Looking for our company website?  
AgroStar Krishi Gyaan
Pune, Maharashtra
04 Aug 19, 06:30 PM
ಪಶುಸಂಗೋಪನೆNDDB
ನವಜಾತ ಕರುವಿನ ಪೋಷಣೆಯ ಬಗ್ಗೆ ಮಹತ್ವದ ಮಾಹಿತಿ
ಯಾವುದೇ ಡೈರಿ ಫಾರಂನ ಯಶಸ್ಸು ಕರುಗಳ ಸರಿಯಾದ ನಿರ್ವಹಣೆಯ ಮೇಲೆ ಅವಲಂಬಿತವಾಗಿರುತ್ತದೆ. ಕರುಗಳು / ಕರುಗಳ ಆರಂಭಿಕ ಜೀವನದಲ್ಲಿ ಉತ್ತಮ ಪೋಷಣೆ ಅವುಗಳ ತ್ವರಿತ ಬೆಳವಣಿಗೆ ಮತ್ತು ಆರಂಭಿಕ ಕರುವಿನ ಪ್ರಬುದ್ಧತೆಗಾಗಿ ಒಳ್ಳೆಯದು. ಪ್ರೌಢಾವಸ್ಥೆಯಲ್ಲಿ ದೇಹದ ತೂಕವು 70-75 ಶೇಕಡಾವನ್ನು ಪಡೆಯಲು, ಅವುಗಳನ್ನು ಎಚ್ಚರಿಕೆಯಿಂದ ಸಾಕಬೇಕಾಗುತ್ತದೆ. ಆರಂಭದಲ್ಲಿ, ಕರುಗಳಿಗೆ ಸರಿಯಾದ ಪೋಷಣೆ ಸಿಗದಿದ್ದರೆ, ಮುಖ್ಯವಾಗಿ ಕರುಗಳು ಬೆದೆಗೆ ಬರುವ ಹಂತದಲ್ಲಿ ವಿಳಂಬವಾಗುತ್ತದೆ ಮತ್ತು ಅವುಗಳ ಹಾಲಿನ ಉತ್ಪಾದಕತೆ ಕಡಿಮೆಯಾಗುತ್ತದೆ. ಕರುಗಳಿಗೆ ಪಶು ಆಹಾರಕ್ಕೆ ಸಂಬಂಧಿಸಿದ ಕೆಲವು ಪ್ರಮುಖ ಅಂಶಗಳು:  ಕರು ಹುಟ್ಟಿದ ಅರ್ಧ ಘಂಟೆಯೊಳಗೆ ಕೊಲೊಸ್ಟ್ರಮ್ ( ತಾಯಿಯ ಹಾಲನ್ನು) ನ್ನು ಕೋಡಬೇಕು .  ಕರುವಿಗೆ 2 ತಿಂಗಳವರೆಗೆ ಅದರ ತೂಕದ 10% ಆಹಾರವಾಗಿ ಹಾಲನ್ನು ಕೋಡಬೇಕು.  ಕರುವಿಗೆ ಹುಟ್ಟಿದ ಎರಡನೇ ವಾರದಿಂದ ಉತ್ತಮ ಗುಣಮಟ್ಟದ ಹಸಿರು ಮೇವನ್ನು ನೀಡಬೇಕು.  ಕರುವಿಗೆ ಪ್ರತಿ ತಿಂಗಳು ತಪ್ಪದೆ ಕ್ರಿಮಿನಾಶಕ ಔಷಧಿಗಳನ್ನು ನೀಡಬೇಕು.  ನೀವು ಹಾಲಿನ್ನೊಂದಿಗೆ ಪ್ರತಿಜೀವಕ ಪುಡಿಯನ್ನು ಕೂಡಾ ಬೇರೆಸಿ ನೀಡಬೇಕು.  ಕರುವಿಗೆ ಉತ್ತಮ ಗುಣಮಟ್ಟದ ಒಣ ಹುಲ್ಲನ್ನು ಸಹ ಒದಗಿಸಬೇಕು.  ಲಸಿಕೆ ಸಮಯಕ್ಕೆ ಸರಿಯಾಗಿ ಹಾಕಿಸಬೇಕು. ಮೂಲ: ಎನ್‌ಡಿಡಿಬಿ
ಈ ಮಾಹಿತಿಯನ್ನು ಉಪಯುಕ್ತವೆಂದು ನೀವು ತಿಳಿದುಕೊಂಡರೆ, ಈ ಚಿತ್ರದ ಅಡಿಯಲ್ಲಿ ಹಳದಿ ಹೆಬ್ಬೆರಳಿನ ಚಿನ್ಹೆ ಮೇಲೆ ಒತ್ತಿ ಮತ್ತು ಕೆಳಗೆ ನೀಡಿರುವ ಆಯ್ಕೆಗಳನ್ನು ಬಳಸಿಕೊಂಡು ನಿಮ್ಮ ರೈತ ಸ್ನೇಹಿತರೊಂದಿಗೆ ಈ ಮಾಹಿತಿ ಯನ್ನು ಹಂಚಿಕೊಳ್ಳಿ.
381
0