AgroStar Krishi Gyaan
Pune, Maharashtra
18 Apr 19, 10:00 AM
ಗುರು ಜ್ಞಾನಅಗ್ರೋಸ್ಟಾರ್ ಅಗ್ರೋನೊಮಿ ಸೆಂಟರ್ ಆಫ್ ಎಕ್ಸೆಲೆನ್ಸ್
ಟೊಮ್ಯಾಟೋ ತರಕಾರಿ ಬೆಳೆಯಲ್ಲಿ ಸಮಗ್ರ ಕೀಟ ಪೀಡೆಯ ನಿರ್ವಹಣೆ
ಟೊಮೆಟೊ ಬೆಳೆಯಲ್ಲಿ, ಹಣ್ಣಿನ ಕಾಯಿಕೊರಕವು ಒಂದು ಪ್ರಮುಖ ಕೀಟವಾಗಿದ್ದು , ಇದು ಟೊಮೆಟೊನಲ್ಲಿ ಬಹಳಷ್ಟು ಹಾನಿ ಉಂಟುಮಾಡುತ್ತದೆ. ಪದೇ ಪದೇ ಒಂದೇ ರಾಸಾಯನಿಕ ಕೀಟನಾಶಕವನ್ನು ಅನುಸರಿಸಬೇಡಿ. ಬದಲಾಗಿ, ಈ ಹಣ್ಣಿನ ಕೊರಕದ ನಿರ್ವಹಣೆಗೆ ಸರಿಯಾದ ಸಮಗ್ರ ನಿರ್ವಹಣೆ ಹಂತಗಳನ್ನು ಅನುಸರಿಸಿ.
ಸಮಗ್ರ ಕೀಟ ಪೀಡೆಯ ನಿರ್ವಹಣೆ:
ಹೊಲದಲ್ಲಿ ಬೆಳಕಿನ ಬಲೆಗಳನ್ನೂ ಸ್ಥಾಪಿಸಿ.
ಬಲೆ ಬೆಳೆಯಾಗಿ ಹೊಲದ ಸುತ್ತಲೂ ಆಫ್ರಿಕನ್ ಚೆಂಡುಹೂವಿನ ಗಿಡಗಳನ್ನು ಬೆಳೆಯಿರಿ.
ಗಿಡಗಳಿಂದ ಮರಿಹುಳುಗಳನ್ನು ಆರಿಸಿ ನಾಶಪಡಿಸಬೇಕು.
ಟೊಮೇಟೊ ಹಣ್ಣಿನ ಕೊರಕಕ್ಕಾಗಿ ಮೋಹಕ ಬಲೆ (ಫೆರೋಮೋನ್ ಬಲೆ) ಗಳನ್ನು ಪ್ರತಿ ಎಕರೆಗೆ 15 ಬಲೆಗಳನ್ನುಸ್ಥಾಪಿಸಿ.
ಕೀಟದ ಬಾಧೆಯ ಪ್ರಾರಂಭವಾಗುವ ಮುನ್ನ ಬೊವೆರಿಯಾ ಬಾಸ್ಸಿನಾ 40 ಗ್ರಾಂನ್ನು 10 ಲೀಟರ್ ನೀರಿಗೆ ಬೆರೆಸಿ ಸಿಂಪಡಣೆ ಮಾಡಬೇಕು.
ಪ್ರತಿ ಹೆಕ್ಟೇರಿಗೆ HaNPV @ 250 ಎಲ್ ಇ ನೀರಿಗೆ ಬೆರೆಸಿ ಸಿಂಪಡಣೆ ಮಾಡಬೇಕು
ಪ್ರತಿ ಹೆಕ್ಟೇರಿಗೆ ಬ್ಯಾಸಿಲಸ್ ತುರಿಂಜಿಯೆನ್ಸಿಸ್ 750 ಗ್ರಾಂ ಬ್ಯಾಕ್ಟೀರಿಯಲ್ ಆಧಾರಿತ ಪುಡಿಯನ್ನು ನೀರಿಗೆ ಬೆರೆಸಿ ಸಿಂಪಡಿಸಬೇಕು.
ಪ್ರತಿ ಸಲ ಹಣ್ಣುಗಳನ್ನು ಬೇರ್ಪಡಿಸುವಾಗ ಕೊಳೆತ ಹಣ್ಣುಗಳನ್ನು ಆರಿಸಿ ಮತ್ತು ನಾಶಮಾಡಿ.
ಡಾ. ಟಿ. ಎಂ. ಭೋರ್ಪೋಡಾ,
ಎಕ್ಸ್. ಕೀಟಶಾಸ್ತ್ರದ ಪ್ರೊಫೆಸರ್,
ಬಿ. ಎ. ಕೃಷಿ ಕಾಲೇಜು, ಆನಂದ್ ಕೃಷಿ ವಿಶ್ವವಿದ್ಯಾಲಯ, ಆನಂದ್- 388 110 (ಗುಜರಾತ, ಭಾರತ)
ಈ ಮಾಹಿತಿಯನ್ನು ಉಪಯುಕ್ತವೆಂದು ನೀವು ತಿಳಿದುಕೊಂಡರೆ, ಈ ಚಿತ್ರದ ಅಡಿಯಲ್ಲಿ ಹಳದಿ ಹೆಬ್ಬೆರಳಿನ ಚಿನ್ಹೆ ಮೇಲೆ ಒತ್ತಿ ಮತ್ತು ಕೆಳಗೆ ನೀಡಿರುವ ಆಯ್ಕೆಗಳನ್ನು ಬಳಸಿಕೊಂಡು ನಿಮ್ಮ ರೈತ ಸ್ನೇಹಿತರೊಂದಿಗೆ ಈ ಮಾಹಿತಿ ಯನ್ನು ಹಂಚಿಕೊಳ್ಳಿ.