ಗುರು ಜ್ಞಾನಅಗ್ರೋಸ್ಟಾರ್ ಅಗ್ರೋನೊಮಿ ಸೆಂಟರ್ ಆಫ್ ಎಕ್ಸೆಲೆನ್ಸ್
ಭತ್ತದಲ್ಲಿ ಹಳದಿ ಕಾಂಡ ಕೊರೆಯುವ ಹುಳುವಿನ ನಿರ್ವಹಣೆ
ಪರಿಚಯ: ಭತ್ತವು ಭಾರತದ ಎಲ್ಲಾ ರಾಜ್ಯಗಳ ಪ್ರಧಾನ ಬೆಳೆಯಾಗಿದೆ. ಆರ್ದ್ರ ವಾತಾವರಣದ ಅಗತ್ಯವಿರುವುದರಿಂದ, ಹೆಚ್ಚಿನ ಆರ್ದ್ರತೆ, ದೀರ್ಘಕಾಲದ ಬಿಸಿಲು ಮತ್ತು ಸುರಕ್ಷಿತ ನೀರು ಸರಬರಾಜು ವ್ಯವಸ್ಥೆ ಹೊಂದಿರುವ ಪ್ರದೇಶಗಳಿಗೆ ಇದು ಸೂಕ್ತ ಬೆಳೆಯಾಗಿದೆ. ಬೆಳೆಯ ಜೀವಿತಾವಧಿಯಲ್ಲಿ ಅಗತ್ಯವಿರುವ ಸರಾಸರಿ ತಾಪಮಾನವು 21ºC ಯಿಂದ 37ºC ವರೆಗೆ ಬದಲಾಗುತ್ತದೆ. ಬೆಳೆಯ ಸಹಿಸಬಲ್ಲ ಗರಿಷ್ಠ ತಾಪಮಾನ 40ºC ನಿಂದ 42ºC ವರೆಗೆ ಇರುತ್ತದೆ. ಮೊಳಕೆಯೊಡೆಯುವ ಸಮಯದಲ್ಲಿ ಕನಿಷ್ಠ ತಾಪಮಾನವು ಬೇಸಾಯ ಮಾಡುವ ಸಮಯದಲ್ಲಿ 10ºC, ಮತ್ತು ಬೆಳೆಯ ಬೆಳವಣಿಗೆಗೆ ಹೆಚ್ಚಿನ ಉಷ್ಣತೆಯ ಅಗತ್ಯವಿರುತ್ತದೆ.
 ಭತ್ತದ ನಾಟಿಯನ್ನು ಜೂಲೈ ತಿಂಗಳ ಮೊದಲ ೧೫ ದಿನಗಳಲ್ಲಿ ಮಾಡಬೇಕು.  ಸಾರಜನಕ ರಸಗೊಬ್ಬರಗಳನ್ನು 3-4 ಸಲ ವಿಭಜೀತ ಪ್ರಮಾಣದಲ್ಲಿ ಕೊಡಬೇಕು.  ನರ್ಸರಿಯಲ್ಲಿ, 100 ಚದರ ಮೀಟರ್‌ಗೆ ಕ್ಲೋರಾಂಟ್ರಾನಿಲಿಪ್ರೊಲ್ 0.4% ಜಿ.ಆರ್ ಅಥವಾ ಕಾರ್ಬೋಫುರಾನ್ 3 ಜಿ ಅಥವಾ ಕಾರ್ಟಾಪ್ ಹೈಡ್ರೋಕ್ಲೋರೈಡ್ 4ಜಿ ಅಥವಾ ಫಿಪ್ರೊನಿಲ್0.3%ಜಿ.ಆರ್@1ಕೆಜಿ. ಮರಳಿನೊಂದಿಗೆ ನರ್ಸರಿಯಲ್ಲಿ ಬಿಜೋಪಚಾರದ ಮಾಡಿದ 15 ದಿನಗಳ ನಂತರ ನರ್ಸರಿಯಲ್ಲಿ ಬೀಜಗಳನ್ನು ನಾಟಿಮಾಡಬೇಕು.  ಸಸಿಗಳ ಎಲೆ ತುದಿಗೆ ಕ್ಲಿಪ್ ಮಾಡಬೇಕು ಅದರಿಂದಾಗಿ ಕಾಂಡ ಕೊರಕವು ತತ್ತಿಯನ್ನಿಡುವುದನ್ನು ತಪ್ಪಿಸಬಹುದು.  