AgroStar Krishi Gyaan
Pune, Maharashtra
18 Feb 20, 06:00 AM
ಈ ದಿನದ ಸಲಹೆಆಗ್ರೋಸ್ಟಾರ್ ಅಗ್ರಿ-ಡಾಕ್ಟರ್
ಶುಂಠಿಯಲ್ಲಿ ಗಡ್ಡೆ ಕೊಳೆ ರೋಗದ ಹತೋಟಿ
ಗಡ್ಡೆ ಕೊಳೆ ರೋಗಕ್ಕೆ ತುತ್ತಾದ ಗಿಡಗಳ ಎಲೆಗಳ ತುದಿ ಭಾಗವು ಹಳದಿ ಬಣ್ಣಕ್ಕೆ ತಿರುಗಿ ಕ್ರಮೇಣ ಎಲೆ ಹಳದಿಯಾಗುತ್ತದೆ. ಅದಕ್ಕಾಗಿ ನಿರ್ವಹಣೆಗಾಗಿ, ನಾಟಿ ಮಾಡುವ ಮೊದಲು ಬೀಜದ ಗಡ್ಡೆಗಳನ್ನು 6 ಗ್ರಾಂ ಮೆಟಲಾಕ್ಸಲ್ ಎಮ್. ಝಡ್ 72 ಡಬ್ಲ್ಯೂ.ಪಿ ಯನ್ನು ಒಂದು ಲೀಟರ್ ನೀರಿನಲ್ಲಿ ಬೇರೆಸಿ ತಯಾರಿಸಿದ ದ್ರಾವಣದಲ್ಲಿ 30 ನಿಮಿಷಗಳ ಕಾಲ ನೆನೆಸಿ ನಂತರ ನಾಟಿ ಮಾಡಬೇಕು. ನಾಟಿ ಮಾಡುವಾಗ 1 ಕ್ವಿಂಟಾಲ್ ಬೇವಿನ ಹಿಂಡಿ ಜೊತೆಗೆ 1 ಕಿ. ಗ್ರಾಂ ಟ್ರೈಕೋಡರ್ಮಾ ಜೈವಿಕ ಶಿಲೀಂಧ್ರನಾಶಕ ಪ್ರತಿ ಎಕರೆಗೆ ಭೂಮಿಯಲ್ಲಿ ನಾಟಿ ಮಾಡುವಾಗ ಮಣ್ಣಿಗೆ ಬೇರೆಸಬೇಕು. ಶುಂಠಿ ಬೆಳೆಗೆ ನೆರಳು ಒದಗಿಸುವಂತಹ ಎತ್ತರ ಬೆಳೆಗಳಾದ ಔಡಲ ಅಥವಾ ತೊಗರಿ ಬೆಳೆಗಳನ್ನು ಮಿಶ್ರ ಬೆಳೆಯಾಗಿ ತೆಗೆದುಕೊಳ್ಳಬೇಕು. ಶುಂಠಿಯ ಬೆಳೆಯಲ್ಲಿಯ ಬಾಧೆಗೊಂಡ ಗಡ್ಡೆಗಳನ್ನು ತೆಗೆದು ಹಾಕಿ, ನಂತರ 3 ಗ್ರಾಂ ಕಾಪರ್ ಆಕ್ಸಿಕ್ಲೋರೈಡ್ 50 ಡಬ್ಲ್ಯೂ.ಪಿ ಪ್ರತಿ ಲೀಟರ್ ನೀರಿನಲ್ಲಿ ಬೇರೆಸಿ ತಯಾರಿಸಿದ ದ್ರಾವಣವನ್ನು ರೋಗ ಬಂದ ಮಡಿಗೆ ಹಾಗೂ ಸುತ್ತಮುತ್ತಲಿನ ಮಡಿಗಳಿಗೆ ಹಾಕಬೇಕು.
ನೀವು ಈ ವೀಡಿಯೊವನ್ನು ಇಷ್ಟಪಟ್ಟರೆ, ಈ ಪ್ರಮುಖ ಮಾಹಿತಿಯನ್ನು ನಿಮ್ಮ ರೈತ ಸ್ನೇಹಿತರೊಂದಿಗೆ ಲೈಕ್ ಮಾಡಿ ಮತ್ತು ಹಂಚಿಕೊಳ್ಳಿ!
4
0