು ವರದಿ ಮಾಡಿದೆ. ಹತ್ತಿ ಸುಧಾರಣಾ ಕೇಂದ್ರದ (ಸಿಐಸಿ) ಕೀಟಶಾಸ್ತ್ರಜ್ಞರು ಹತ್ತಿ ಬೆಳೆಗೆ ಮೊದಲ ಬಾರಿಗೆ ಸೈನಿಕ ಹುಳುವಿನ (ಫಾಲ್ ಆರ್ಮಿ ವರ್ಮ್) ಬಾಧೆಯ ಪ್ರಕರಣವನ್ನು ವರದಿ ಮಾಡಿದ್ದಾರೆ. ಅಹ್ಮದ್‌ನಗರ ಜಿಲ್ಲೆಯ ಪಥಾರ್ಡಿ ತಾಲ್ಲೂಕಿನ ಸುರಸೆ ಗ್ರಾಮದಲ್ಲಿ ಸೈನಿಕ ಹುಳುವಿನ ವರದಿಯಾಗಿದೆ ಎಂದು ಕೇಂದ್ರದ ಸಹಾಯಕ ಕೀಟಶಾಸ್ತ್ರಜ್ಞ ಡಾ.ಎನ್.ಕೆ.ಭೂತೆ ತಿಳಿಸಿದ್ದಾರೆ. ಮೆಕ್ಕೆಜೋಳದ ಹೊಲದ ಪಕ್ಕದಲ್ಲಿರುವ ೧.೫-೩ ಎಕರೆಗಿಂತ ಹೆಚ್ಚು ಭೂಮಿಯಲ್ಲಿ ಹತ್ತಿ ಬೆಳೆ ಇದೆ ಎಂದು ಡಾ.ಭೂತೆ ಹೇಳಿದರು. ಕನಿಷ್ಠ 50 ಪ್ರತಿಶತದಷ್ಟು ಮೆಕ್ಕೆಜೋಳವು ಸೈನಿಕ ಹುಳುವಿನಿಂದ ತೀವ್ರವಾಗಿ ಬಾಧೆಗೊಂಡಿದೆ ಮತ್ತು ಒಮ್ಮೆ ಬೆಳೆ ಕೊಯ್ಲು ಮಾಡಾದ ಮೇಲೆ , ಕೀಟವು ಹತ್ತಿ ಬೆಳೆಗೆ ವರ್ಗಾಯಿಸಿರಬಹುದು ಎಂದು ಅವರು ಹೇಳಿದರು. ಹತ್ತಿ ಬೆಳೆ ಕಾಯಿ ರಚನೆಯ ಹಂತದಲ್ಲಿತ್ತು. ಹತ್ತಿಯಲ್ಲಿ ಸೈನಿಕ ಹುಳುವಿನ ವರದಿಯಾಗಿರುವುದು ಇದೇ ಮೊದಲು" ಎಂದು ಅವರು ಹೇಳಿದರು. ಬೆಳೆ ಕೊಯ್ಲು ಮಾಡಿದ ನಂತರ ಹಾನಿಯ ವ್ಯಾಪ್ತಿ ತಿಳಿಯಬಹುದು ಎಂದು ಕೂಡ ತಿಳಿಸಿದರು. 2018 ರಲ್ಲಿ ಮೊದಲ ಬಾರಿಗೆ ವರದಿಯಾಗಿದೆ,ಸೈನಿಕ ಹುಳು (ಸ್ಪೊಡೋಪ್ಟೆರಾ ಫ್ರುಗಿಪೆರ್ಡಾ) ಒಂದು ಕೀಟವಾಗಿದ್ದು, ಇದು ಮೆಕ್ಕೆಜೋಳ, ಸೋಯಾಬೀನ್ ಮತ್ತು ಜೋಳ ಸೇರಿದಂತೆ 80 ವಿವಿಧ ಬೆಳೆಗಳಿಗೆ ಆಹಾರವನ್ನು ನೀಡುತ್ತದೆ. ಈ ಕೀಟವು ವಿಶ್ವದ ವಿವಿಧ ಭಾಗಗಳಲ್ಲಿ ಮೆಕ್ಕೆಜೋಳದ ಬೆಳೆಯಲ್ಲಿ ದೊಡ್ಡ ಪ್ರಮಾಣದಲ್ಲಿ ಹಾನಿಯನ್ನುಂಟು ಮಾಡುವುದಕ್ಕೆ ಕಾರಣವಾಗಿದೆ. ಕಳೆದ ವರ್ಷ, ಭಾರತದಲ್ಲಿ ಮೆಕ್ಕೆಜೋಳ ಉತ್ಪಾದನೆಯಲ್ಲಿ ಇಳಿಕೆಗೆ ಸೈನಿಕ ಹುಳುವೇ ಕಾರಣವಾಗಿತ್ತು. ಜೋಳದಲ್ಲೂ ಬಾಧೆಯು ವರದಿಯಾಗಿದೆ. ಈ ವರ್ಷ, ಮಹಾರಾಷ್ಟ್ರದಲ್ಲಿ 8.60 ಲಕ್ಷ ಹೆಕ್ಟೇರ್ ಮೆಕ್ಕೆ ಜೋಳದ ಬೆಳೆಯ 2.63 ಲಕ್ಷ ಹೆಕ್ಟೇರ್ಗಿಂತ ಹೆಚ್ಚು ಸೈನಿಕ ಹುಳುವಿನ ಬಾಧೆಯನ್ನು ವರದಿ ಮಾಡಿದೆ. ಕೀಟವನ್ನು ನಿಯಂತ್ರಿಸಲು ಕೃಷಿ ಇಲಾಖೆ ಬೃಹತ್ ಅಭಿಯಾನವನ್ನು ಪ್ರಾರಂಭಿಸಿದರು, ರಾಜ್ಯದ ವಿವಿಧ ಭಾಗಗಳಿಂದ ಹಾನಿಗೊಳಗಾದ ವರದಿಗಳಿವೆ. ಹತ್ತಿ ಮತ್ತು ಮೆಕ್ಕೆ ಜೋಳವನ್ನು ಹೆಚ್ಚಾಗಿ ಒಂದೇ ಪ್ರದೇಶದಲ್ಲಿ ಬೆಳೆಯುವುದರಿಂದ, ಮೆಕ್ಕೆಜೋಳದಿಂದ ಹತ್ತಿಗೆ ಕೀಟ ಜಿಗಿಯುವ ಸಂಭವನೀಯತೆ ನಿಜ. ಹತ್ತಿ (180 ದಿನಗಳು) ಗಿಂತ ಮೆಕ್ಕೆಜೋಳವು ಕಡಿಮೆ ಕಾಲಾವಧಿಯ (90 ದಿನಗಳು) ಬೆಳೆ ಎಂದು ಡಾ.ಭೂತೆ ಕಂಡು ಹಿಡಿದರು, ಆದ್ದರಿಂದ ಮೆಕ್ಕೆಜೋಳದ ಬೆಳೆ ಕಟಾವು ಮಾಡಿದ ನಂತರ ಕೀಟ ಸುಲಭವಾಗಿ ಹತ್ತಿಗೆ ಹಾರಿ ಹೋಗಬಹುದು. ಸಮಗ್ರ ಕೀಟ ನಿರ್ವಹಣೆ ಅವಶ್ಯಕತೆಯಾಗಿದ್ದು ಅದು ಕೀಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ ಎಂದು ಅವರು ಹೇಳಿದರು. ನಾಗ್ಪುರ ಮೂಲದ ಕೇಂದ್ರೀಯ ಹತ್ತಿ ಸಂಶೋಧನಾ ಕೇಂದ್ರ (CICR) ದ ತಂಡವೂ ಈ ಕ್ಷೇತ್ರಗಳಿಗೆ ಭೇಟಿ ನೀಡಿತ್ತು. ಸಿಂಗಾಪುರ ಮೂಲದ ಕೃಷಿ-ಇನ್ಪುಟ್ ಕಂಪನಿ 6 ನೇ ಧಾನ್ಯದ ಕೀಟಶಾಸ್ತ್ರಜ್ಞ ಡಾ.