ಕೃಷಿ ವಾರ್ತಾOutlook Agriculture
ಡಿಎಪಿ ಮತ್ತು ಎನ್‌ಪಿಕೆ ಗೊಬ್ಬರದ ಬೆಲೆಯಲ್ಲಿ 50 ರೂ ಇಳಿಕೆ
ಇಫ್ಕೊ ಡಿಎಪಿ ಮತ್ತು ಎನ್‌ಪಿಕೆ ಗೊಬ್ಬರದ ಬೆಲೆಯನ್ನು ಪ್ರತಿ ಚೀಲಕ್ಕೆ 50 ರೂ.ಗೆ ಇಳಿಕೆಯಾಗಿದೆ. ಮೊದಲ ಎನ್‌ಪಿಕೆ ಗೊಬ್ಬರದ ಬೆಲೆ ರೂ.1365 ಆಗಿದ್ದು, ಅದನ್ನು 1250 ಕ್ಕೆ ಇಳಿಸಲಾಯಿತು. ಈಗ ಇದನ್ನು 50 ರೂ.ನಿಂದ 1200 ರೂ.ಗೆ ಇಳಿಸಲಾಗಿದೆ. ಎನ್‌ಪಿಕೆ -2 ರ ಬೆಲೆಯನ್ನು 1260 ರಿಂದ 1210 ಕ್ಕೆ ಇಳಿಸಲಾಗಿದೆ ಮತ್ತು ಎನ್‌ಪಿ ಬೆಲೆಯನ್ನು 1000 ರಿಂದ 950 ರೂಪಾಯಿಗೆ ಇಳಿಸಲಾಗಿದೆ. ಡಿಎಪಿ ಬೆಲೆ ಈ ಹಿಂದೆ 1400 ಆಗಿದ್ದು, ಅದನ್ನು 1300 ಕ್ಕೆ ಇಳಿಸಲಾಯಿತು. ಈಗ ಇದನ್ನು 50 ರೂ.ನಿಂದ 1250 ಕ್ಕೆ ಇಳಿಸಲಾಗಿದೆ. ಡಿಎಪಿಯ ಪೂರ್ಣ ಹೆಸರು ಡೈಮಮೋನಿಯಂ ಫಾಸ್ಫೇಟ್ ಆಗಿದೆ ಈ ರಸಗೊಬ್ಬರದಲ್ಲಿ ಅರ್ಧಕ್ಕಿಂತ ಹೆಚ್ಚು ರಂಜಕವಿದೆ. ಡಿಎಪಿ ಭೂಮಿಯ ಫಲವತ್ತತೆಯನ್ನು ಹೆಚ್ಚಿಸುತ್ತದೆ ಮತ್ತು ಬೇರುಗಳನ್ನು ಚೆನ್ನಾಗಿ ಹರಡಲು ಸಹಾಯ ಮಾಡುತ್ತದೆ. ಬೇರು ಬಲವಾದಾಗ, ಬೆಳೆಗಳಲ್ಲಿ ಹೆಚ್ಚಿನ ಹಣ್ಣಿನ ಉತ್ಪತ್ತಿಯಾಗುತ್ತದೆ. ಅದೇ ಸಮಯದಲ್ಲಿ, ಎನ್‌ಪಿಕೆ ಗೊಬ್ಬರವು ಸಾರಜನಕ, ರಂಜಕ ಮತ್ತು ಪೊಟಾಸ್ಸಿಮ್ ನ್ನು ಕೂಡಾ ಹೊಂದಿರುತ್ತದೆ. ಇದು ಸಸ್ಯಗಳು (ಕಾಂಡಗಳು) ಮತ್ತು ಹಣ್ಣುಗಳನ್ನು ಸದೃಢಗೊಳಿಸುತ್ತದೆ. ಈ ರಸಗೊಬ್ಬರದ ಬಳಕೆಯು ಹಣ್ಣುಗಳು ಉದುರುವ ಸಮಸ್ಯೆಯನ್ನು ಕಡಿಮೆ ಮಾಡುತ್ತದೆ. ಎರಡೂ ರಸಗೊಬ್ಬರಗಳು ಹರಳು ರೂಪದಲ್ಲಿ ಉಪಲಭದ್ಧವಾಗಿದೆ , ಆದ್ದರಿಂದ ಇದನ್ನು ಬೆಳೆಗಳ ಬಿತ್ತನೆ ಸಮಯದಲ್ಲಿ ಮಾತ್ರ ಬಳಸಲಾಗುತ್ತದೆ ಇದರಿಂದ ಸಸ್ಯಗಳ ಕಾಂಡಗಳು ಬಲವಾಗಿರುತ್ತವೆ ಮತ್ತು ಬೇರುಗಳು ಭೂಮಿಯಲ್ಲಿ ಹೆಚ್ಚು ಹೆಚ್ಚು ಹರಡುತ್ತವೆ. ಮೂಲ - ಔಟ್ ಲುಕ್ ಕೃಷಿ, 15 ಆಗಸ್ಟ್ 2019
ಈ ಮಾಹಿತಿಯನ್ನು ಉಪಯುಕ್ತವೆಂದು ನೀವು ತಿಳಿದುಕೊಂಡರೆ, ಈ ಚಿತ್ರದ ಅಡಿಯಲ್ಲಿ ಹಳದಿ ಹೆಬ್ಬೆರಳಿನ ಚಿನ್ಹೆ ಮೇಲೆ ಒತ್ತಿ ಮತ್ತು ಕೆಳಗೆ ನೀಡಿರುವ ಆಯ್ಕೆಗಳನ್ನು ಬಳಸಿಕೊಂಡು ನಿಮ್ಮ ರೈತ ಸ್ನೇಹಿತರೊಂದಿಗೆ ಈ ಮಾಹಿತಿ ಯನ್ನು ಹಂಚಿಕೊಳ್ಳಿ.
214
0
ಕುರಿತು ಪೋಸ್ಟ್