ಸಲಹಾ ಲೇಖನwww.phytojournal.com
ಲೋಳೆಸರದ ಕೃಷಿ ಮತ್ತು ಅದರ ಸೌಂದರ್ಯವರ್ಧಕ ಮೌಲ್ಯ
ಲೋಳೆಸರ ವಿವಿಧ ಚರ್ಮರೋಗದ ಚಿಕಿತ್ಸೆಗಾಗಿ ಲೇಪನದ ರೂಪದಲ್ಲಿ ಬಳಸಲಾಗುವ ಔಷಧೀ ಗುಣವುಳ್ಳ ಬೆಳೆಯಾಗಿದೆ. ಇದನ್ನು ಸಾಮಾನ್ಯವಾಗಿ ಮೊದಲ ಮತ್ತು ದ್ವಿತೀಯ ಹಂತದ ಸುಟ್ಟ ಗಾಯಗಳಿಗೆ ಮತ್ತು ಸನ್ ಬರ್ನ್ ಚಿಕಿತ್ಸೆಗಾಗಿ ಬಳಸಲಾಗುತ್ತದೆ. ಇದರ ಸಾರ/ರಸವನ್ನು ಕೂದಲಿನ ಅಂದಕ್ಕಾಗಿ ಸ್ಟೈಲಿಂಗ ಜೆಲ್ ರೂಪದಲ್ಲಿ ಬಳಸಬಹುದು ಮತ್ತು ಗುಂಗುರು ಕೂದಲಿಗೆ ಸಹ ಒಳ್ಳೆಯದು. ಲೋಳೆಸರವನ್ನು ಕೆಮ್ಮು, ಗಾಯಗಳು, ಹುಣ್ಣುಗಳು, ಜಠರದ ಉರಿತ, ಮಧುಮೇಹ, ಕ್ಯಾನ್ಸರ್, ತಲೆನೋವು, ಸಂಧಿವಾತ ಇತ್ಯಾದಿ ರೋಗಗಳಿಗೆ ರೋಗ ನಿರೋದಕವಾಗಿದೆ. ಈ ರೋಗಗಳಿಗೆ ಕಾರಣದ ಬರುವ ವ್ಯಾಧಿಗಳ ನಿವಾರಣೆಗೆ ಇದರ ಮಾರಾಟ ಮಾಡಲಾಗುತ್ತದೆ ಮತ್ತು ಆಂತರಿಕವಾಗಿ ತೆಗೆದುಕೊಳ್ಳುವುದರಿಂದ ಹಲವು ಸಮಸ್ಯೆಗಳ ನಿವಾರಣಗೆ ಉಪಯೋಗಿಸಬಹುದು. ಲೋಳೆಸರದ ಕೃಷಿ ಪದ್ದತಿ: 1. ಮಣ್ಣು: ಲೋಳೆಸರ ಬೆಳೆಗಾಗಿ, ಸಾಧಾರಣ ಫಲವತ್ತಾದ ಶುಷ್ಕ ಮಣ್ಣು ಮತ್ತು ಮರಳುಯುಕ್ತ ಗೋಡು ಮಣ್ಣು ಬೇಕಾಗುತ್ತದೆ. ವಾಣಿಜ್ಯ ಕೃಷಿಗಾಗಿ 8.5 (ರಸ ಸಾರ )pH ಇರುವ ಮಣ್ಣು ಸೂಕ್ತವಾಗಿದೆ. 