Looking for our company website?  
AgroStar Krishi Gyaan
Pune, Maharashtra
18 Aug 19, 06:30 PM
ಪಶುಸಂಗೋಪನೆNDDB
ಜಾನುವಾರುಗಳಲ್ಲಿ ಬೇಕಾಗುವ ಪ್ರಮುಖ ಮತ್ತು ಲಘು ಖನಿಜಾಂಶಗಳ ಪ್ರಾಮುಖ್ಯತೆ
ಸಾಮಾನ್ಯವಾಗಿ ದೇಹದ ಬೆಳವಣಿಗೆ ಮತ್ತು ಸಂತಾನೋತ್ಪತ್ತಿಗಾಗಿ ಹಾಲು ನೀಡುವ ಜಾನುವಾರುಗಳಲ್ಲಿ ಪ್ರಮುಖವಾಗಿ ಅದರ ಆಹಾರದಲ್ಲಿ ಸಾಕಷ್ಟು ಖನಿಜಾಂಶಗಳು ಬೇಕಾಗುತ್ತವೆ. ದೊಡ್ಡ ಪ್ರಮಾಣದಲ್ಲಿ ಅಗತ್ಯವಿರುವ ಖನಿಜಾಂಶಗಳು, ಮುಖ್ಯ ಖನಿಜಾಂಶಗಳು ಮತ್ತು ಕಡಿಮೆ ಅಗತ್ಯವಿರುವವುಗಳನ್ನು ಲಘು ಖನಿಜಗಳು ಎಂದು ಕರೆಯಲಾಗುತ್ತದೆ. ಜಾನುವಾರುಗಳಿಗೆ ಬೇಕಾಗುವ ಮುಖ್ಯ ಖನಿಜಾಂಶಗಳು ಕ್ಯಾಲ್ಸಿಯಂ,ರಂಜಕ, ಮೆಗ್ನೀಸಿಯಮ್, ಪೊಟ್ಯಾಸಿಯಮ್, ಸೋಡಿಯಂ, ಕ್ಲೋರಿನ್,ಗಂಧಕ ಮತ್ತು ಲಘು ಖನಿಜಾಂಶಗಳಲ್ಲಿ ಕಬ್ಬಿಣ, ಸತು, ಮ್ಯಾಂಗನೀಸ್, ತಾಮ್ರ, ಅಯೋಡಿನ್, ಕೋಬಾಲ್ಟ್ ಮತ್ತು ಸೆಲೆನಿಯಮ್ಗಳು ಆಗಿವೆ. ಜಾನುವಾರುಗಳ ದೇಹದಲ್ಲಿ ಮುಖ್ಯ ಖನಿಜಾಂಶಗಳ ಮತ್ತು ಲಘು ಖನಿಜಾಂಶ ಕಾರ್ಯ: ಕ್ಯಾಲ್ಸಿಯಂ ಹಾಲು ಉತ್ಪಾದನೆಗೆ ಅಗತ್ಯವಿದೆ. ಮೂಳೆಗಳು ಮತ್ತು ಹಲ್ಲುಗಳ ರಚನೆಗಾಗಿ ಸಹಾಯವಾಗುತ್ತದೆ. ಸ್ನಾಯುಗಳ ಹೇಗೆ ಬೇಕೋ ಹಾಗೆ ಬಾಗಿಸಲು ಸಹಾಯಕವಾಗಿದೆ. ರಂಜಕ ದೇಹದಲ್ಲಿನ ಶಕ್ತಿಯ ಬಳಕೆಗಾಗಿ ಅವಶ್ಯಕವಾಗಿದೆ. ಮೆಗ್ನೀಸಿಯಮ್ ಕಾರ್ಬೋಹೈಡ್ರೇಟ್‌ಗಳು ಮತ್ತು ಹೀರಿಕೊಳ್ಳುವ ಪ್ರಕ್ರಿಯೆ ಮತ್ತು ಪ್ರೋಟೀನ್ ರಚನೆಗೆ ಅಗತ್ಯ. ತಾಮ್ರ ಹಿಮೋಗ್ಲೋಬಿನ್ (ರಕ್ತ ಕಣಗಳ) ತಯಾರಿಕೆಗೆ ಅಗತ್ಯ ಸಂತಾನೋತ್ಪತ್ತಿಗೆ ಅವಶ್ಯಕವಾಗಿದೆ. ಸತು ವೀರ್ಯಾಣು ರಚನೆ ಮತ್ತು ದೇಹದ ಇತರ ಅಂಗಾಂಶಗಳ ಬೆಳವಣಿಗೆಗೆ ಅಗತ್ಯ. ಸಾಮಾನ್ಯವಾಗಿ ಚರ್ಮದ ಕೋಶಗಳ ಕಾರ್ಯನಿರ್ವಹಣೆಗೆ ಅಗತ್ಯ. ಮ್ಯಾಂಗನೀಸ್ ದೇಹದಲ್ಲಿ ಕಾರ್ಬೋಹೈಡ್ರೇಟ್‌ಗಳ ಬಳಕೆಯಲ್ಲಿ ಅವಶ್ಯಕವಾಗಿದೆ. ಜಾನುವಾರುಗಳ ದೇಹದ ಕೊಬ್ಬಿನಾಮ್ಲಗಳ ತಯಾರಿಕೆಗೆ ಅಗತ್ಯ. ಅಯೋಡಿನ್ ಥೈರಾಯ್ಡ್ ಹಾರ್ಮೋನಿನ ರಚನೆಗೆ ಅಗತ್ಯವಿದೆ. ಪಶುಗಳ ಸಂತಾನೋತ್ಪತ್ತಿ ಮತ್ತು ಅವುಗಳ ಬೆಳವಣಿಗೆಗೆ ಅವಶ್ಯಕವಾಗಿದೆ. ಕೋಬಾಲ್ಟ್ ಜಾನುವಾರುಗಳು ಮೆಲುಕು ಹಾಕುವಾಗ ಬ್ಯಾಕ್ಟೀರಿಯಾದಿಂದ ವಿಟಮಿನ್ ಬಿ-12 ಲ್ಲಿನ ರಚನೆಗೆ ಅಗತ್ಯವಿದೆ. ಹಿಮೋಗ್ಲೋಬಿನ್ (ರಕ್ತ ಕಣಗಳ) ತಯಾರಿಕೆಗೆ ಅಗತ್ಯ ಮೂಲ: ಎನ್‌ಡಿಡಿಬಿ
ಈ ಮಾಹಿತಿಯನ್ನು ಉಪಯುಕ್ತವೆಂದು ನೀವು ತಿಳಿದುಕೊಂಡರೆ, ಈ ಚಿತ್ರದ ಅಡಿಯಲ್ಲಿ ಹಳದಿ ಹೆಬ್ಬೆರಳಿನ ಚಿನ್ಹೆ ಮೇಲೆ ಒತ್ತಿ ಮತ್ತು ಕೆಳಗೆ ನೀಡಿರುವ ಆಯ್ಕೆಗಳನ್ನು ಬಳಸಿಕೊಂಡು ನಿಮ್ಮ ರೈತ ಸ್ನೇಹಿತರೊಂದಿಗೆ ಈ ಮಾಹಿತಿ ಯನ್ನು ಹಂಚಿಕೊಳ್ಳಿ.
292
0