AgroStar Krishi Gyaan
Pune, Maharashtra
12 Jun 19, 06:00 PM
ಮಾನ್ಸೂನ್ ಸಮಾಚಾರಪ್ರಜಾವಾಣಿ ವಾರ್ತೆ
‘ವಾಯು’ ಕಟ್ಟೆಚ್ಚರ
ನವದೆಹಲಿ: ವಾಯುಭಾರ ಕುಸಿತದಿಂದ ಅರಬ್ಬಿ ಸಮುದ್ರದಲ್ಲಿ ಉಂಟಾಗಿರುವ ‘ವಾಯು’ ಚಂಡಮಾರುತವು ಗುರುವಾರ (ಜೂ. 13) ಗುಜರಾತ್ ತೀರವನ್ನು ಅಪ್ಪಳಿಸಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಹೇಳಿದೆ. ಮುಂದಿನ 12 ಗಂಟೆಗಳಲ್ಲಿ ‘ವಾಯು’ ಚಂಡಮಾರುತವು ಇನ್ನಷ್ಟು ತೀವ್ರಗೊಂಡು ಗಂಟೆಗೆ 110 ರಿಂದ 120 ಕಿ.ಮೀ. ವೇಗದಲ್ಲಿ ಉತ್ತರ ಭಾಗದತ್ತ ಸಂಚರಿಸಲಿದೆ. ಗುರುವಾರ ಮುಂಜಾನೆ ಗುಜರಾತ್ ತೀರದಲ್ಲಿ ಗಂಟೆಗೆ 135 ಕಿ.ಮೀ. ವೇಗದಲ್ಲಿ ಗಾಳಿ ಬೀಸುವ ನಿರೀಕ್ಷೆ ಇದೆ ಎಂದು ಹವಾಮಾನ ಇಲಾಖೆ ಹೊರಡಿಸಿರುವ ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಚಂಡಮಾರುತದ ಪರಿಣಾಮ ಸೌರಾಷ್ಟ್ರ ಮತ್ತು ಕಛ್ ಪ್ರದೇಶದಲ್ಲಿ ಬಿರುಗಾಳಿಸಹಿತ ಭಾರಿ ಮಳೆಯಾ ಗುವ ಸಾಧ್ಯತೆ ಇದೆ ಎಂದು ಇಲಾಖೆ ಸೂಚಿಸಿದೆ. ಕಟ್ಟೆಚ್ಚರ: ‘ವಾಯು’ ಚಂಡಮಾರುತ ವನ್ನು ಎದುರಿಸಲು ಸರ್ಕಾರ ಭಾರಿ ಸಿದ್ಧತೆ ಮಾಡಿಕೊಂಡಿದೆ. ಸೌರಾಷ್ಟ್ರ ಮತ್ತು ಕಛ್ ಕರಾವಳಿಯಲ್ಲಿ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯನ್ನು (ಎನ್ಡಿಆರ್ಎಫ್) ನಿಯೋಜಿಸಲಾಗಿದೆ. ‘ಗುಜರಾತ್ ಹಾಗೂ ದಮನ್ ಮತ್ತು ದಿಯುದಲ್ಲಿ ಎನ್ಡಿಆರ್ಎಫ್ನ 46 ತುಕಡಿಗಳನ್ನು ಸನ್ನದ್ಧ ಸ್ಥಿತಿಯಲ್ಲಿ ಇರಿಸಲಾಗಿದೆ. ತುರ್ತು ಸಂದರ್ಭ ಎದುರಾದರೆ ಗುಜರಾತ್ಗೆ ಧಾವಿಸುವ ರೀತಿಯಲ್ಲಿ ಇನ್ನಷ್ಟು ತುಕಡಿಗಳನ್ನು ಸನ್ನದ್ಧವಾಗಿಡಲಾಗಿದೆ’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮೂರು ಲಕ್ಷ ಜನರ ಸ್ಥಳಾಂತರ: ಚಂಡಮಾರುತ ಅಪ್ಪಳಿಸಲಿರುವ ಪ್ರದೇಶಗಳಲ್ಲಿ ನೆಲೆಸಿರುವ ಸುಮಾರು ಮೂರು ಲಕ್ಷ ಜನರನ್ನು ಸ್ಥಳಾಂತರಿಸಲು ಗುಜರಾತ್ ಹಾಗೂ ದಿಯು ಆಡಳಿತ ಮುಂದಾಗಿದೆ. ಬುಧವಾರದಿಂದಲೇ ಸ್ಥಳಾಂತರ ಕಾರ್ಯ ಆರಂಭವಾಗಲಿದೆ. ಈ ಮಾಹಿತಿಯನ್ನು ಉಪಯುಕ್ತವೆಂದು ನೀವು ತಿಳಿದುಕೊಂಡರೆ, ಈ ಚಿತ್ರದ ಅಡಿಯಲ್ಲಿ ಹಳದಿ ಹೆಬ್ಬೆರಳಿನ ಚಿನ್ಹೆ ಮೇಲೆ ಒತ್ತಿ ಮತ್ತು ಕೆಳಗೆ ನೀಡಿರುವ ಆಯ್ಕೆಗಳನ್ನು ಬಳಸಿಕೊಂಡು ನಿಮ್ಮ ರೈತ ಸ್ನೇಹಿತರೊಂದಿಗೆ ಈ ಮಾಹಿತಿ ಯನ್ನು ಹಂಚಿಕೊಳ್ಳಿ. ಮೂಲ :ಪ್ರಜಾವಾಣಿ ವಾರ್ತೆ
17
0