ಪಶುಸಂಗೋಪನೆwww.vetextension.com
ಮಳೆಗಾಲದಲ್ಲಿ ಪಶುಸಂಗೋಪನೆಗಾಗಿ ಉಪಯುಕ್ತ ಮುನ್ನೆಚ್ಚರಿಕೆಗಳು
ಮಳೆಗಾಲದ ಎಲ್ಲಾ ಪ್ರಯೋಜನಗಳ ನಡುವೆ, ಕೆಲವು ಜಾನುವಾರುಗಳ ವಿಶೇಷವಾದ ಕಾಳಜಿಯನ್ನು ಪಶು ಪಾಲಕರು ತೆಗೆದುಕೊಳ್ಳ ಬೇಕಾಗುತ್ತದೆ . ರೈತ ಜಾಗರೂಕರಾಗಿರದಿದ್ದರೆ, ಜಾನುವಾರುಗಳು ರೋಗಗಳಿಂದ ಬಳಲಬಹುದು. ಆದ್ದರಿಂದ, ಜಾನುವಾರುಗಳ ಆರೋಗ್ಯ ಮತ್ತು ಉತ್ಪಾದನೆಯನ್ನು ಅತ್ಯುತ್ತಮವಾಗಿಸಲು ಈ ಕೆಳಗಿನ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕು: • ಯಾವ ಕೊಟ್ಟಿಗೆಯಲ್ಲಿ ಹನಿ ಹನಿ ನೀರು ಸೋರುತ್ತಿರುತ್ತದೆಯೋ ಅದನ್ನು ಸರಿಪಡಿಸಿ. • ಸರಿಯಾಗಿ ಗಾಳಿ ಬರುತ್ತಿದೆಯೇ ಇಲ್ಲವೋ ನೋಡಿಕೊಳ್ಳಿ. • ಹೊಟ್ಟೆಯ ಜಂತು ಹುಳುಗಳು ಮತ್ತು ಉಣ್ಣೆಗಳಿಂದ ಪ್ರಾಣಿಗಳನ್ನು ರಕ್ಷಿಸಲು ಔಷಧಿಗಳನ್ನು ಒದಗಿಸಿ. • ನೊಣ ಮತ್ತು ಸೊಳ್ಳೆಗಳಿಂದ ಪ್ರಾಣಿಗಳನ್ನು ದೂರವಿರಿಸಿ ಮತ್ತು ಅವುಗಳಿಂದ ಹರಡುವ ರೋಗದ ಪ್ರಸರಣವನ್ನು ನಿಲ್ಲಿಸಿ. • ಪಶು ಆಹಾರವನ್ನು ಒಣ ಸ್ಥಳದಲ್ಲಿ ಸಂಗ್ರಹಿಸಿಡಬೇಕು. • ಜಾನುವಾರುಗಳ ಕೆಚ್ಚಲುಗಳನ್ನು ಪರಿಶೀಲಿಸಿ ಮತ್ತು ಹಾಲುಕರೆಯುವ ಮೊದಲು ಮತ್ತು ನಂತರ ಸೋಂಕುನಿವಾರಕದಿಂದ ತೊಳೆಯಿರಿ. • ಪ್ರತಿದಿನ ಜಾನುವಾರುಗಳ ಕೊಟ್ಟಿಗೆಯನ್ನು ಸ್ವಚ್ಛಗೊಳಿಸಿ ಮತ್ತು ಫಿನೈಲ್ ಬಳಸಿ ತೊಳೆಯಿರಿ. • ಜಾನುವಾರುಗಳ ದೇಹದ ಮೇಲೆ ಸಗಣಿ ಅಥವಾ ಇತರ ತ್ಯಾಜ್ಯಗಳು ಇದ್ದರೆ ಪ್ರತಿದಿನ ಅದನ್ನು ತೊಳೆಯಿರಿ . • ಪ್ರತಿಯೊಂದು ಜಾನುವಾರಿಗೆ ಸಾಕಷ್ಟು ಸ್ಥಳಾವಕಾಶವನ್ನು ಒದಗಿಸಿ. • ಜಾನುವಾರುಗಳ ಗಾಯಗಳ ಬಗ್ಗೆ ವಿಶೇಷ ಕಾಳಜಿ ವಹಿಸಿ ಮತ್ತು ಸೋಂಕುನಿವಾರಕವನ್ನು ಬಳಸಿ. • ಜಾನುವಾರುಗಳಿಗೆ ಹೆಚ್ಚಾಗಿ ಹಸಿರು ಮೇವನ್ನು ತಿನ್ನಲು ಕೊಡಬೇಡಿ . • ಮಳೆಗಾಲದಲ್ಲಿ ಚಯಾಪಚಯ ಕ್ರಿಯೆಯ ಬಾಧೆಯನ್ನು ನಿಯಂತ್ರಿಸಲು ಸಮತೋಲಿತ ಆಹಾರವನ್ನು ಪೂರೈಸಬೇಕು. • ಜಾನುವಾರುಗಳ ಸಗಣೆಯನ್ನು ತೆಗೆದು ಶುಚಿಗೊಳಿಸಿ ಮತ್ತು ಅದರಿಂದ ರೋಗಗಳು ಕೂಡಾ ಹರಡಬಹುದು. • ಅನಾರೋಗ್ಯದಿಂದ ಬಳಲುತಿರುವ ಜಾನುವಾರುಗಳನ್ನು ಆರೋಗ್ಯಕರ ಜಾನುವಾರುಗಳಿಗೆ ಪ್ರತ್ಯೇಕವಾಗಿರಿಸಿ. • ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ರೋಗ ಪ್ರತಿರೋಧ -ಪ್ರಚೋದಕವನ್ನು ನೀಡಬೇಕು. ಮೂಲ: www.vetextension.com
ಈ ಮಾಹಿತಿಯನ್ನು ಉಪಯುಕ್ತವೆಂದು ನೀವು ತಿಳಿದುಕೊಂಡರೆ, ಈ ಚಿತ್ರದ ಅಡಿಯಲ್ಲಿ ಹಳದಿ ಹೆಬ್ಬೆರಳಿನ ಚಿನ್ಹೆ ಮೇಲೆ ಒತ್ತಿ ಮತ್ತು ಕೆಳಗೆ ನೀಡಿರುವ ಆಯ್ಕೆಗಳನ್ನು ಬಳಸಿಕೊಂಡು ನಿಮ್ಮ ರೈತ ಸ್ನೇಹಿತರೊಂದಿಗೆ ಈ ಮಾಹಿತಿ ಯನ್ನು ಹಂಚಿಕೊಳ್ಳಿ.
418
0
ಕುರಿತು ಪೋಸ್ಟ್