ಹಳದಿ ಕಾಂಡ ಕೊರೆಕದ ಮರಿ ಹುಳುವಿನ ಹಂತಗಳನ್ನು ನಿಯಂತ್ರಿಸಲು ಹರಳಿನ ರೂಪದ ಕೀಟನಾಶಕಗಳು ಹೆಚ್ಚು ಪರಿಣಾಮಕಾರಿಯಾಗಿ ಕೆಲಸ ಮಾಡುತ್ತವೆ.  ಕ್ಲೋರಾಂಟ್ರಾನಿಲಿಪ್ರೊಲ್ 0.4 ಜಿ. ಆರ್ @ 10 ಕೆಜಿ ಅಥವಾ ಕಾರ್ಟಾಪ್ ಹೈಡ್ರೋಕ್ಲೋರೈಡ್ 4ಜಿ @ 10 ಕೆ. ಜಿ ಅಥವಾ ಫಿಪ್ರೊನಿಲ್ 0.3 ಜಿ.ಆರ್ @ 20-25 ಕೆಜಿ ಪ್ರತಿ ಹೆಕ್ಟೇರಿಗೆ ಎರಡು ಬಾರಿ ಭತ್ತದ ಗದ್ದೆಯಲ್ಲಿ ಮೊದಲು ಕೀಟಪೀಡೆಯ ಆರಂಭಿಕ ಹಂತದಲ್ಲಿ ಅಥವಾ ನಾಟಿ ಮಾಡಿದ 30-35 ದಿನಗಳ ನಂತರ ಅಥವಾ 15-20 ದಿನಗಳ ನಂತರ ಮೊದಲ ಹಂತದ ಕೀಟನಾಶಕ ಎರಡನೇ ಸಲಹರಳಿನ ರೂಪದ ಕೀಟನಾಶಕ ಹಾಕಬೇಕು.  ಹರಳಿನ ರೂಪದ ಕೀಟನಾಶಕಗಳನ್ನು ಬಾಧೆಗೊಂಡಿರುವ ಪ್ರದೇಶದಲ್ಲಿ ಮಾತ್ರ ಹಾಕಬೇಕು.  ಇದಲ್ಲದೆ, ಕ್ಲೋರಾಂಟ್ರಾನಿಲಿಪ್ರೊಲ್ 18.5 ಎಸ್‌ಸಿ @ 3 ಮಿಲಿ ಅಥವಾ ಫ್ಲುಬೆಂಡಿಯಮೈಡ್ 480 ಎಸ್‌.ಸಿ @ 3ಮಿ. ಲಿ ಅಥವಾ ಫಿಪ್ರೊನಿಲ್ 80 ಡಬ್ಲ್ಯೂಜಿ @ 1 ಗ್ರಾಂ ಅಥವಾ ಫ್ಲುಬೆಂಡಿಯಾಮೈಡ್ 20 ಡಬ್ಲ್ಯೂಜಿ @ 2.5 ಗ್ರಾಂ ಅಥವಾ ಫ್ಲೂಬೆಂಡಿಯಾಮೈಡ್ 4% + ಬುಪ್ರೊಫೆಜಿನ್ 20% ಎಸ್‌ಸಿ @ 10 ಮಿ.ಲಿ 10 ಲೀಟರ್ ನೀರಿಗೆ ಬೇರೆಸಿ ಸಿಂಪಡಿಸಿ. ಡಾ. ಟಿ. ಎಂ. ಭೋರ್ಪೋಡಾ, ಎಕ್ಸ್. ಕೀಟಶಾಸ್ತ್ರದ ಪ್ರೊಫೆಸರ್, ಬಿ. ಎ. ಕೃಷಿ ಕಾಲೇಜು, ಆನಂದ್ ಕೃಷಿ ವಿಶ್ವವಿದ್ಯಾಲಯ, ಆನಂದ್- 388 110 (ಗುಜರಾತ, ಭಾರತ) ಈ ಮಾಹಿತಿಯನ್ನು ಉಪಯುಕ್ತವೆಂದು ನೀವು ತಿಳಿದುಕೊಂಡರೆ, ಈ ಚಿತ್ರದ ಅಡಿಯಲ್ಲಿ ಹಳದಿ ಹೆಬ್ಬೆರಳಿನ ಚಿನ್ಹೆ ಮೇಲೆ ಒತ್ತಿ ಮತ್ತು ಕೆಳಗೆ ನೀಡಿರುವ ಆಯ್ಕೆಗಳನ್ನು ಬಳಸಿಕೊಂಡು ನಿಮ್ಮ ರೈತ ಸ್ನೇಹಿತರೊಂದಿಗೆ ಈ ಮಾಹಿತಿ ಯನ್ನು ಹಂಚಿಕೊಳ್ಳಿ.
212
16
ಕುರಿತು ಪೋಸ್ಟ್