Looking for our company website?  
AgroStar Krishi Gyaan
Pune, Maharashtra
06 Oct 19, 06:30 PM
ಪಶುಸಂಗೋಪನೆNDDB
ಜಾನುವಾರುಗಳ ಕ್ಯಾಲೆಂಡರ್: ಅಕ್ಟೋಬರ್‌ನಲ್ಲಿ ನೆನಪಿನಲ್ಲಿಡಬೇಕಾದ ವಿಷಯಗಳು
ಕಾಲು ಮತ್ತು ಬಾಯಿ ರೋಗಕ್ಕಾಗಿ, ಜಾನುವಾರುಗಳ ದೇಹದ ಬಾಧಿತ ಭಾಗವನ್ನು ಔಷಧದಿಂದ 1 ಪ್ರತಿಶತ ದ್ರಾವಣದೊಂದಿಗೆ (ಪೊಟ್ಯಾಸಿಯಮ್ ಪರ್ಮಾಂಗನೇಟ್) ಚಿಕಿತ್ಸೆ ನೀಡಿ. ನೀವು ಇನ್ನೂ ಬಾಯಿ-ಕಾಲು ರೋಗ, ಹೆಮರಾಜಿಕ್ ಸೆಪ್ಟಿಸೆಮಿಯಾ, ಕಪ್ಪು ಕಾಲು ರೋಗ , ಎಂಟರೊಟಾಕ್ಸೆಮಿಯಾ ಇತ್ಯಾದಿಗಳಿಗೆ ಲಸಿಕೆಗಳನ್ನು ಪಡೆಯದಿದ್ದರೆ, ದಯವಿಟ್ಟು ಸಮಯಕ್ಕೆ ಸರಿಯಾಗಿ ಪಡೆಯಿರಿ. ಪರಾವಲಂಬಿನಾಶಕ ಮತ್ತು ಆಂಥೆಲ್ಮಿಂಟಿಕ್ ಔಷಧಿಗಳನ್ನು / ಪರಿಹಾರವನ್ನು ನೀಡುವ ಸಮಯ ಇದು. ಪರಾವಲಂಬಿ ಔ ಷಧಿಗಳನ್ನು ಪರ್ಯಾಯವಾಗಿ ಬಳಸಿ. ಪ್ರಾಣಿಗಳಿಗೆ ಖನಿಜ ಮಿಶ್ರಣವನ್ನು ನೀಡುಬೇಕು. ಈ ತಿಂಗಳಲ್ಲಿ ಹಸಿರು ಹುಲ್ಲಿನ ಲಭ್ಯತೆ ಹೆಚ್ಚಾಗುತ್ತದೆ, ಆದರೆ ಅದರ ಪ್ರಮಾಣವನ್ನು ನಿಯಂತ್ರಿಸಿ. ಒಣ ಮತ್ತು ಹಸಿರು ಮೇವು ಎರಡನ್ನೂ ಮಿಶ್ರಣ ಮಾಡಿ ಕೊಡಬೇಕು. ಅತಿಯಾದ ಹಸಿರು ಮೇವಿನಿಂದ ಹೊಟ್ಟೆ ನೋವಿಗೆ ಕಾರಣವಾಗಬಹುದು.
ನೀವು ಹಿಂದಿನ ತಿಂಗಳಲ್ಲಿ ಕುರಿಯ ಉಣ್ಣೆಯನ್ನು ಕತ್ತರಿಸುವ ಕೆಲಸವನ್ನು ಮಾಡದಿದ್ದರೆ, ಅದನ್ನು ಈ ತಿಂಗಳಲ್ಲಿ ಮಾಡಿ. ಕುರಿಗಳ ದೇಹದಿಂದ ಕತ್ತರಿಸಿದ 21 ದಿನಗಳ ನಂತರ, ಬಾಹ್ಯ ಪರಾವಲಂಬಿಗಳನ್ನು ತಪ್ಪಿಸಲು ಆಂಟಿಸೆಪ್ಟಿಕ್ ದ್ರಾವಣದಲ್ಲಿ ಸ್ನಾನ ಮಾಡಿಸಬೇಕು. ಚಳಿಗಾಲವು ಈ ತಿಂಗಳಲ್ಲಿ ಪ್ರಾರಂಭವಾಗುತ್ತದೆ, ಆದ್ದರಿಂದಜಾನುವಾರುಗಳನ್ನು ಶೀತದಿಂದ ರಕ್ಷಿಸಲು ಸರಿಯಾದ ನಿರ್ವಹಣೆ ಮಾಡಿ. ಮೂಲ: ಎನ್‌ಡಿಡಿಬಿ ಈ ಮಾಹಿತಿಯನ್ನು ಉಪಯುಕ್ತವೆಂದು ನೀವು ತಿಳಿದುಕೊಂಡರೆ, ಈ ಚಿತ್ರದ ಅಡಿಯಲ್ಲಿ ಹಳದಿ ಹೆಬ್ಬೆರಳಿನ ಚಿನ್ಹೆ ಮೇಲೆ ಒತ್ತಿ ಮತ್ತು ಕೆಳಗೆ ನೀಡಿರುವ ಆಯ್ಕೆಗಳನ್ನು ಬಳಸಿಕೊಂಡು ನಿಮ್ಮ ರೈತ ಸ್ನೇಹಿತರೊಂದಿಗೆ ಈ ಮಾಹಿತಿ ಯನ್ನು ಹಂಚಿಕೊಳ್ಳಿ.
186
0