2. ಭೂಮಿ ಸಿದ್ಧತೆ: ಮಣ್ಣಿನ ವಿಧ ಮತ್ತು ಕೃಷಿ-ಹವಾಮಾನಕ್ಕೆ ಅನುಗುಣವಾಗಿ, ಭೂಮಿಯನ್ನು 1-2 ಬಾರಿ ಉಳುಮೆ ಮಾಡಿ ಹದಗೊಳಿಸಬೇಕು. ಇಳಿಜಾರು ಮತ್ತು ನೀರಾವರಿ ಪದ್ಧತಿಗನುಗುಣವಾಗಿ ಲೋಳೆಸರ ಬೆಳೆಗೆ 10-15 ಮೀ X 3 ಮೀ ಪ್ಲಾಟ್ ಸೂಕ್ತವಾಗಿದೆ. 3. ನಾಟಿ ಪದ್ಧತಿ: ಈ ಬೆಳೆಯನ್ನು ಸಾಮಾನ್ಯವಾಗಿ ಬೇರಿನ ಕಂದುಗಳಿಂದ ಅಥವಾ ರೈಜೋಮಗಳಿಂದ ನಾಟಿ (ವೃದ್ಧಿ) ಮಾಡಲಾಗುತ್ತದೆ. 4. ನಾಟಿ ಸಮಯ: ಉತ್ತಮ ಕೃಷಿ ಮತ್ತು ಸಸ್ಯ ಉತ್ತಮವಾಗಿ ಬೆಳೆಯಲು ಕಂದಗಳನ್ನು ಮಳೆಗಾಲದ ಜುಲೈ-ಆಗಸ್ಟ ತಿಂಗಳಿನಲ್ಲಿ ನೆಡಬೇಕು. ನವೆಂಬರ್-ಫೆಬ್ರುವರಿಯ ಚಳಿಗಾಲದ ತಿಂಗಳುಗಳಲ್ಲಿ ಲೋಳೆಸರವನ್ನು ನಾಟಿ ಮಾಡಬೇಕು. 5. ಗೊಬ್ಬರ ಹಾಕುವಿಕೆ: ನಾಟಿ ಮಾಡುವ ಮೊದಲ ವರ್ಷ, ಭೂಮಿ ಸಿದ್ಧತೆ ಸಮಯದಲ್ಲಿ, ಪ್ರತಿ ಹೆಕ್ಟರಗೆ 20 ಟನ್ ಕೊಟ್ಟಿಗೆ ಗೊಬ್ಬರವನ್ನು ಹಾಕಬೇಕು ಮತ್ತು ನಂತರದ ವರ್ಷಗಳಲ್ಲಿ ಇದೆ ಪದ್ದತಿಯನ್ನು ಅನುಸರಿಸಬೇಕು. ಅಲ್ಲದೆ ಪ್ರತಿ ಹೆಕ್ಟರಗೆ 2.5 ಟನ್ ಎರೆ ಹುಳು ಗೊಬ್ಬರ ಬಳಸಬೇಕು. 6. ಅಂತರ ಮತ್ತು ನಾಟಿ ಪದ್ಧತಿ: ಸುಮಾರು 15 ಸೆಂ.ಮೀ ಆಳವಾದ ಹೊಂಡದಲ್ಲಿ ಕಂದಗಳನ್ನು 60x60 ಸೆಂ.ಮೀ ಅಂತರದಲ್ಲಿ ನೆಡಲಾಗುತ್ತದೆ. ಕಂದಗಳನ್ನು ನೆಟ್ಟ ನಂತರ ಅದರ ಸುತ್ತಲೂ ನೀರು ನಿಲ್ಲದಂತೆ ವ್ಯವಸ್ಥೆ ಮಾಡಬೇಕು. 7. ನೀರಾವರಿ: ಲೋಳೆಸರವನ್ನು ನೀರಾವರಿ ಭೂಮಿ ಮತ್ತು ಮಳೆಗಾಲದಲ್ಲಿ ಎರಡೂ ಸಮಯದಲ್ಲಿ ಯಶಸ್ವಿಯಾಗಿ ಬೆಳೆಯಬಹುದು.
