ಸಲಹಾ ಲೇಖನಅಪನಿ ಖೇತಿ
ಅಶ್ವಗಂಧ ಕೃಷಿ : ಔಷಧೀಯ ಸಸ್ಯ (ಭಾಗ-1)
ವಿವಿಧ ಔಷಧೀಯ ಗುಣಗಳನ್ನು ಹೊಂದಿರುವ ಅಶ್ವಗಂಧವನ್ನು ಅದ್ಭುತ ಸಸ್ಯ ಎಂದು ಸಹ ಕರೆಯಲಾಗುತ್ತದೆ. ಇದು ಕುದುರೆಯಂತೆ ವಾಸನೆ ಇರುವುದರಿಂದ ಮತ್ತು ದೇಹವನ್ನು ಚೈತನ್ಯಗೊಳಿಸುವುದರಿಂದ "ಅಶ್ವಗಂಧ" ಎಂದು ಕರೆಯುತ್ತಾರೆ. ಅದರ ಬೀಜ, ಬೇರು ಮತ್ತು ಎಲೆಗಳನ್ನು ಅನೇಕ ಔಷಧಿಗಳನ್ನು ತಯಾರಿಸಲು ಬಳಸಲಾಗುತ್ತದೆ. ಅಶ್ವಗಂಧದಿಂದ ತಯಾರಿಸಲಾದ ಔಷಧಿಗಳನ್ನು ವೃದ್ಯಾಪದಲ್ಲಿ ಚಿಕಿತ್ಸೆ ನೀಡಲು ಒತ್ತಡ ನಿವಾರಕವಾಗಿ ಬಳಸಲಾಗುತ್ತದೆ ಮತ್ತು ಆತಂಕ, ಖಿನ್ನತೆ, ಫೋಬಿಯಾ, ಸ್ಕಿಜೋಫ್ರೇನಿಯಾದಂತಹ ರೋಗ ಗುಣಪಡಿಸಲು ಬಳಸಲಾಗುತ್ತದೆ. ಇದು ದಪ್ಪ, ಬಿಳಿ ಬಣ್ಣದ ಕಂದು ಬೇರುಗಳುಳ್ಳ ಸರಾಸರಿ 30 ಸೆಂ.ಮೀ.-120 ಸೆಂ.ಮೀ. ಸೆಂಟಿಮೀಟರ್ ಎತ್ತರವಿರುವ ಕುರುಚಲು ಸಸ್ಯವಾಗಿದೆ. ಇದರ ಹೂವುಗಳು ಹಸಿರು ಮತ್ತು ಹಣ್ಣುಗಳು ಕಿತ್ತಳೆ-ಕೆಂಪು ಬಣ್ಣದಲ್ಲಿರುತ್ತವೆ. ಇದನ್ನು ಮುಖ್ಯವಾಗಿ ಭಾರತದ ರಾಜಸ್ಥಾನ, ಪಂಜಾಬ, ಹರಿಯಾಣ, ಉತ್ತರ ಪ್ರದೇಶ, ಗುಜರಾತ, ಮಹಾರಾಷ್ಟ್ರ ಮತ್ತು ಮಧ್ಯ ಪ್ರದೇಶದಂತಹ ಹಲವು ಪ್ರದೇಶಗಳಲ್ಲಿ ಬೆಳೆಯಲಾಗುತ್ತದೆ. ಅವಶ್ಯಕತೆಯಿರುವ ಮಣ್ಣು: ರಸಸಾರ 7.5-8.0 ಇದ್ದು ನೀರು ಬಸಿದು ಹೋಗುವಂತಹ ಮರಳು ಮಿಶ್ರಿತ ಗೋಡು ಮಣ್ಣು ಅಥವಾ ಕಂದು ಕೆಂಪು ಮಣ್ಣಿನಲ್ಲಿ ಬೆಳೆಸಿದಾಗ ಅಶ್ವಗಂಧವು ಅತ್ಯುತ್ತಮವಾಗಿ ಬೆಳೆಯುತ್ತದೆ. ತೇವಾಂಶವಿರುವ ಮತ್ತು ನೀರು ನಿಲ್ಲದಂತಹ ಮಣ್ಣಿನಲ್ಲಿ ಚೆನ್ನಾಗಿ ಬೆಳೆಯುತ್ತದೆ. ಮಣ್ಣು ಸಡಿಲವಾಗಿದ್ದು ನೀರು ಬಸಿದು ಹೋಗುವಂತಿರಬೇಕು. ಕಪ್ಪು ಅಥವಾ ಜಡ ಮಣ್ಣು ಸಹ ಇದರ ಕೃಷಿಗೆ ಸೂಕ್ತವಾಗಿದೆ. ಭೂಮಿ ತಯಾರಿ: ಅಶ್ವಗಂಧದ ಬೆಳೆ ನಾಟಿಗೆ ಚೆನ್ನಾಗಿ ಪುಡಿ ಮಾಡಿ ಹದಗೊಳಿಸಿದ ಮಣ್ಣಿನ ಅಗತ್ಯವಿದೆ. ಚೆನ್ನಾಗಿ ಉಳುಮೆ ಮಾಡಲು, 2-3 ಬಾರಿ ಹೊಲದಲ್ಲಿ ನೇಗಿಲು ಹೊಡೆಯಿರಿ ಮತ್ತು ನೇಗಿಲು ಅಥವಾ ಕುಂಟೆಯನ್ನು ಮಳೆ ಶುರುವಾಗುವ ಮೊದಲು ಮಾಡಬೇಕು ಮತ್ತು ನಂತರ ಕೊಟ್ಟಿಗೆ ಗೊಬ್ಬರ ಹಾಕಬೇಕು. ಭೂಮಿಯನ್ನು ಏಪ್ರಿಲ್-ಮೇ ತಿಂಗಳಲ್ಲಿ ತಯಾರಿಸಲಾಗುತ್ತದೆ.