ಅಂಕುಶ್ ಚೋರ್ಮಲೆ, ಹತ್ತಿಯಲ್ಲಿ ಸೈನಿಕ ಹುಳುವಿನ ಬಾಧೆಯು ಯುನೈಟೆಡ್ ಸ್ಟೇಟ್ಸ್ನಲ್ಲಿಯೂ ವರದಿಯಾಗಿದೆ. ಕೀಟವು ಮೆಕ್ಕೆಜೋಳದಿಂದ ಹತ್ತಿಗೆ ಜಿಗಿದಿದೆ ಎಂದು ಇದು ತೋರುತೀತ್ತದೆ. ಹತ್ತಿ ಬೆಳೆಗಾರರಿಗೆ ಆರ್ಥಿಕ ನಷ್ಟವಾಗದಂತೆ ನಿಯಂತ್ರಣ ಕ್ರಮಗಳ ಬಗ್ಗೆ ತಿಳಿಸಬೇಕಾಗಿದೆ, ಎಂದು ಅವರು ಹೇಳಿದರು. ಮೂಲ: ಇಂಡಿಯನ್ ಎಕ್ಸ್‌ಪ್ರೆಸ್
ಅತಿಯಾದ ಮಳೆಯಿಂದಾಗಿ ದೇಶದ 12 ರಾಜ್ಯಗಳು ಪ್ರವಾಹಕ್ಕೆ ಸಿಲುಕಿವೆ, ಆದರೆ ಈ ನಡುವೆಯೂ ಆಹಾರ ಉತ್ಪಾದನೆ ಹೆಚ್ಚಾಗುವ ನಿರೀಕ್ಷೆಯಿದೆ ಎಂದು ಅವರು ಹೇಳಿದರು. ದೇಶದ ಮುಂಗಾರಿನ ಹಂಗಾಮಿನಲ್ಲಿ ಹೆಚ್ಚಿನ ಮಳೆಯಿಂದಾಗಿ ಜಲಾಶಯಗಳು ಕೂಡಾ ತುಂಬಿದೆ. ದ್ವಿದಳ ಧಾನ್ಯಗಳಲ್ಲಿ ದೇಶವು ಬಹುತೇಕ ಸ್ವಾವಲಂಬಿಯಾಗಿದೆ ಆದರೆ ತೈಲಬೀಜಗಳ ಉತ್ಪಾದನೆಯನ್ನು ಹೆಚ್ಚಿಸುವ ಅವಶ್ಯಕತೆಯಿದೆ ಇದರಿಂದ ಆಮದಿನ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಬಹುದು. 2019-20ರ ಬೆಳೆ ಹಂಗಾಮಿನಲ್ಲಿ ದ್ವಿದಳ ಧಾನ್ಯಗಳ ಉತ್ಪಾದನೆಯ ಗುರಿಯನ್ನು 263 ಲಕ್ಷ ಟನ್‌ಗಳಿಗೆ ನಿಗದಿಪಡಿಸಲಾಗಿದ್ದು, ದಾಖಲೆಯ ಗೋಧಿ ಉತ್ಪಾದನೆಯನ್ನು 10.05 ದಶಲಕ್ಷ ಟನ್‌ಗಳಾಗಿ ನಿಗದಿಪಡಿಸಲಾಗಿದೆ. ಪ್ರಸ್ತುತ ಮುಂಗಾರಿನಲ್ಲಿ ಭತ್ತದ ಉತ್ಪಾದನೆಯ ಗುರಿ 1160 ದಶಲಕ್ಷ ಟನ್ ಎಂದು ಅಂದಾಜಿಸಲಾಗಿದೆ. ಮೂಲ - ಔಟ್‌ಲುಕ್ ಕೃಷಿ, 20 ಸೆಪ್ಟೆಂಬರ್ 2019 ಈ ಮಾಹಿತಿಯನ್ನು ಉಪಯುಕ್ತವೆಂದು ನೀವು ತಿಳಿದುಕೊಂಡರೆ, ಈ ಚಿತ್ರದ ಅಡಿಯಲ್ಲಿ ಹಳದಿ ಹೆಬ್ಬೆರಳಿನ ಚಿನ್ಹೆ ಮೇಲೆ ಒತ್ತಿ ಮತ್ತು ಕೆಳಗೆ ನೀಡಿರುವ ಆಯ್ಕೆಗಳನ್ನು ಬಳಸಿಕೊಂಡು ನಿಮ್ಮ ರೈತ ಸ್ನೇಹಿತರೊಂದಿಗೆ ಈ ಮಾಹಿತಿ ಯನ್ನು ಹಂಚಿಕೊಳ್ಳಿ.
106
0
ಕುರಿತು ಪೋಸ್ಟ್