Looking for our company website?  
AgroStar Krishi Gyaan
Pune, Maharashtra
28 Oct 19, 10:00 AM
ಸಲಹಾ ಲೇಖನಅಗ್ರೋಸ್ಟಾರ್ ಅಗ್ರೋನೊಮಿ ಸೆಂಟರ್ ಆಫ್ ಎಕ್ಸೆಲೆನ್ಸ್
ದಾಳಿಂಬೆಯಲ್ಲಿ ಸಮಗ್ರ ಕೀಟ ನಿರ್ವಹಣಾಕ್ರಮಗಳು
1. ಚಾಟಣಿ ಮಾಡಿದ ನಂತರ, ಕೀಟನಾಶಕವನ್ನು ದಾಳಿಂಬೆ ಗಿಡದ ಮೇಲೆ ಸಿಂಪಡಿಸಿ, ಅಂದರೆ. ಕ್ಲೋರ್ಪಿರಿಫಾಸ್ @ 20 ಮಿಲಿ / 10 ಲೀಟರ್ ನೀರಗೆ ಬೇರೆಸಿ ಸಿಂಪಡಿಸಿ. 4 ಕೆಜಿ ಜಾಜಾ + 50 ಗ್ರಾಂ ಸಿಒಸಿ + ಕ್ಲೋರ್ಪಿರಿಫೊಸ್@ 50 ಮಿಲಿ + 5 ಮಿಲಿ ಸ್ಟಿಕ್ಕರ್ / 10 ಲೀಟರ್ ನೀರಗೆ ಬೇರೆಸಿ ತಯಾರಿಸಿ ನಂತರ ಅದನ್ನು ಮರದ ಕಾಂಡದ ಮೇಲೆ ಲೇಪಿಸಬೇಕು. 2. ಕೊಟ್ಟಿಗೆ ಗೊಬ್ಬರಕ್ಕೆ 20 ಗ್ರಾಂ ಟ್ರೈಕೊಡರ್ಮಾ + 2 ಕೆಜಿ ಬೇವಿನ ಹಿಂಡಿ ಸೇರಿಸಿ ಮತ್ತು ಚಾಟನಿಯ ಮೊದಲು ಅಥವಾ ನಂತರ ಮರದ ಸುತ್ತಲೂ ರಿಂಗ ಬೇಸಿನ ಮಾಡಿ ಗಿಡಕ್ಕೆ ಕೊಡಬೇಕು. 3. ಚೆಂಡು ಹೂ ಗಿಡಗಳನ್ನು ದಾಳಿಂಬೆಯ ಸಾಲುಗಳಲ್ಲಿ ನೆಡಬೇಕಾಗಿದೆ. 4. ಮೆಟಾರ್ಜಿಜಿಯಂ ಅನಿಸೊಪ್ಲಿಯಾ@ 60 ಗ್ರಾಂ 10 ಲೀಟರ್ ನೀರಿಗೆ ಬೇರೆಸಿ ನಂತರ ಅದನ್ನು ಮರಗಳ ಮೇಲೆ ಸಿಂಪಡಿಸಿ ಅಥವಾ ಕೀಟ ಪೀಡೆಗಳು ಹೆಚ್ಚಿದ್ದರೆ ಡೈಮೆಥೊಯೇಟ್ @ 15 ಮಿಲಿ ಅಥವಾ ಇಮಿಡಾಕ್ಲೋಪ್ರಿಡ್ 17.8 ಎಸ್ಎಲ್ @ 10 ಮಿಲಿ ಅಥವಾ ಸ್ಪಿನೋಸಾಡ್ 45% ಎಸ್ಸಿ @ 5 ಮಿಲಿ / 10 ಲೀಟರ್ ನೀರಿಗೆ ಬೇರೆಸಿ ಸಿಂಪಡಿಸಬೇಕು.
5. ಕೀಟ ಪೀಡೆ ಹೆಚ್ಚಿದ ಸಂದರ್ಭದಲ್ಲಿ, 5% ಬೇವಿನ ಬೀಜದ ಕಷಾಯ ಅಥವಾ ಅಜಾರ್ಡಿರಾಕ್ಟಿನ್@ 20 ಮಿಲಿ ಅಥವಾ ನೀಮ್ ಎಣ್ಣೆ@30 ಮಿಲಿಯನ್ನು 10 ಲೀಟರ್ ನೀರಗೆ ಬೇರೆಸಿ ವಾರಕ್ಕೊಮ್ಮೆ ಸಿಂಪಡಿಸಿ. 6. ಹೂವುಗಳು ಮತ್ತು ಸಣ್ಣ ಹಣ್ಣುಗಳ ಮೇಲೆ ಮೊಟ್ಟೆಗಳು ಇದ್ದರೆ, ಅಜಾರ್ಡಿರಾಕ್ಟಿನ್ @ 20 ಮಿಲಿ / 10 ಲೀಟರ್ ನೀರಗೆ ಬೇರೆಸಿ ಸಿಂಪಡಿಸಿ ಅಥವಾ 5 ಪ್ರತಿಶತ ಬೇವಿನ ಬೀಜದ ಕಷಾಯವನ್ನು ಸಿಂಪಡಿಸಿ. 7.ಕಾಂಡ ಕೊರಕದಿಂದ ಬಾಧೆಗೊಂಡ ಮರದ ಕಾಂಡದ ಮೇಲೆ ಸಣ್ಣ ರಂಧ್ರಗಳು ಅಥವಾ ಕಟ್ಟಿಗೆಯ ಧೂಳಿನ ಕಣಗಳು ಕಂಡುಬಂದರೆ, ರಂಧ್ರಗಳಿಗೆ ತಂತಿಯನ್ನು ಹಾಕಿ ಮರಿಹುಳುವನ್ನು ಸಾಯಿಸಿ ತೆಗೆದ ನಂತರ 5 ಮಿಲಿ ಸೈಪರ್‌ಮೆಥ್ರಿನ್ ಇಂಜೆಕ್ಷನ್ ಸಹಾಯದಿಂದ ರಂಧ್ರಗಳಿಗೆ ಹಾಕಬೇಕು. ರಂಧ್ರವನ್ನು ಮೇಣದೊಂದಿಗೆ ಮುಚ್ಚಿ 8. ಬಿಳಿ ನೊಣಕ್ಕಾಗಿ ಬೌವೆರಿಯಾ ಬಸ್ಸಿಯಾನಾ / ವರ್ಟಿಸಿಲಿಯಮ್ ಲೇಕಾನಿ @ 20 ಮಿಲಿ / 10 ಲೀಟರ್ ನೀರಿಗೆ ಬೇರೆಸಿ ಸಿಂಪಡಿಸಿ. ಈ ಮಾಹಿತಿಯನ್ನು ಉಪಯುಕ್ತವೆಂದು ನೀವು ತಿಳಿದುಕೊಂಡರೆ, ಈ ಚಿತ್ರದ ಅಡಿಯಲ್ಲಿ ಹಳದಿ ಹೆಬ್ಬೆರಳಿನ ಚಿನ್ಹೆ ಮೇಲೆ ಒತ್ತಿ ಮತ್ತು ಕೆಳಗೆ ನೀಡಿರುವ ಆಯ್ಕೆಗಳನ್ನು ಬಳಸಿಕೊಂಡು ನಿಮ್ಮ ರೈತ ಸ್ನೇಹಿತರೊಂದಿಗೆ ಈ ಮಾಹಿತಿ ಯನ್ನು ಹಂಚಿಕೊಳ್ಳಿ.
135
1