ಬಿತ್ತನೆಯ ಸಮಯ: ಅಶ್ವಗಂಧದ ಕೃಷಿಗಾಗಿ ಜೂನ್-ಜುಲೈ ತಿಂಗಳಲ್ಲಿ ನರ್ಸರಿಯಲ್ಲಿ ಸಸಿ ಮಡಿಗಳನ್ನು ತಯಾರು ಮಾಡಿ. ಅಂತರ: ಬೆಳವಣಿಗೆ ಮತ್ತು ಮೊಳಕೆಯೊಡೆಯುವ ಗುಣಕ್ಕೆ ಅನುಗುಣವಾಗಿ ಸಾಲಿನಿಂದ ಸಾಲಿಗೆ 20 ರಿಂದ 25 ಸೆಂ.ಮಿ. ಮತ್ತು ಸಸ್ಯದಿಂದ ಸಸ್ಯಕ್ಕೆ 10 ಸೆಂ.ಮಿ. ಅಂತರವಿಡಬೇಕು. ಬಿತ್ತನೆ ಆಳ: ಸಾಮಾನ್ಯವಾಗಿ ಬೀಜಗಳನ್ನು 1 ರಿಂದ 3 ಸೆಂ.ಮಿ. ಆಳದಲ್ಲಿ ಬಿತ್ತನೆ ಮಾಡಬೇಕು. ಬಿತ್ತನೆ ಪದ್ಧತಿ: ಕೃಷಿ ಭೂಮಿಯಲ್ಲಿ ಮೊಳಕೆಯೊಡೆದ ಸಸಿಗಳನ್ನು ಕಸಿ ಮಾಡುವ ಮೂಲಕ ಬಿತ್ತನೆ ಮಾಡಲಾಗುತ್ತದೆ. ಬೀಜ ಪ್ರಮಾಣ: ಅತ್ಯುತ್ತಮ ತಳಿಗಳಿಗಾಗಿ ಎಕರೆಗೆ 4-5 ಕಿ.ಗ್ರಾಂ. ಬೀಜಗಳನ್ನು ಬಳಸಬೇಕು. ಬೀಜೋಪಚಾರ: ಬೀಜಗಳನ್ನು ಬಿತ್ತನೆಯ ಮೊದಲು ಬೀಜದಿಂದ ಹರಡುವ ರೋಗ ಮತ್ತು ಕೀಟಗಳಿಂದ ಬೆಳೆಗಳನ್ನು ರಕ್ಷಿಸಲು, ಥೈರಾಮ್ ಅಥವಾ ಡಿಥೇನ್ ಎಮ್ -45 (ಇಂಡೋಫಿಲ್ ಎಮ್ -45) @ 3 ಗ್ರಾಂ/ಕಿ.ಗ್ರಾಂ. ಪ್ರಮಾಣದಂತೆ ಬೀಜೋಪಚಾರ ಮಾಡಬೇಕು. ಬೀಜೋಪಚಾರದ ನಂತರ ಬೀಜಗಳನ್ನು ಗಾಳಿಯಲ್ಲಿ ಚೆನ್ನಾಗಿ ಒಣಗಿಸಿ ಬಿತ್ತನೆಗಾಗಿ ಬಳಸಿ. ಮೂಲ: ಅಪನಿ ಖೇತಿ ಈ ಮಾಹಿತಿಯನ್ನು ಉಪಯುಕ್ತವೆಂದು ನೀವು ತಿಳಿದುಕೊಂಡರೆ, ಈ ಚಿತ್ರದ ಅಡಿಯಲ್ಲಿ ಹಳದಿ ಹೆಬ್ಬೆರಳಿನ ಚಿನ್ಹೆ ಮೇಲೆ ಒತ್ತಿ ಮತ್ತು ಕೆಳಗೆ ನೀಡಿರುವ ಆಯ್ಕೆಗಳನ್ನು ಬಳಸಿಕೊಂಡು ನಿಮ್ಮ ರೈತ ಸ್ನೇಹಿತರೊಂದಿಗೆ ಈ ಮಾಹಿತಿ ಯನ್ನು ಹಂಚಿಕೊಳ್ಳಿ.
436
0
ಕುರಿತು ಪೋಸ್ಟ್