Looking for our company website?  
N
Nagesha.H.M
Karnataka
16 Sep 19, 02:08 PM

0
0
3
0
ટિપ્પણીઓ (2)
ಅಗ್ರೋಸ್ಟಾರ್ ಅಗ್ರಿ-ಡಾಕ್ಟರ
Karnataka
16 Sep 19, 02:34 PM

ನಮಸ್ತೆ ನಾಗೇಶ ಅವರೇ, ನಿಮಗೆ ಅಗ್ರೋಸ್ಟಾರ್ ಕುಟುಂಬದಲ್ಲಿ ಸ್ವಾಗತವಿದೆ. ನಿಮಗೆ ಹೊಲದ ಬಗ್ಗೆ ಯಾವುದೇ ರೀತಿಯ ಮಾಹಿತಿ, ಸಮಸ್ಯೆ, ಅನುಭವ, ಕೀಡೆ, ರೋಗ, ಫಸಲಿನ ಚಿತ್ರ ಮತ್ತು ಚಿತ್ರೀಕರಣ ನೀವು ಇಲ್ಲಿ ಪೋಸ್ಟ್ ಮಾಡಬಹುದು. ನಿಮ್ಮ ಅನುಭವದ ಮಾಹಿತಿ ಬೇರೆ ರೈತರಿಗೂ ಆಗಬಹುದು ಮತ್ತು ಇದರ ಜೊತೆಗೆ ಹೊಲದ ಯಾವುದೇ ರೀತಿಯ ಸಮಸ್ಯೆಯನ್ನು ಯೋಗ್ಯವಾದ ರೀತಿಯಲ್ಲಿ ನಾವು ನೀವು ಸೇರಿ ನಿಯಂತ್ರಣ ಮಾಡೋಣ. ಭವಿಷ್ಯದಲ್ಲಿಯೂ ನಿಮ್ಮ ಫಸಲಿನ ಫೋಟೋ ನಮ್ಮ ಆಪ್ ನಲ್ಲಿ ಪೋಸ್ಟ್ ಮಾಡುವ ಮೂಲಕ ಕೃಷಿ ಸಂಬಂಧಿತ ನಿಮ್ಮ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದಾಗಿದೆ. ಧನ್ಯವಾದಗಳು. ಅಗ್ರಿ ಡಾ. ಕುಂಬಾರ 