ಲೋಳೆಸರದ ಸೌಂದರ್ಯವರ್ಧಕ ಮೌಲ್ಯಗಳು ಮತ್ತು ಉಪಯೋಗಗಳು: ⮚ ಲೋಳೆಸರವು ಚರ್ಮ ಸುಕ್ಕುಗಟ್ಟುವಿಕೆಯನ್ನು ತಡೆಯುವ ಕೋಲಾಜೆನ್ ಮತ್ತು ಎಲಾಸ್ಟಿನ್ ಉತ್ಪಾದನೆಯನ್ನು ಉತ್ತೇಜಿಸುತ್ತದೆ. ⮚ ಇದನ್ನು ಸೌಂದರ್ಯ ವರ್ಧಕವಾಗಿ ಸಾಬೂನು, ಶ್ಯಾಂಪೂ, ಕ್ರೀಮ್ ಮತ್ತು ಲೋಷನಗಳನ್ನು ತಯಾರಿಸಲು ಬಳಸಲಾಗುತ್ತದೆ. ⮚ ಲೋಳೆಸರದ ಜೆಲ್ ನ್ನು ಮುಖದ ಮೇಲೆ ಬಳಸುವುದರಿಂದ ಕಪ್ಪು ಕಲೆಗಳನ್ನು ಕಡಿಮೆ ಮಾಡುತ್ತದೆ ಮತ್ತು ಪಿಗ್ಮೆಂಟೆಶನ್ ಕಡಿಮೆ ಮಾಡುತ್ತದೆ. ⮚ ತ್ವಚೆಯ ಮೇಲ್ಭಾಗದಲ್ಲಿ ಹಚ್ಚುವುದರಿಂದ ಟ್ಯಾನಿಂಗ್ ಹೋಗಲಾಡಿಸಿ ಚರ್ಮದ ಕಾಂತಿಯನ್ನು ಹೆಚ್ಚಿಸುತ್ತದೆ ⮚ ಅಲ್ಲದೆ, ಲೋಳೆಸರ ಜೆಲ್ ಮತ್ತು ನಿಂಬೆ ರಸ ಬೇರೆಸಿ ಉಪಯೋಗಿಸುವುದರಿಂದ ಕೂದಲು ಹಾಳಾಗುವುದನ್ನು ನಿಯಂತ್ರಿಸಬಹುದು. ಈ ಮಿಶ್ರಣವನ್ನು ಶಾಂಪೂ ಬಳಸಿದ ನಂತರ ಕೂದಲಿಗೆ ಹಚ್ಚಬೇಕು, 4-5 ನಿಮಿಷ ಬಿಟ್ಟು , ಮತ್ತು ನೀರಿನಿಂದ ಸಂಪೂರ್ಣವಾಗಿ ತೊಳೆಯಬೇಕು. ⮚ ಚರ್ಮವನ್ನು ಆರೋಗ್ಯಕರ ಮತ್ತು ಹೊಳಪುಗೊಳಿಸುವ ಹೈಡ್ರೇಟ್ಗಳನ್ನು ಸಕ್ರಿಯಗೊಳಿಸುತ್ತದೆ. ಮೂಲ: www.phytojournal.com ಈ ಮಾಹಿತಿಯನ್ನು ಉಪಯುಕ್ತವೆಂದು ನೀವು ತಿಳಿದುಕೊಂಡರೆ, ಈ ಚಿತ್ರದ ಅಡಿಯಲ್ಲಿ ಹಳದಿ ಹೆಬ್ಬೆರಳಿನ ಚಿನ್ಹೆ ಮೇಲೆ ಒತ್ತಿ ಮತ್ತು ಕೆಳಗೆ ನೀಡಿರುವ ಆಯ್ಕೆಗಳನ್ನು ಬಳಸಿಕೊಂಡು ನಿಮ್ಮ ರೈತ ಸ್ನೇಹಿತರೊಂದಿಗೆ ಈ ಮಾಹಿತಿ ಯನ್ನು ಹಂಚಿಕೊಳ್ಳಿ.
490
0
ಕುರಿತು ಪೋಸ್ಟ್