ಸಲಹಾ ಲೇಖನಅಪನಿ ಖೇತಿ
ನೆಲ್ಲಿಕಾಯಿಯ ಉಪಯೋಗಗಳು ಮತ್ತು ರಸಗೊಬ್ಬರಗಳ ನಿರ್ವಹಣೆ
ಭಾರತೀಯ ನೆಲ್ಲಿಕಾಯಿ ಅಥವಾ ನೆಲ್ಲಿ ಎಂದು ವ್ಯಾಪಕವಾಗಿ ಕರೆಯಲ್ಪಡುತ್ತದೆ ಮತ್ತು ಇತ್ತೀಚಿಗೆ ಇದರ ಔಷಧೀಯ ಗುಣಗಳು ಹೆಚ್ಚುತ್ತಿವೆ. ರಕ್ತಹೀನತೆ, ಹುಣ್ಣುಗಳು, ಹೊಟ್ಟೆಯ ಅಜಿರ್ಣ್ ಸಮಸ್ಯೆ , ಹಲ್ಲು ನೋವು ಮತ್ತು ಜ್ವರಕ್ಕೆ ಚಿಕಿತ್ಸೆ ನೀಡಲು ಬಳಸುವ ಅನೇಕ ಔಷಧಿಗಳನ್ನು ತಯಾರಿಸಲು ನೆಲ್ಲಿಕಾಯಿಗಳನ್ನು ಬಳಸಲಾಗುತ್ತದೆ. ಈ ಹಣ್ಣುಗಳು ವಿಟಮಿನ್ 'ಸಿ' ಯನ್ನು ಹೊಂದಿದೆ . ಹಸಿರು ಆಮ್ಲಾ ಹಣ್ಣುಗಳನ್ನು ಉಪ್ಪಿನಕಾಯಿ ತಯಾರಿಸಲು ಬಳಸಲಾಗುತ್ತದೆ, ಜೊತೆಗೆ ಶಾಂಪೂ, ಹೇರ್ ಆಯಿಲ್, ಡೈ, ಟೂತ್ ಪೌಡರ್ ಮತ್ತು ಫೇಸ್ ಕ್ರೀಮ್‌ಗಳು ಕೂಡಾ ತಯಾರಿಸಲು ಬಳಸಲಾಗುತ್ತದೆ. ಈ ಗಿಡದ ಟೊಂಗೆಗಳು ಮೃದುವಾಗಿದ್ದು , ಸರಾಸರಿ 8-18 ಮೀ ಎತ್ತರವಾಗಿದೆ. ಇದರ ಹೂವುಗಳು ಹಸಿರು-ಹಳದಿ ಬಣ್ಣದಲ್ಲಿರುತ್ತವೆ ಮತ್ತು ಗಂಡು ಮತ್ತು ಹೆಣ್ಣು ಹೂವುಗಳು ಎರಡು ವಿಧಗಳಾಗಿವೆ. ಇದರ ಹಣ್ಣುಗಳು ತಿಳಿ-ಹಳದಿ ಬಣ್ಣದಲ್ಲಿರುತ್ತವೆ ಮತ್ತು 1.3-1.6 ಸೆಂ.ಮೀ ವ್ಯಾಸವನ್ನು ಹೊಂದಿರುತ್ತವೆ. ಉತ್ತರ ಪ್ರದೇಶ ಮತ್ತು ಹಿಮಾಚಲ ಪ್ರದೇಶ ಭಾರತದ ಪ್ರಾಥಮಿಕ ಆಮ್ಲಾ ಬೆಳೆಯುವ ರಾಜ್ಯಗಳಾಗಿವೆ._x000D_ _x000D_ ರಸಗೊಬ್ಬರದ ನಿರ್ವಹಣೆ:_x000D_ ಭೂಮಿ ತಯಾರಿಕೆಯ ಸಮಯದಲ್ಲಿ 10 ಕೆಜಿ ಕೊಟ್ಟಿಗೆ ಗೊಬ್ಬರವನ್ನು ಮಣ್ಣಿನೊಂದಿಗೆ ಚೆನ್ನಾಗಿ ಮಿಶ್ರಣ ಮಾಡಿ. ಸಾರಜನಕ @ 100 ಗ್ರಾಂ / ಗಿಡಕ್ಕೆ , ರಂಜಕ @ 50 ಗ್ರಾಂ / ಗಿಡಕ್ಕೆ, ಮತ್ತು ಪೊಟ್ಯಾಸಿಯಮ್ @ 100 ಗ್ರಾಂ / ಗಿಡಕ್ಕೆ ಆ ರೂಪದಲ್ಲಿ ಸಾರಜನಕ : ರಂಜಕ : ಪೊಟಾಷ್ ಗೊಬ್ಬರದ ಪ್ರಮಾಣವನ್ನು ಬಳಸಿ ._x000D_ ಈ ಗೊಬ್ಬರದ ಪ್ರಮಾಣವನ್ನು ೧೨ ತಿಂಗಳ ನಾಟಿ ಮಾಡಿರುವ ಗಿಡಕ್ಕೆ ನೀಡಬೇಕು ಮತ್ತು ಇದನ್ನು ನಿರಂತರವಾಗಿ 10 ವರ್ಷಗಳವರೆಗೆ ಕೊಡಬೇಕು. ಜನವರಿ-ಫೆಬ್ರವರಿ ತಿಂಗಳಲ್ಲಿ, ರಂಜಕದ ಪೂರ್ಣ ಪ್ರಮಾಣ ಮತ್ತು ಅರ್ಧದಷ್ಟು ಪೊಟ್ಯಾಸಿಯಮ್ ಮತ್ತು ಸಾರಜನಕವನ್ನು ನಾಟಿ ಮಾಡಿದ ಸಮಯದಲ್ಲಿ ನೀಡಬೇಕು._x000D_ ಉಳಿದ ಅರ್ಧ-ಪ್ರಮಾಣವನ್ನು ಆಗಸ್ಟ್‌ನಲ್ಲಿ ನೀಡಬೇಕು. ಗಿಡದ ವಯಸ್ಸಿನ ಪ್ರಕಾರ ಮತ್ತು ಕ್ಷಾರೀಯ ಮಣ್ಣಿನಲ್ಲಿರುವ ಚುಟುವಟಿಕೆಗೆ ಅನುಗುಣವಾಗಿ ಬೋರಾನ್ ಮತ್ತು ಸತುವಿನ ಸಲ್ಫೇಟ್ ನ್ನು @ 100-500 ಗ್ರಾಂ ನೀಡಲಾಗುತ್ತದೆ._x000D_ ಮೂಲ: ಅಪ್ನಿ ಖೇತಿ_x000D_ _x000D_
ಈ ಮಾಹಿತಿಯನ್ನು ಉಪಯುಕ್ತವೆಂದು ನೀವು ತಿಳಿದುಕೊಂಡರೆ, ಈ ಚಿತ್ರದ ಅಡಿಯಲ್ಲಿ ಹಳದಿ ಹೆಬ್ಬೆರಳಿನ ಚಿನ್ಹೆ ಮೇಲೆ ಒತ್ತಿ ಮತ್ತು ಕೆಳಗೆ ನೀಡಿರುವ ಆಯ್ಕೆಗಳನ್ನು ಬಳಸಿಕೊಂಡು ನಿಮ್ಮ ರೈತ ಸ್ನೇಹಿತರೊಂದಿಗೆ ಈ ಮಾಹಿತಿ ಯನ್ನು ಹಂಚಿಕೊಳ್ಳಿ.
171
1
ಕುರಿತು ಪೋಸ್ಟ್