0
0
M
Maruti G R
Karnataka
16 Sep 19, 02:44 PM

Kabbu belle

0
0
ટિપ્પણીઓ (1)
ಅಗ್ರೋಸ್ಟಾರ್ ಅಗ್ರಿ-ಡಾಕ್ಟರ
Karnataka
16 Sep 19, 02:50 PM

ನಮಸ್ತೆ ಮಾರುತಿ ಅವರೇ, ನಿಮಗೆ ಅಗ್ರೋಸ್ಟಾರ್ ಕುಟುಂಬದಲ್ಲಿ ಸ್ವಾಗತವಿದೆ. ಕಬ್ಬನ್ನು ಸಾಮಾನ್ಯವಾಗಿ ಕಪ್ಪು ಮಣ್ಣುಗಳಲ್ಲಿ ಬೆಳೆಯಬಹುದಾಗಿದೆ. ನಾಟಿ ಸಮಯ: ಜೂನ್-ಜುಲೈ, ಅಕ್ಟೋಬರ್-ನವೆಂಬರ್, ಜನವರಿ-ಫೆಬ್ರವರಿ. ತಳಿಗಳು: ಸಿಓಸಿ ೬೭೧, ಸಿಓ- ೯೪೦೧೨, ಸಿಓ- ೮೬೦೩೨, ಎನ್.ಎಸ್.ಕೆ- ೦೪೪, ಎನ್.ಎಸ್.ಕೆ- ೬೩೨ ಮುಂತಾದವುಗಳು. ನಾಟಿಗೆ ಮುನ್ನ ಎಕರೆಗೆ ೧೦ ಟನ್ ಕೊಟ್ಟಿಗೆ ಗೊಬ್ಬರ, ಸಾರಜನಕ ೧೦೦ ಕೆ.ಜಿ., ರಂಜಕ ೩೦ ಕೆ.ಜಿ. ಮತ್ತು ಪೊಟ್ಯಾಷ್ ೭೫ ಕೆ.ಜಿ. ಕೊಡಬೇಕು. ೧೦ ಕೆ.ಜಿ. ಸಾರಜನಕ ಮತ್ತು ಪೂರ್ಣ ಪ್ರಮಾಣದ ರಂಜಕ ಮತ್ತು ಪೊಟ್ಯಾಷ್ ನಾಟಿ ಮಾಡುವಾಗ, ೨೦ ಕೆ.ಜಿ. ಸಾರಜನಕವನ್ನು ೬ ನೇ ವಾರಕ್ಕೆ, ೩೦ ಕೆಜಿ ಸಾರಜನಕವನ್ನು ೧೦ ನೇ ವಾರಕ್ಕೆ ಮತ್ತು ಉಳಿದ ೪೦ ಕೆ.ಜಿ. ಸಾರಜನಕವನ್ನು ಬೋದು ಒಡೆಯುವಾಗ ಕೊಡಬೇಕು. ಕೆಂಪು ಮಣ್ಣು ಮತ್ತು ನೀರಿನ ಕೊರತೆಯಿದ್ದಲ್ಲಿ ಗುಣಿ ನಾಟಿ ಪದ್ಧತಿ ಲಾಭಾದಾಯಕ. ೧ ಮೀ. ಉದ್ದ, ೧ ಮೀ. ಅಗಲ ಮತ್ತು ೪೫ ಸೆಂ.ಮೀ. ಆಳದ ಗುಣಿಗಳನ್ನು ತೆಗೆಯಬೇಕು. ಗುಣಿಗಳು ಸಾಲಿನಿಂದ ಸಾಲಿಗೆ ೯೦ ಸೆಂ.ಮೀ. ಹಾಗು ಗುಣಿಯಿಂದ ಗುಣಿಗೆ ೪೫ ಸೆಂ.ಮೀ. ಅಂತರದಲ್ಲಿರಬೇಕು. ಗುಣಿಯಲ್ಲಿ ೧೫ ಸೆಂ.ಮೀ. ವರೆಗೆ ಮಣ್ಣು ಹಾಕಿ ನಂತರ ೧೫ ಸೆಂ.ಮೀ. ಹಾಗು ೪ ಸೆಂ.ಮೀ. ಕಾಂಪೋಸ್ಟ್, ಹಸಿರೆಲೆ ಹೊಬ್ಬರ ಗಳನ್ನೂ ಹಾಕಬೇಕು. ಇನ್ನುಳಿದ ೧೫ ಸೆಂ ಮೀ ನಲ್ಲಿ ಯೂರಿಯ, ಸೂಪರ್ ಫಾಸ್ಫೆಟ್ ಮತ್ತು ಎಂ.ಓ.ಪಿ ಹಾಕಬೇಕು. ಒಂದು ಗುಣಿಯಲ್ಲಿ ೨ ಕಣ್ಣುಳ್ಳ ೨೦ ಬೀಜಗಳನ್ನು ಬಳಸಬೇಕು. ೭ ದಿನಗಳಿಗೊಮ್ಮೆ ನೀರು ಕಟ್ಟಬೇಕು. ಭವಿಷ್ಯದಲ್ಲಿಯೂ ನಿಮ್ಮ ಫಸಲಿನ ಫೋಟೋ ನಮ್ಮ ಆಪ್ ನಲ್ಲಿ ಪೋಸ್ಟ್ ಮಾಡುವ ಮೂಲಕ ಕೃಷಿ ಸಂಬಂಧಿತ ನಿಮ್ಮ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದಾಗಿದೆ. ಧನ್ಯವಾದಗಳು. - ಅಗ್ರಿ ಡಾ. ಚವ್ಹಾಣ

0
0